ETV Bharat / state

ಕಲಬುರಗಿಯಲ್ಲಿ ಇಂದು ಕೊರೊನಾಗೆ ಮತ್ತಿಬ್ಬರು ಬಲಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದೆ. ಇಂದು ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

Two deaths due to corona in Kalaburagi: Death toll rises to 13
ಕಲಬುರಗಿಯಲ್ಲಿ ಇಂದು ಕೊರೊನಾಕ್ಕೆ ಮತ್ತಿಬ್ಬರು ಬಲಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ
author img

By

Published : Jun 24, 2020, 8:05 PM IST

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದ್ದು, ಸೋಂಕಿಗೆ ಇಂದು ಇಬ್ಬರು ಬಲಿಯಾಗಿದ್ದಾರೆ.

ಸಾವನ್ನಪ್ಪಿದ 78 ವರ್ಷದ ವೃದ್ಧ ಹಾಗೂ 55 ವರ್ಷದ ವ್ಯಕ್ತಿ ಇಬ್ಬರೂ ಕೂಡ ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಇಬ್ಬರ ಸಾವಿನಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 22 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರು ಮಕ್ಕಳು, 8 ಮಹಿಳೆಯರು, ಎಂಟು ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಆರು ಸೋಂಕಿತರ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ಇಬ್ಬರು ಕಂಟೈನ್​ಮೆಂಟ್ ಝೋನ್​​ನಲ್ಲಿದ್ದವರಾದರೆ, ಓರ್ವ ತೆಲಂಗಾಣದಿಂದ ವಾಪಸಾದ ವಲಸಿಗ ಹಾಗೂ ಉಳಿದವರು ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1254ಕ್ಕೆ ಏರಿದೆ. ಜಿಲ್ಲೆಯಲ್ಲಿ‌ ಮತ್ತೆ 50 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.