ಕಲಬುರಗಿ: ನಗರದಲ್ಲಿ ಹೆಚ್ಚಾಗಿರುವ ಸಂಚಾರ ದಟ್ಟಣೆ ತಪ್ಪಿಸಲು ಖುದ್ದು ಕಲಬುರಗಿ ನಗರದ ಪೊಲೀಸ್ ಆಯುಕ್ತ ವೈ.ಎಸ್. ರವಿಕುಮಾರ್ ಫೀಲ್ಡಿಗಿಳಿದಿದ್ದಾರೆ. ನಗರದ ರೈಲ್ವೆ ಸ್ಟೇಷನ್, ಸೂಪರ್ ಮಾರ್ಕೆಟ್ ಸೇರಿ ಹಲವೆಡೆ ಸಿಟಿ ರೌಂಡ್ಸ್ ನಡೆಸಿದ ಕಮಿಷನರ್ ಸಂಚಾರ ನಿಯಂತ್ರಿಸಿದರು.
ಇತ್ತೀಚೆಗೆ ನಗರದಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಸಹಯೋಗದೊಂದಿಗೆ ರೈಲ್ವೆ ನಿಲ್ದಾಣದ ಬಳಿ ರಸ್ತೆ ಬಂದಿಯಲ್ಲಿ ಹಾಕಲಾದ ಅನಧಿಕೃತ ಪಾನಿಪೂರಿ, ಭಜ್ಜಿ, ಟೀ ಅಂಗಡಿಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅಡಚಣೆ ಮಾಡದಂತೆ ವ್ಯಾಪಾರಿಗಳಿಗೆ ವಾರ್ನಿಂಗ್ ಕೊಟ್ಟರು.
ಇನ್ನು ರಸ್ತೆ ಮೇಲೆ ಬೇಕಾಬಿಟ್ಟಿ ನಿಲ್ಲಿಸುವ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲೇ ಪಾರ್ಕ್ ಮಾಡುವಂತೆ ಸೂಚಿಸಿದರು. ಆಟೋ ಚಾಲಕರಿಗೂ ಸಹ ರಸ್ತೆ ಮಧ್ಯದಲ್ಲಿ ಎಲ್ಲದರಲ್ಲಿ ಆಟೋಗೆ ಬ್ರೇಕ್ ಹಾಕಿ ಪ್ಯಾಸೆಂಜರ್ ಹತ್ತಿಸುವಂತಿಲ್ಲ. ರಸ್ತೆ ಬದೀಯಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ರೆ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ, ಸಂಚಾರಿ ಪೊಲೀಸ್ ವಿಭಾಗದ ಎಸಿಪಿ ಸುಧಾ ಆದಿ, ಸಿಪಿಐಗಳಾದ ಶಾಂತಿನಾಥ, ಗಂಗಾಧರ ಹೀರೆಮಠ್ ಸೇರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಹುಬ್ಬಳ್ಳಿ: ಪರಿಹಾರ ನೀಡದ ಸಾರಿಗೆ ಸಂಸ್ಥೆ.. ಐರಾವತ ಬಸ್ ಜಪ್ತಿ !