ಕಲಬುರಗಿ: ವಿದ್ಯಾರ್ಥಿ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಫ್ಜಲ್ಪುರ ತಾಲೂಕಿನ ಚಿಣಮಗೇರಾ ಬಳಿ ನಡೆದಿದೆ.
ಗಂಗಾಧರ ಕೇಮಲಿಂಗ (14) ಮೃತ ವಿದ್ಯಾರ್ಥಿ. ಗಂಗಾಧರ ಕಲಬುರಗಿ ತಾಲೂಕಿನ ಉಪಳಾಂವ್ ಗ್ರಾಮದವನು. ಚಿಣಮಗೇರ ವಸತಿ ನಿಲಯದಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನು, ಘಟನೆ ನಡೆಯುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಗಾಣಗಾಪುರ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.