ETV Bharat / state

ತಾಂಡಾ‌ ನಿವಾಸಿಗಳಿಗೆ‌ ದಾಖಲೆ ಪ್ರಮಾಣದಲ್ಲಿ ಹಕ್ಕು ಪತ್ರ: ಡಿಸಿ‌ ಯಶವಂತ ಗುರುಕರ್ ಕಾರ್ಯಕ್ಕೆ ಸಭಾಪತಿ ಪ್ರಶಂಸೆ - prime minister programmers in karnataka

ವರ್ಲ್ಡ್​ ಬುಕ್ ಆಫ್ ರೆಕಾರ್ಡ್ ನಿಂದ ಪ್ರಮಾಣಪತ್ರ ಪಡೆದಿರುವ ಐತಿಹಾಸಿಕ ಕಾರ್ಯಕ್ರಮ - ಪ್ರಧಾನಮಂತ್ರಿಗಳಿಂದ ಹಕ್ಕು ಪತ್ರ ವಿತರಣೆ - ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ ವಿಧಾನ ಪರಿಷತ್​ ಸಭಾಪತಿ

speaker-praises-dc-yashwant-gurukars-work
ತಾಂಡಾ‌ ನಿವಾಸಿಗಳಿಗೆ‌ ದಾಖಲೆ ಪ್ರಮಾಣದಲ್ಲಿ ಹಕ್ಕು ಪತ್ರ: ಡಿ.ಸಿ‌ ಯಶವಂತ ಗುರುಕರ್ ಕಾರ್ಯಕ್ಕೆ ಸಭಾಪತಿ ಪ್ರಶಂಸೆ
author img

By

Published : Jan 21, 2023, 10:33 PM IST

ಕಲಬುರಗಿ: ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 52,072 ತಾಂಡಾ ನಿವಾಸಿಗಳಿಗೆ ಏಕಕಾಲದಲ್ಲಿ ಪ್ರಧಾನಮಂತ್ರಿಗಳಿಂದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಡಿ.ಸಿ. ಅವರಿಗೆ ಪ್ರಶಂಸನಾ ಪತ್ರ ನೀಡಿದ್ದಾರೆ.

1993ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಕ್ಕೆ ಶಿಫಾರಸ್ಸು ಮಾಡಲಾಗುತ್ತಿದ್ದರು, ಇದೀಗ ಅದು ಸಾಕಾರವಾಗಿದೆ. ಇದು ತಮಗೆ ಸಂತೋಷವನ್ನುಂಟು ಮಾಡಿದೆ‌ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಿಂದ ಪ್ರಮಾಣಪತ್ರ ಪಡೆದಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿ ಒಂದೇ ದಿನ ಅವರೆಲ್ಲರಿಗೂ ಪ್ರಧಾನಮಂತ್ರಿಗಳಿಂದ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮ ಅಚ್ಚುಕಟ್ಟಾಗಿ, ತುಂಬಾ ವ್ಯವಸ್ಥಿತವಾಗಿ ಆಯೋಜಿಸಿ ಅಲೆಮಾರಿ ಸಮುದಾಯಕ್ಕೆ ನೆಮ್ಮದಿಯ ಬದುಕು ನೀಡಿ ಇತರರಿಗೆ ಮಾದರಿಯಾಗಿ ಆಡಳಿತ ನೀಡಿದಕ್ಕಾಗಿ ಬಸವರಾಜ ಹೊರಟ್ಟಿ ಅವರು ತಮ್ಮ ಪತ್ರದಲ್ಲಿ ಡಿ.ಸಿ. ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಡಿಸಿ‌ ಯಶವಂತ ಗುರುಕರ್ ಕಾರ್ಯಕ್ಕೆ ಸಭಾಪತಿ ಪ್ರಶಂಸೆ

ಜನ ಸಾಮಾನ್ಯರ‌ ಬದುಕು ಹಸನಗೊಳಿಸಲು ಇದೇ ರೀತಿಯಲ್ಲಿ ಮುಂದಿನ‌ ಸೇವಾ ಅವಧಿಯಲ್ಲಿಯೂ ವಿನೂತನ ಕಾರ್ಯದಲ್ಲಿ ಸಫಲತೆ ಕಾಣಬೇಕು. ಮುಂದಿನ ತಮ್ಮ ವೃತ್ತಿ ಜೀವನ ಯಶಸ್ವಿಯಿಂದ ಕೂಡಿರಲಿ ಎಂದು ಬಸವರಾಜ ಹೊರಟ್ಟಿ ಜಿಲ್ಲಾಧಿಕಾರಿಗಳಿಗೆ ಹಾರೈಸಿದ್ದಾರೆ.

ವಿಶ್ವ ದಾಖಲೆ ಪುಸ್ತಕ ಸೇರಿದ ಕಾರ್ಯಕ್ರಮ: ತಾಂಡಾ, ಹಟ್ಟಿ, ಇತ್ಯಾದಿ ದಾಖಲೆರಹಿತ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯ ಐತಿಹಾಸಿಕ ಕಾರ್ಯಕ್ರಮ ಕಲಬುರಗಿ ಜಿಲ್ಲೆ ಸೇಡಂ ತಾಲೂಕು ಮಳಖೇಡನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಿ ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಿದರು. ಇದೇ ವೇಳೆ ಏಕಕಾಲಕ್ಕೆ 5 ಜಿಲ್ಲೆಯ 342 ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿತ್ತು.

ಇತಿಹಾಸದಲ್ಲಿ ಹಿಂದೆಂದು ಇಷ್ಟೋಂದು ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ನೀಡಿರಲಿಲ್ಲ. ಹೀಗಾಗಿ ಜಿಲ್ಲಾಢಳಿತದ ಕೋರಿಕೆ ಮೇರೆಗೆ ಆಗಮಿಸಿದ 'ವರ್ಲ್ಡ್ ಬುಕ್ ಆಫ್ ರೆಕಾರ್ಡ್' ತಂಡ ದಾಖಲೆಗಳನ್ನು ಪರೀಶಿಲನೆ ಮಾಡಿ, ಖುದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಾಖಲೀಕರಣ ಮಾಡಿಕೊಂಡು ಗಿನ್ನಿಸ್ ದಾಖಲೆ ಎಂದು ಘೋಷಿಸಿದ್ದರು.

ಐತಿಹಾಸಿಕ ಕಾರ್ಯಕ್ರಮ 'ವರ್ಲ್ಡ್ ಬುಕ್ ಆಫ್ ರಿಕಾರ್ಡ್' ಪುಸ್ತಕದ ಪುಟ ಸೇರಿದೆ. ಅಂದು ಕಾರ್ಯಕ್ರಮ ವೇದಿಕೆ‌ ಮೇಲೆಯೇ 'ವರ್ಲ್ಡ್ ಬುಕ್ ಆಫ್ ರೆಕಾರ್ಡ್' ಕರ್ನಾಟಕ ತಂಡದ ಉಪಾಧ್ಯಕ್ಷೆ ವಸಂತ ಕವಿತಾ, ಕೆ.ಸಿ‌. ರೆಡ್ಡಿ, ಕಂದಾಯ ಸಚಿವ ಆರ್. ಅಶೋಕ ಹಾಗು ಡಿಸಿ ಯಶವಂತ ಗುರುಕರ್ ಅವರಿಗೆ ಪ್ರೋವಿಜನಲ್ ಪ್ರಮಾಣ ಪತ್ರ‌ ಪ್ರಧಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಸಾಂಪ್ರದಾಯಕ ಉಡುಪಿನೊಂದಿಗೆ ತಾಂಡಾ ನಿವಾಸಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಏಕಕಾಲದಲ್ಲಿಯೇ ಹಕ್ಕುಪತ್ರ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಹಣ ಕೊಟ್ಟು ಕರೆಂಟ್​​ ಬೇಕು ಎಂದಾಗ ಕೊಡದೇ ಈಗ ಪುಕ್ಕಟ್ಟೆ ಭರವಸೆ ಕೊಡುತ್ತಿದ್ದಾರೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.