ಕಲಬುರಗಿ: ಕೊರೊನಾ ವೈರಸ್ ಸೋಕಿನಿಂದ ಜಿಲ್ಲೆ ತತ್ತರಿಸಿ ಹೋಗಿದೆ. ಜನರೊಂದಿಗೆ ನಿಲ್ಲಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಾಪತ್ತೆ ಆಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಭಯಾನಕ ಕೊರೊನಾಗೆ ಜಿಲ್ಲೆಯಲ್ಲಿ ಓರ್ವ ಮೃತಪಟ್ಟು ಇಬ್ಬರು ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವ ಗೊವಿಂದ ಕಾರಜೋಳ ನಾಪತ್ತೆಯಾಗಿದ್ದಾರೆ. ತಮಗೆ ಜಿಲ್ಲೆಗೆ ಬರಲು ಭಯ ಆಗ್ತಿದೆ ಎಂಬ ಹೇಳಿಕೆ ನೀಡಿರುವುದು, ನಾಗರೀಕ ಸಮಾಜ ತೆಲೆ ತಗ್ಗಿಸುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೊರೊನಾಗೆ ನಲುಗಿ ಹೋಗಿರುವ ಜನರೊಂದಿಗೆ ನಿಲ್ಲಲು, ವೈರಸ್ ತಡೆಗಟ್ಟಲು ಯೋಜನೆ ರೂಪಿಸಲು ಖಡಕ್ ಸೂಚನೆ ನೀಡಿ ಉಸ್ತುವಾರಿ ಸಚಿವ ಕಾರಜೋಳ ಅವರನ್ನು ಜಿಲ್ಲೆಗೆ ಕಳಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸ್ವಾಮೀಜಿ ಆಗ್ರಹಿಸಿದರು.