ಸೇಡಂ (ಕಲಬುರಗಿ): ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ನೀರಿನ ಪ್ರಮಾಣ ಕಡಿಮೆಯಾಗಿ, ಮುಳುಗಡೆಯಾಗಿದ್ದ ಸೇತುವೆ ಗೋಚರಿಸುತ್ತಿದೆ. ಆದರೆ ರಸ್ತೆಯ ಮೇಲೆ ಕೆಸರು ತುಂಬಿಕೊಂಡಿದ್ದು, ಕೆಲವೆಡೆ ರಸ್ತೆ ಕೊಚ್ಚಿಕೊಂಡು ಹೋಗಿದೆ.
ಇದೀಗ ಸೇತುವೆ ಮೇಲೆ ಸಂಚಾರಕ್ಕೆ ಕೂಡ ಅನುವು ಮಾಡಿಕೊಡಲಾಗಿದ್ದು, ನಿಧಾನವಾಗಿ ವಾಹನ ಸಂಚಾರ ಯಥಾಸ್ಥಿತಿಗೆ ತಲುಪುತ್ತಿದೆ. ಇನ್ನು ನದಿ ತಟದಲ್ಲಿರುವ ಉತ್ತರಾಧಿ ಮಠ ಸಹ ಜಲಾವೃತವಾಗಿತ್ತು. ಇದೀಗ ನೀರು ಹೊರಹೋಗಿದ್ದು. ಮಠದೊಳಗೆ ಕೆಸರು ತುಂಬಿಕೊಂಡಿದೆ. ಈ ಹಿನ್ನೆಲೆ ಮಠದ ಸಿಬ್ಬಂದಿ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಸಟಪಟನಹಳ್ಳಿ, ಸೂರವಾರ, ಹೆಡ್ಡಳ್ಳಿ ಹಾಗೂ ಮಳಖೇಡ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದವಸ ಧಾನ್ಯಗಳು ನೀರು ಪಾಲಾಗಿವೆ. ಇದರಿಂದ ಹೊತ್ತಿನ ಊಟಕ್ಕೂ ಸಹ ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.