ಕಲಬುರಗಿ: ರಾಜ್ಯದ ಇತಿಹಾಸವನ್ನು ಪಠ್ಯಪುಸ್ತಕಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕಲಬುರಗಿಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು, ಕರ್ನಾಟಕ ಏಕೀಕರಣವಾಗಿ 75 ವರ್ಷಗಳು ಕಳೆದರೂ ರಾಜ್ಯದ ಇತಿಹಾಸವಿನ್ನೂ ಪಠ್ಯಪುಸ್ತಕಗಳಲ್ಲಿ ಕನ್ನಡೀಕರಣವಾಗಿಲ್ಲ ಎಂದು ದೂರಿದರು.
ರಾಜ್ಯದ ರಾಜವಂಶಸ್ಥರು, ಇತಿಹಾಸ ಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣಕ್ಕಾಗಿ ದುಡಿದ ಮಹನೀಯರು ಹಾಗೂ ಕಲೆ-ಸಾಹಿತ್ಯ ವಾಸ್ತುಶಿಲ್ಪದ ಕುರಿತು ಮಕ್ಕಳಲ್ಲಿ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ರಾಜ್ಯದ ಇತಿಹಾಸವನ್ನು ಪಠ್ಯಪುಸ್ತಕಕ್ಕೆ ಸೇರ್ಪಡೆ ಮಾಡುವ ಮೂಲಕ ಮಕ್ಕಳಿಗೆ ರಾಜ್ಯದ ಇತಿಹಾಸ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.