ETV Bharat / state

ಮಾನ್ಪಡೆ ಸಾವಿನ ಕುರಿತು ಸದಾನಂದಗೌಡರ ಹೇಳಿಕೆ‌ ನಾಚಿಕೆಗೇಡಿತನದ್ದು: ಪ್ರಿಯಾಂಕ್ ಖರ್ಗೆ - Priyank Kharge statement against Union Minister Sadananda Gowda

ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಮಸೂದೆಗಳ ವಿರುದ್ಧ ಮಾನ್ಪಡೆಯವರು ಹೋರಾಡುತ್ತಲೇ ಬಂದಿದ್ದರು. ಆದರೆ ಈಗ ಅವರ ಸಾವಿನ ಕುರಿತಾಗಿ ಕೇಂದ್ರ ಸಚಿವರ ಹೇಳಿಕೆ ನಾಚಿಕೆಗೇಡಿನದ್ದು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧ ಪ್ರಿಯಾಂಕ್ ಖರ್ಗೆ ಹೇಳಿಕೆ

author img

By

Published : Oct 28, 2020, 11:12 AM IST

ಕಲಬುರಗಿ: ಜನಪರ-ರೈತಪರ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿನ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಹೇಳಿಕೆ‌ ನಾಚಿಕೆಗೇಡಿತನದ್ದು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಮಸೂದೆಗಳ ವಿರುದ್ಧ ಮಾನ್ಪಡೆಯವರು ಹೋರಾಡುತ್ತಲೇ ಬಂದಿದ್ದರು. ಕೊರೊನಾ‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಲಜ್ಜೆಗೆಟ್ಟ ಬಿಜೆಪಿ ಸರ್ಕಾರ ರೈತ ವಿರೋಧಿ ಮಸೂದೆ ಜಾರಿಗೆ ತಂದಾಗ ಮಾನ್ಪಡೆಯವರು ಹೋರಾಟಕ್ಕಿಳಿದಿದ್ದರು. ಆದರೆ ಈಗ ಅವರ ಸಾವಿನ ಕುರಿತಾಗಿ ಕೇಂದ್ರ ಸಚಿವರ ಹೇಳಿಕೆ ನಾಚಿಕೆಗೇಡಿತನದ್ದು ಎಂದು ಕಿಡಿಕಾರಿದ್ದಾರೆ.

  • Disgraceful of Sri @DVSadanandGowda to comment on Sri. Manpade’s death. He fought against your of anti farmers bill that @BJP4India shamelessly bought in during a pandemic. What has been @BJP4Karnataka contribution for KK region? Why didn’t you visit us?https://t.co/wJCP8OPzZz

    — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 28, 2020 " class="align-text-top noRightClick twitterSection" data=" ">

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಿಜೆಪಿ‌ ಸರ್ಕಾರ‌ ಕೊಡುಗೆ ಏನು ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ನೆರೆ ಹಾವಳಿ ಸಂದರ್ಭದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಯಾಕೆ ಭೇಟಿ ನೀಡಲಿಲ್ಲ ಎಂದು ಸದಾನಂದ ಗೌಡರನ್ನು ಕುಟುಕಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.