ಕಲಬುರಗಿ: ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ತಮ್ಮ ಪತ್ನಿ ಶೃತಿ ಖರ್ಗೆ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಗುಂಡಗುರ್ತಿ ಗ್ರಾಮದ ಬೂತ್ ನಂಬರ್ 26ರಲ್ಲಿ ಖರ್ಗೆ ದಂಪತಿ ತಮ್ಮ ಮತ ಹಕ್ಕು ಚಲಾಯಿಸಿದರು.
-
Polling stopped in Booth #178 Chamnur village as the Presiding Officer is prompting/influencing people to vote for BJP.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 10, 2023 " class="align-text-top noRightClick twitterSection" data="
">Polling stopped in Booth #178 Chamnur village as the Presiding Officer is prompting/influencing people to vote for BJP.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 10, 2023Polling stopped in Booth #178 Chamnur village as the Presiding Officer is prompting/influencing people to vote for BJP.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 10, 2023
ಹಾಲಿ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶೃತಿ ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ದೆಹಲಿಯಿಂದ ಶೃತಿ ವಿಮಾನದ ಮೂಲಕ ಆಗಮಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಇಬ್ಬರು ಪುತ್ರರು ಕೂಡ ಜೊತೆಗಿದ್ದರು.
-
ಚಿಂಚೋಳಿ ವಿಧಾನಸಭಾ ಚುನಾವಣೆ ನಿಮಿತ್ಯ ಇಂದು ಕಾಳಗಿ ತಾಲೂಕಿನ ಬೇಡೆಸೂರ್ (ಎಮ್) ತಾಂಡಾದಲ್ಲಿ ನಾನು ಮತಗಟ್ಟೆಗೆ ತೆರಳಿ ಮತಚಲಾಯಿಸಲಾಯಿತು.
— Dr. Umesh G Jadhav MPLS (@UmeshJadhav_BJP) May 10, 2023 " class="align-text-top noRightClick twitterSection" data="
ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ.#karnatakaassemblyelection2023 pic.twitter.com/G6eLWIsMTd
">ಚಿಂಚೋಳಿ ವಿಧಾನಸಭಾ ಚುನಾವಣೆ ನಿಮಿತ್ಯ ಇಂದು ಕಾಳಗಿ ತಾಲೂಕಿನ ಬೇಡೆಸೂರ್ (ಎಮ್) ತಾಂಡಾದಲ್ಲಿ ನಾನು ಮತಗಟ್ಟೆಗೆ ತೆರಳಿ ಮತಚಲಾಯಿಸಲಾಯಿತು.
— Dr. Umesh G Jadhav MPLS (@UmeshJadhav_BJP) May 10, 2023
ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ.#karnatakaassemblyelection2023 pic.twitter.com/G6eLWIsMTdಚಿಂಚೋಳಿ ವಿಧಾನಸಭಾ ಚುನಾವಣೆ ನಿಮಿತ್ಯ ಇಂದು ಕಾಳಗಿ ತಾಲೂಕಿನ ಬೇಡೆಸೂರ್ (ಎಮ್) ತಾಂಡಾದಲ್ಲಿ ನಾನು ಮತಗಟ್ಟೆಗೆ ತೆರಳಿ ಮತಚಲಾಯಿಸಲಾಯಿತು.
— Dr. Umesh G Jadhav MPLS (@UmeshJadhav_BJP) May 10, 2023
ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ.#karnatakaassemblyelection2023 pic.twitter.com/G6eLWIsMTd
ಅಧಿಕಾರಿ ವಿರುದ್ಧ ಆರೋಪ: ಮತ್ತೊಂದೆಡೆ, ಚಿಮನೂರ ಗ್ರಾಮದಲ್ಲಿ ಅಧಿಕಾರಿಯೊಬ್ಬರು ಬಿಜೆಪಿ ಮತ ಹಾಕುವಂತೆ ಜನರಿಗೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ಧಾರೆ. ಇದರಿಂದ ಬೂತ್ ನಂಬರ್ 178ರಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜಕೀಯ ನಾಯಕರಿಂದ ಮತದಾನ; ಶೆಟ್ಟರ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಂಗಳ ಅಂಗಡಿ
ಸಂಸದ ಜಾಧವ್ ಮತದಾನ: ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಗಿ ತಾಲೂಕಿನ ಬೇಡೆಸೂರ್ (ಎಂ) ತಾಂಡಾದಲ್ಲಿ ಸಂಸದ ಡಾ.ಉಮೇಶ್ ಜಾಧವ್ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನಂತರ ಟ್ವೀಟ್ ಮಾಡಿರುವ ಅವರು, ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ ಎಂದು ಹೇಳಿದ್ದಾರೆ. ಚಿಂಚೋಳಿ ಕ್ಷೇತ್ರದಿಂದ ಪುತ್ರ ಡಾ. ಅವಿನಾಶ್ ಜಾಧವ್ ಕಣದಲ್ಲಿದ್ದಾರೆ.
ಇದನ್ನೂ ಓದಿ: 'ಪ್ರಜಾಪ್ರಭುತ್ವದ ಗೆಲುವಿಗೆ ಮತ ಹಾಕಿ': ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವೋಟಿಂಗ್