ETV Bharat / state

ಲಿಂಗಾಯತ ಸಮಾಜಕ್ಕೆ ಸಿಎಂ ಹುದ್ದೆ ನೀಡುವಂತೆ ಒತ್ತಾಯ

ಕಾಂಗ್ರೆಸ್​ ಪಕ್ಷದಲ್ಲಿ ಲಿಂಗಾಯತ ಸಿಎಂ ಮಾಡಬೇಕು ಎಂದು ರಾಜ್ಯ ಲಿಂಗಾಯತ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ರಾಜ್ಯ ಲಿಂಗಾಯತ ಸಮಾಜದ ಮುಖಂಡ ಅರುಣಕುಮಾರ ಪಾಟೀಲ್

author img

By

Published : May 15, 2023, 3:19 PM IST

Updated : May 15, 2023, 3:31 PM IST

ಕಾಂಗ್ರೆಸ್​ ಪಕ್ಷದಲ್ಲಿ ಲಿಂಗಾಯತ ಸಿಎಂ ಮಾಡುವಂತೆ ಒತ್ತಾಯ

ಕಲಬುರಗಿ : ರಾಜ್ಯದಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದರು ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಗೆ ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಲಿಂಗಾಯತ ನಾಯಕರನ್ನು ಸಿಎಂ ಮಾಡಬೇಕು ಎನ್ನುವ ಕೂಗು ಕೇಳಿ ಬರಲು ಆರಂಭಿಸಿದೆ.

ಇದನ್ನೂ ಓದಿ : ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರದ ಒಂದು ಸಾಲಿನ ನಿರ್ಣಯವನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ: ಸುರ್ಜೇವಾಲ

ರಾಜ್ಯದಲ್ಲಿ ಕಾಂಗ್ರೆಸ್​ಗೆ ಲಿಂಗಾಯತ ಸಮುದಾಯ ಬೆಂಬಲಿಸಿದೆ. 39 ಜನ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಹೀಗಾಗಿ ಲಿಂಗಾಯತ ಮುಖಂಡರಿಗೆ ಸಿಎಂ‌ ಹುದ್ದೆ ನೀಡುವಂತೆ ರಾಜ್ಯ ಲಿಂಗಾಯತ ಸಮಾಜದ ಮುಖಂಡ ಅರುಣ್ ಕುಮಾರ್ ಪಾಟೀಲ್ ಒತ್ತಾಯಿಸಿದ್ದಾರೆ. ಲಿಂಗಾಯತ ಸಮಾಜದ ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಎಂ ಬಿ ಪಾಟೀಲ್ ಸೇರಿ ಹಲವರು ಹಿರಿಯ ಮುಖಂಡರಿದ್ದಾರೆ. ಅರ್ಹ ಲಿಂಗಾಯತ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಶೀಘ್ರದಲ್ಲೇ ಹೊಸ ಸಿಎಂ ಘೋಷಣೆ: ಸುರ್ಜೇವಾಲಾ

ಈ ಬಾರಿ ಕಾಂಗ್ರೆಸ್​ಗೆ ಬೆಂಬಲ‌ ನೀಡುವ ಮೂಲಕ ರಾಜ್ಯದಲ್ಲಿ ಬಹುಮತ ನೀಡಿದ್ದೇವೆ. ಕಾಂಗ್ರೆಸ್​ನಲ್ಲಿ 1989 ರಲ್ಲಿ ವೀರೇಂದ್ರ ಪಾಟೀಲ್ ಸಿಎಂ ಆದ ಬಳಿಕ ಮತ್ತೆ ಲಿಂಗಾಯತರಿಗೆ ಆ ಸ್ಥಾನ ನೀಡಿಲ್ಲ. ಈ ಬಾರಿಯಾದರು ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಲಿಂಗಾಯತರನ್ನು ಕಡೆಗಣಿಸಿದರೇ ಹೋರಾಟದ ಎಚ್ಚರಿಕೆಯನ್ನು ಕೂಡ ಅರುಣಕುಮಾರ್​ ಪಾಟೀಲ್​ ರವಾನಿಸಿದ್ದಾರೆ.

ಇದನ್ನೂ ಓದಿ : 135 ಸ್ಥಾನಗಳೇ ನನಗೆ ರಾಜ್ಯದ ಜನರು ನೀಡಿದ ಜನ್ಮದಿನದ ಬಹುದೊಡ್ಡ ಗಿಫ್ಟ್​: ಡಿ.ಕೆ.ಶಿವಕುಮಾರ್​

Last Updated : May 15, 2023, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.