ETV Bharat / state

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ತವರಿನಲ್ಲಿ ಪ್ರಧಾನಿ ಮೋದಿ ಹವಾ: ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್ - ಬಂಜಾರ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸುಮಾರು 10,500 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭದ್ರಕೋಟೆಗೆ ಪ್ರಧಾನಿ ಲಗ್ಗೆ ಇಡುತ್ತಿದ್ದಾರೆ.

modi
ಮೋದಿ
author img

By

Published : Jan 19, 2023, 8:23 AM IST

Updated : Jan 19, 2023, 8:33 AM IST

ಕಲಬುರಗಿಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ‌ ಆಗಮಿಸುತ್ತಿದ್ದು ರಾಜಕೀಯ ರಂಗದಲ್ಲಿ‌ ಸಂಚಲನ ಮೂಡಿಸಿದೆ.‌ ಒಂದೇ ತಿಂಗಳಿನಲ್ಲಿ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ 'ನಮೋ' ಸ್ವಾಗತಕ್ಕೆ ರಾಜ್ಯ ಬಿಜೆಪಿ ಸಕಲ ತಯಾರಿ ಮಾಡಿಕೊಂಡಿದೆ. ಕಾಗಿಣಾ ನದಿ ತೀರದಲ್ಲಿರುವ ರಾಷ್ಟ್ರಕೂಟರ ರಾಜಧಾನಿ ಮಳಖೇಡ್ ಹಾಗೂ ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮಗಳು ಮೋದಿ ಸ್ವಾಗತಕ್ಕೆ‌ ಶೃಂಗಾರಗೊಂಡಿವೆ.

ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಯ 51 ಸಾವಿರ ತಾಂಡಾ, ಹಟ್ಟಿ ನಿವಾಸಿಗಳಿಗೆ ಅನುಕೂಲವಾಗಲೆಂದು ಹೊಸದಾಗಿ ಕಂದಾಯ ಗ್ರಾಮವೆಂದು ಘೋಷಿಸಿ ಹಕ್ಕು ಪತ್ರ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಮೋದಿ‌ ಮುನ್ನುಡಿ ಬರೆಯಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಭಾಗದಲ್ಲಿಯೇ ಬೃಹತ್ ಕಾರ್ಯಕ್ರಮ ನಡೆಸುವ ಮೂಲಕ ಕಾಂಗ್ರೆಸ್​ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಯೋಜನೆ ರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಬೃಹತ್ ಮಟ್ಟದ ಈ ಕಾರ್ಯಕ್ರಮಗಳು ಮುಂಬರುವ ಚುನಾವಣೆಗೆ ರಣಕಹಳೆ ಮೊಳಗಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದು ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ, ಮೊದಲು ಯಾದಗಿರಿ ಜಿಲ್ಲೆಯ ಕೊಡೆಕಲ್​ಗೆ ತೆರಳಿ ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಚೆನ್ನೈ-ಸೂರತ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ತದನಂತರ ಮಧ್ಯಾಹ್ನ 2 ಗಂಟೆಗೆ ಸೇಡಂ ಜಿಲ್ಲೆಯ ಮಳಖೇಡಗೆ ಆಗಮಿಸಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಪರಿವರ್ತನೆ ಮಾಡಿದ 51 ಸಾವಿರ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ 50 ಸಾವಿರ ಲಂಬಾಣಿ ಮಹಿಳೆಯರು: ಪ್ರಧಾನಿ ನರೇಂದ್ರ ಮೋದಿ ಅವರನ್ನು 50 ಸಾವಿರ ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ತಮ್ಮ ಕಲಾ ತಂಡಗಳಿಂದ ಸ್ವಾಗತಿಸಲಿದ್ದಾರೆ ಎಂದು ತಿಳಿದುಬಂದಿದೆ.‌ ಕಾರ್ಯಕ್ರಮಕ್ಕೆ ಒಂದು ಲಕ್ಷ ಯುವಕರು ಬೈಕ್ ರ‍್ಯಾಲಿ ಮೂಲಕ ಆಗಮಿಸಲಿದ್ದಾರೆ ಎಂದು ಸೇಡಂ ಶಾಸಕ‌ ರಾಜಕುಮಾರ್ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ 18 ಜನ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಮಳಖೇಡ್ ಹೊರವಲಯದಲ್ಲಿ 60 ಎಕರೆ ಜಮೀನಿ‌ನಲ್ಲಿ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಜರ್ಮನ್ ಮಾದರಿಯ ಟೆಂಟ್‍ ಹಾಕಲಾಗಿದೆ. ‌ಐದು ಕಡೆ ವಾಹನಗಳ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು‌ 3 ಲಕ್ಷ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ. ಹೆದ್ದಾರಿಯ ರಸ್ತೆ ಬದಲಾವಣೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆಗಾಗಿ 200 ಕೌಂಟರ್ ಸ್ಥಾಪಿಸಲಾಗಿದೆ. 600 ಬಾಣಸಿಗರು ಇರಲಿದ್ದಾರೆ. ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಊಚಿತವಾಗಿ ಕರೆತರಲು 2,500 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. 10 ಸಾವಿರ ನಾಲ್ಕು ಚಕ್ರದ ವಾಹನಗಳ ನಿಯೋಜನೆ ಮಾಡಲಾಗಿದೆ. ಪ್ರತಿ ಬಸ್‍ಗೆ ಮತ್ತು ಫಲಾನುಭವಿಗಳನ್ನು ನೋಡಿಕೊಳ್ಳಲು ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಯಾದಗಿರಿ: ಪ್ರಧಾನಿ ಮೋದಿ ಆಗಮನ ಹಿನ್ನೆಲೆ.. ಜಿಲ್ಲಾಡಳಿತದಿಂದ ಭರದ ಸಿದ್ಧತೆ

ಗಿನ್ನಿಸ್ ದಾಖಲೆ: 51 ಸಾವಿರ ಜನರಿಗೆ ಏಕಕಾಲಕ್ಕೆ ಹಕ್ಕು ಪತ್ರಗಳನ್ನು ವಿತರಿಸುವುದು ಗಿನ್ನಿಸ್​ ದಾಖಲೆ ಆಗಲಿದೆ. ಹಿಂದೆಂದೂ ಇಷ್ಟೊಂದು ಹಕ್ಕು ಪತ್ರಗಳನ್ನು ಏಕಕಾಲಕ್ಕೆ ವಿತರಿಸಿರುವ ಇತಿಹಾಸವಿಲ್ಲ. ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಗಿನ್ನಿಸ್ ದಾಖಲಾತಿ ಅಧಿಕಾರಿಗಳು ಭೇಟಿ ನೀಡಿದ್ದು, ಕಾರ್ಯಕ್ರಮದ ನಂತರ ಗಿನ್ನಿಸ್ ದಾಖಲೆಯ ಪ್ರಮಾಣಪತ್ರ ನೀಡಲಿದ್ದಾರೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬಿಗಿ ಪೊಲೀಸ್‌ ಬಂದೋಬಸ್ತ್: ಮಳಖೇಡದಲ್ಲಿ ನಡೆಯುವ ಮೋದಿ ಕಾರ್ಯಕ್ರಮಕ್ಕೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಲೋಕ್​ ಕುಮಾರ್, ಪ್ರಧಾನಿ ಅವರ ಬಂದೋಬಸ್ತ್ ನೇತೃತ್ವ ವಹಿಸಿದ್ದು, ಎಡಿಜಿಪಿ ಮತ್ತು ಕಲಬುರಗಿ ಐಜಿಪಿ ಅನುಪಮ್ ಅಗರವಾಲ್, ಬೆಳಗಾವಿ ಐಜಿಪಿ ಸತೀಶ್ ಕುಮಾರ್, ಕಲಬುರಗಿ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಬೀದರ್ ಎಸ್​ಪಿ ಕಿಶೋರ್​ ಬಾಬು ಸೇರಿದಂತೆ ಒಂಬತ್ತು ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 13 ಡಿಎಸ್​ಪಿ, 30 ಸಿಪಿಐ, 108 ಪಿಎಸ್ಐ, 16 ಕೆಎಸ್ಆರ್‌ಪಿ ತುಕಡಿ, 6 ಡಿಎಆರ್​ ತುಕಡಿಗಳು ಬಂದೋಬಸ್ತ್ ಸಲುವಾಗಿ ನಿಯೋಜನೆಗೊಂಡಿವೆ.

ಇದನ್ನೂ ಓದಿ: ಯಾದಗಿರಿ, ಕಲಬುರಗಿಗೆ ಇಂದು ಪ್ರಧಾನಿ ಮೋದಿ: ವಾರದಲ್ಲಿ 2ನೇ ಬಾರಿ ರಾಜ್ಯಕ್ಕೆ ಆಗಮನ

ಮೋದಿ ಭೇಟಿಯ ರಾಜಕೀಯ ಮಹತ್ವ: ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಈಗ ಬಿಜೆಪಿಯ 19 ಶಾಸಕರುಗಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಗೆಲ್ಲುವ ರಣತಂತ್ರವನ್ನು ಪಕ್ಷ ರೂಪಿಸುತ್ತಿದೆ. ಈಗಾಗಲೇ ಕಲಬುರಗಿಯಲ್ಲಿ ಒಬಿಸಿ ಸಮಾವೇಶ, ಬಳ್ಳಾರಿಯಲ್ಲಿ ಎಸ್​ಟಿ ಸಮಾವೇಶ ನಡೆಸುವ ಮೂಲಕ ಸಮುದಾಯಗಳಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು, ಪ್ರಬಲ ಬಂಜಾರ ಸಮುದಾಯದ ಮನಗೆಲ್ಲಲು ಹಕ್ಕುಪತ್ರ ಅಸ್ತ್ರ ಬಳಕೆ‌ ಮಾಡಿದ್ದಾರೆ. ರಾಜ್ಯದಲ್ಲಿ ತಾಂಡಾ ಹಟ್ಟಿಗಳನ್ನು ಕಂದಾಯ ವ್ಯಾಪ್ತಿಗೆ ತಂದು ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಮುಖೇನ ಮುಖ್ಯ ವಾಹಿನಿಗೆ ಕರೆತರಲಾಗುತ್ತಿದೆ. ಹಕ್ಕುಪತ್ರ ನೀಡುವ ನೆಪದಲ್ಲಿ ಈ ಸಮುದಾಯದ ಒಲವು ಗಳಿಸಲು‌ ಸೂಕ್ತ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಕಡೆ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿಯೇ ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕುವುದು, ಇನ್ನೊಂದೆಡೆ ಬಂಜಾರ ಸಮುದಾಯದ ಮತವನ್ನು ತಮ್ಮ ಕಡೆ ವಾಲಿಸಿಕೊಳ್ಳುವುದು ಇದರ ಹಿಂದಿನ ರಣತಂತ್ರ ಅನ್ನೋದು ರಾಜಕೀಯ ವಿಶ್ಲೇಷಕರ ಅನಿಸಿಕೆ.

Last Updated : Jan 19, 2023, 8:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.