ETV Bharat / state

ಟ್ರಾಕ್ಟರ್ ಟ್ರ್ಯಾಲಿ ಚಕ್ರದಡಿ ಸಿಲುಕಿ ಪಾದಚಾರಿ ಸಾವು: ಸಿಸಿಟಿವಿಯಲ್ಲಿ ಘಟನೆ ಸೆರೆ - ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವ್ಯಕ್ತಿಯೊಬ್ಬರು ಬರ್ಮಾ ದಂಡಗೂಲೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಟ್ರ್ಯಾಕ್ಟರ್​ನ ಟ್ರ್ಯಾಲಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿತು.

Pedestrian died falling under tractor trolley
ಟ್ರಾಕ್ಟರ್ ಟ್ರ್ಯಾಲಿ ಚಕ್ರದಡಿ ಸಿಲುಕಿ ಪಾದಾಚಾರಿ ಸಾವು
author img

By

Published : Nov 27, 2022, 6:36 AM IST

Updated : Nov 27, 2022, 9:23 AM IST

ಕಲಬುರಗಿ: ಟ್ರಾಕ್ಟರ್ ಟ್ರ್ಯಾಲಿ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಪಾದಚಾರಿ ಮೃತಪಟ್ಟ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿರುವ ನಿಂಬಾಳ್​ ಪೆಟ್ರೋಲ್ ಬಂಕ್​ ಬಳಿ ನಡೆಯಿತು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಫಜಲಪುರ ಪಟ್ಟಣದ ನಿವಾಸಿ ಬರ್ಮಾ ದಂಡಗೂಲೆ (45) ಮೃತರೆಂದು ಗುರುತಿಸಲಾಗಿದೆ.

ಇವರು ಶನಿವಾರ ಬೆಳಗ್ಗೆ ಬರ್ಮಾ ದಂಡಗೂಲೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಟ್ರ್ಯಾಕ್ಟರ್​ನ ಇಂಜಿನ್​ಗೆ ಅಳವಡಿಸಿದ್ದ ಟ್ರ್ಯಾಲಿ ಡಿಕ್ಕಿ ಹೊಡೆಯಿತು. ಟ್ರ್ಯಾಲಿಯ ಕೊಂಡಿ ಕಡಿದುಕೊಂಡಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಟ್ರಾಕ್ಟರ್ ಟ್ರ್ಯಾಲಿ ಚಕ್ರದಡಿ ಸಿಲುಕಿ ಪಾದಚಾರಿ ಸಾವು

ಮೂಲತಃ ಕಾಳಗಿ ಗ್ರಾಮದವರಾದ ಬರ್ಮಾ ಅವರು ಕಳೆದ 15 ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಟ್ರ್ಯಾಕ್ಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಬ್ಬಿನ ಟ್ರ್ಯಾಕ್ಟರ್ ಉರುಳಿ ಬಿದ್ದು ಪಾದಚಾರಿ ಮಹಿಳೆ ಸಾವು

Last Updated : Nov 27, 2022, 9:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.