ETV Bharat / state

ಪಿಡಿಒರಿಂದ ಜನರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ: ಭಾರತ್​ ಕಿಸಾನ್​ ಸಭಾ ಆರೋಪ - Padasalagi pdo

ಪಡಸಾವಳಗಿ ಗ್ರಾಮ ಪಂಚಾಯತಿ ಪಿಡಿಒ ಗೂಂಡಾಗಿರಿ ಮಾಡಿ, ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಇದಕ್ಕೆ ತಾಲೂಕು ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಇಲಾಖೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ಗಂಭೀರ ಆರೋಪ ಮಾಡಿದೆ.

PDO Dasaratha of attacks on people:  India Kisan Sabha alleges
ಪಿಡಿಒ ದಶರಥರಿಂದ ಜನರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ: ಭಾರತ್​ ಕಿಸಾನ್​ ಸಭಾ ಆರೋಪ
author img

By

Published : Jun 14, 2020, 12:20 AM IST

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಗಿ ಗ್ರಾಮ ಪಂಚಾಯತಿ ಪಿಡಿಒ ದಶರಥ ಗೂಂಡಾಗಿರಿ ನಡೆಸಿ, ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ಆರೋಪಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಪಿಡಿಒ ದಶರಥ ಗೂಂಡಾಗಿರಿ ಮಾಡಿ, ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಇದಕ್ಕೆ ತಾಲೂಕು ಪಂಚಾಯತಿ ಅಧಿಕಾರಿಗಳು, ಪೊಲೀಸ್ ಇಲಾಖೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪಡಸಾವಳಗಿ ಗ್ರಾಮದಲ್ಲಿ ಕಾರು ಅಪಘಾತದಲ್ಲಿ ಓರ್ವ ಸಾವನ್ನಪ್ಪಿದರೂ ಪಿಡಿಒ ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿಲ್ಲ. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕೇಳಿದ ಗ್ರಾಮ ಪಂಚಾಯತಿ ಸದಸ್ಯನ ಮೇಲೆಯೂ ಪಿಡಿಒ ಗೂಂಡಾಗಿರಿ ಮಾಡಿದ್ದಾನೆ. ಕೂಡಲೇ ಪಿಡಿಒ ದಶರಥ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ, ಜಿಲ್ಲಾ ಪಂಚಾಯತಿ ಎದುರು ನಿರಂತರ ಹೋರಾಟ ನಡೆಸುವುದಾಗಿ ಮೌಲಾ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.