ಕಲಬುರಗಿ: ತಾಲೂಕು ಪಂಚಾಯತ್ ದ್ವಿತೀಯ ದರ್ಜೆ ಸಹಾಯಕ ನಿಜಲಿಂಗಪ್ಪ ಎಂಬಾತ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಜೇವರ್ಗಿ ತಾಲೂಕಿನ ಅವರಾದಿ (ಬಿ) ಗ್ರಾಮ ಪಂಚಾಯತಿ ಪಿಡಿಒ ಶರಣುಗೌಡ ಎಂಬುವರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಪಿಡಿಒ ಶರಣಗೌಡ ಈ ಮುಂಚೆ ಕಲಬುರಗಿ ತಾಲೂಕಿನ ಕಿಣ್ಣಿ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಆಗಿದ್ದರು. ಅವರಾದ (ಬಿ) ಗ್ರಾಮಕ್ಕೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಎಲ್ಪಿಸಿ ಮತ್ತು ಸೇವಾ ಪುಸ್ತಕಗಳನ್ನು ಜೇವರ್ಗಿ ತಾಲೂಕು ಪಂಚಾಯತಿ ಕಚೇರಿಗೆ ವರ್ಗಾಯಿಸಲು ಶರಣಗೌಡನಿಗೆ, ನಿಜಲಿಂಗಪ್ಪ 15 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ತಾಲೂಕು ಪಂಚಾಯತಿ ಕಚೇರಿಯಲ್ಲಿ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಎಸ್ಪಿ ವಿ.ಎಂ. ಜ್ಯೋತಿ ನೇತೃತ್ವದ ತಂಡ ನಿಜಲಿಂಗಪ್ಪನನ್ನು ಭ್ರಷ್ಟಾಚಾರ ಆರೋಪದಡಿ ಬಂಧಿಸಿದೆ.