ETV Bharat / state

ಕೊರೊನಾಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ: ವೃದ್ಧ ವಾಸವಿದ್ದ ಬಡಾವಣೆ ಸೀಲ್​​ಡೌನ್ - ಕೊರೊನಾದಿಂದ ವೃದ್ಧ ಸಾವು

ವೃದ್ಧ ವಾಸವಿದ್ದ ಅಪ್ತ ಗುಂಬಜ್ ಏರಿಯಾವನ್ನು ಜಿಲ್ಲಾಡಳಿತ ಸೀಲ್​​ಡೌನ್ ಮಾಡಿದೆ. ಪೊಲೀಸರು ಬಡಾವಣೆಯ ರಸ್ತೆಗಳ ಮಧ್ಯೆ ಪೈಪ್​ಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಜನರು ಆ ಪ್ರದೇಶದತ್ತ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಬಡಾವಣೆ ಸೀಲ್​​ಡೌನ್
ಬಡಾವಣೆ ಸೀಲ್​​ಡೌನ್
author img

By

Published : Apr 21, 2020, 1:36 PM IST

ಕಲಬುರಗಿ: ಮಹಾಮಾರಿ ಕೊರೊನಾ ನಗರದಲ್ಲಿ ನಾಲ್ಕನೇ ವೃದ್ಧನನ್ನು ಬಲಿ ಪಡೆದಿದೆ. ಇಂದು ಮತ್ತೊಬ್ಬ ವೃದ್ಧ ಸಾವನ್ನಪ್ಪಿದ್ದರಿಂದ ಆತ ವಾಸವಾಗಿದ್ದ ಬಡಾವಣೆಯನ್ನು ಸಂಪೂರ್ಣ ಸೀಲ್​​ಡೌನ್ ಮಾಡಲಾಗಿದೆ.

ವೃದ್ಧ ವಾಸವಿದ್ದ ಅಪ್ತ ಗುಂಬಜ್ ಏರಿಯಾವನ್ನು ಜಿಲ್ಲಾಡಳಿತ ಸೀಲ್​​ಡೌನ್ ಮಾಡಿದೆ. ಪೊಲೀಸರು ಬಡಾವಣೆಯ ರಸ್ತೆಗಳ ಮಧ್ಯೆ ಪೈಪ್​ಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಜನ ಯಾರೂ ಕೂಡ ಅತ್ತ ಸುಳಿಯದಂತೆ ನೋಡಿಕೊಂಡಿದ್ದಾರೆ.

ವೃದ್ಧ ವಾಸವಿದ್ದ ಬಡಾವಣೆ ಸೀಲ್​​ಡೌನ್

ಇನ್ನು ಮೃತ ವೃದ್ಧನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ವೃದ್ಧನಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಆತನ ಟ್ರಾವೆಲಿಂಗ್ ಹಿಸ್ಟರಿ ನೋಡಿ ಸೋಂಕಿನ ಕುರಿತು ತಿಳಿಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.