ಕಲಬುರಗಿ: ನೈಟ್ ಕರ್ಫೂ ಜಾರಿ ಹಿನ್ನೆಲೆ ಕಲಬುರಗಿಯಲ್ಲಿ ಸುಖಾಸುಮ್ಮನೆ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಕಲಬುರಗಿ ನಗರದ ಸೂಪರ್ ಮಾರ್ಕೆಟ್ನಲ್ಲಿ 9 ಗಂಟೆ ಆದ್ರು ರಸ್ತೆಯಲ್ಲಿ ಓಡಾಡ್ತಿರೋದಕ್ಕೆ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಸರ್ಕಾರ ನೈಟ್ ಕರ್ಫೂ ಜಾರಿಗೊಳಿಸಿ ಆದೇಶ ಹೊರಡಿಸಿದರೂ ಸಹ ಸಾರ್ವಜನಿಕರು ರಸ್ತೆ ಮೇಲೆ ಬೇಕಾಬಿಟ್ಟಿ ಓಡಾಡುತ್ತಿದ್ದರು.
ಪೊಲೀಸ್ ವಾಹನಗಳು ಬರುತ್ತಿದ್ದಂತೆ ವರ್ತಕರು ಅಂಗಡಿಗಳನ್ನ ಬಂದ್ ಮಾಡಿ ಓಡಿದರು. ರಸ್ತೆಯಲ್ಲಿ ಸುಮ್ಮನೆ ನಿಂತಿದ್ದವರಿಗೂ ಸಹ ಪೊಲೀಸರು ಲಾಠಿ ಏಟು ಕೊಟ್ಟರು. ಗ್ರಾಮಿಣ ಪ್ರದೇಶದಲ್ಲಿಯೂ ಸಹ ಪೊಲೀಸರು ತಂಡಗಳನ್ನು ಮಾಡಿಕೊಂಡು ರೌಂಡ್ಸ್ ಹೊಡೆಯುತ್ತಿದ್ದು, ಅನಗತ್ಯವಾಗಿ ರಸ್ತೆ ಮೇಲೆ ತಿರುಗಾಡುವವರಿಗೆ ಲಾಠಿ ರುಚಿ ತೋರಿಸಿ ಮನೆಗೆ ಕಳಿಸಿದರು.