ಕಲಬುರಗಿ: ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ ಬೋರ್ನ್ ಬೇಬಿ ಎಂದು ಸಂಸದ ಉಮೇಶ ಜಾಧವ್ ವ್ಯಂಗ್ಯವಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆಯಷ್ಟೇ ಸಂಸದ ಉಮೇಶ ಜಾಧವ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಖರ್ಗೆ ಟೀಕೆಗೆ ಇದೀಗ ಸಂಸದರು ಭರ್ಜರಿಯಾಗೇ ತೀರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮೊದಲ ಬಾರಿ ಗೆದ್ದಾಗಲೇ ಮಿನಿಸ್ಟರ್ ಆಗ್ತಾರೆ. ಎರಡನೇ ಬಾರಿ ಗೆದ್ದಾಗಲೂ ಮಿನಿಸ್ಟರ್ ಆಗ್ತಾರೆ. ಮೂರನೇ ಬಾರಿ ಗೆದ್ದಾಗ ಗ್ರಾಮೀಣಾಭೀವೃದ್ಧಿ ಪಂಚಾಯತ್ ರಾಜ್ನಂತಹ ದೊಡ್ಡ ಖಾತೆ ಪಡೆಯುತ್ತಾರೆ. ಅದಕ್ಕೆ ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ್ ಬೋರ್ನ್ ಬೇಬಿ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ತಮ್ಮನು ತಾವು ಮೋದಿ ಅವರಿಗೆ ಹೋಲಿಕೆ ಮಾಡ್ತಾರೆ. ನರೆಂದ್ರ ಮೋದಿಗಿಂತ ಸೂಪರ್ ಆಗಿ ನಮಗೇನೂ ತಕರಾರು ಇಲ್ಲ. ನೀವು ಅಮೆರಿಕಾಕ್ಕಾದರೂ ಹೋಗಿ, ಎಲ್ಲಿಗಾದರು ಹೋಗಿ ಆದರೆ, ಸುಮ್ನೆ ಹೋಗಿ ಬರಬೇಡಿ ಬಂಡವಾಳದಾರರನ್ನು ಕರೆತನ್ನಿ. ನೀವು ಅಮೆರಿಕಾಗೆ ಹೋಗೊದ್ರಿಂದ ನಮಗೆನೂ ಬ್ಯಾನಿ ಇಲ್ಲ. ಅದರೆ ಕಲಬುರಗಿಯನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಟಾಂಗ್ ಕೊಟ್ರು.
ಎಲ್ಲಿಯೋ ಕುಳಿತು 45 ಸಭೆ ಮಾಡಿದ್ರೆ ಅರ್ಥವಿಲ್ಲ: ಕೆಡಿಪಿ ಸಭೆ ಮಾಡಿ ಅಂದ್ರೆ ಸಭೆ ಮಾಡಲ್ಲ, ಬೇಕಿದ್ರೆ ಕೋರ್ಟ್ ಗೆ ಹೋಗಿ ಅಂತಾರೆ. ನಾನು ಕೋರ್ಟ್ಗೆ ಹೋಗಲ್ಲ ಅದು ನಿಮ್ಮ ಡ್ಯೂಟಿ ಮರಿಬೇಡಿ. ಎಲ್ಲೋ ಕುಳಿತು ಆನಲೈನ್ ಮೂಲಕ ಕೆಡಿಪಿ ಸಭೆ ನಡೆಸಿ ನಾನು 45 ಸಭೆ ನಡಿಸಿದ್ದೇನೆ ಅಂದ್ರೆ ಅರ್ಥವಿಲ್ಲ, ಬನ್ನಿ ಬಂದು ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸೇರಿ ಕೆಡಿಪಿ ಸಭೆ ಮಾಡಿ ಅಭಿವೃದ್ಧಿಗೆ ಶ್ರಮಿಸಿ. ಕೆಡಿಪಿ ಸಭೆ ಮಾಡೋದಕ್ಕೆ ಕುಂಟ ನೆಪಗಳನ್ನು ಹೇಳುವುದನ್ನು ಬೀಡಿ ಎಂದು ಗುಡುಗಿದರು.
ಪ್ರಿಯಾಂಕ್ ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ: ಮಾತಾಡಿದರೆ ನನ್ನನ್ನ ಚಿಂಚೋಳಿ ಎಂಪಿ ಅಂತ ಪ್ರಿಯಾಂಕ್ ಕರಿಯುತ್ತಾರೆ. ನನಗೆ ಚಿಂಚೋಳಿ ಎಂಪಿ ಅಂತ ಕರೆದ್ರೆ ಹೆಮ್ಮೆ ಇದೆ. ನಾನು ಅದೇ ತಾಲೂಕಿನಲ್ಲಿ ಹುಟ್ಟಿ ಬೆಳೆದವನು. ಆದ್ರೆ ಚಿಂಚೋಳಿ ಕಲಬುರಗಿ ಜಿಲ್ಲೆಯಲ್ಲಿದ್ರೂ ಲೋಕಸಭಾ ಕ್ಷೇತ್ರದ ಎಂಪಿ ಭಗವಂತ ಖೂಬಾ ಅವರಿಗೆ ಬರುತ್ತೆ ಅನ್ನೋದು ಕೂಡಾ ಖರ್ಗೆಗೆ ಗೊತ್ತಿದ್ದಂಗಿಲ್ಲ. ನಾನು ಚಿಂಚೋಳಿ ಎಂಪಿ ಅನ್ನೋದಾದರೆ ನೀವು ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ ಎಂದು ತಿರುಗೇಟು ನೀಡಿದರು.
ಸ್ವಾತಂತ್ರ್ಯಸಿಕ್ಕಾಗಿನಿಂದ ಕಲಬುರಗಿ ಆಳುತ್ತಿದ್ದೀರಿ:ಇವರಿಗೆ ಚಿತ್ತಾಪುರ ಕಲಬುರಗಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಮಾಡ್ತಾರೆ. ಆದರೆ ಅವರ ತಂದೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಲಬುರಗಿ ಆಳುತ್ತಿದ್ದಾರೆ. ಇಲ್ಲಿ ಯಾವುದೇ ಕಾಲೇಜು ತೆರೆದಿಲ್ಲ ಎಂದು ಆರೋಪಿಸಿದರು.
ನೋಟಿಸ್ ಕೊಡದೆ ಬಡವರ ಮನೆಗಳನ್ನು ಕೆಡವಿದ್ರಿ: ಇದೆ ವೇಳೆ ಕಲಬುರಗಿ ಫಿಲ್ಟರ್ ಬೆಡ್ ಆಶ್ರಯ ಕಾಲೂನಿ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಜಾಧವ್ ಡ್ರಾಮ ಮಾಡ್ತಿದ್ದಾರೆ ಎಂಬ ಪ್ರೀಯಾಂಕ್ ಹೇಳಿಗೆ ತೀವ್ರವಾಗಿ ಖಂಡಿಸಿದ ಜಾಧವ್, ಮೈಡಿಯರ್ ಪ್ರಿಯಾಂಕ್ ಖರ್ಗೆ ಜಿ ನೀ ನಿಜವಾಗ್ಲು ರಾಜಕಾರಣಿಯೇ ಆಗಿದ್ರೆ. ನಿನ್ನೆ ಬಂದಾಗಲಾದ್ರೂ ಆಶ್ರಯ ಕಾಲೊನಿಗೆ ಹೋಗಬೇಕಿತ್ತು.
ಬಡವರ ಕಷ್ಟ ನಿಮಗೆ ಗೊತ್ತಿಲ್ಲ. ನನಗೆ ಗೊತ್ತು ನಾನು ಹೋಗಿದ್ದೇನೆ. ನೀವು ಅವರಿಗಾಗಿ ಏನು ಮಾಡಿಲ್ಲ. ಬಡವರ ಬಗ್ಗೆ ಸುಳ್ಳು ಹೇಳುವುದನ್ನು ಬಿಡಿ. ಆಶ್ರಯ ಕಾಲೊನಿಯಲ್ಲಿ ಕೇವಲ ಬಂಜಾರ ಜನ ಮಾತ್ರ ಇಲ್ಲ, ಅತ್ಯಂತ ಕೆಳ ಸಮುದಾಯದ ಜನರಿದ್ದಾರೆ. ಯಾವುದೇ ನೋಟಿಸ್ ನೀಡದೆ ಅವರ ಮನೆಗಳನ್ನು ಕೆಡವಿದ್ರಿ ಎಂದು ಕಿಡಿಕಾರಿದರು.
ಮಾತೆತ್ತಿದ್ರೆ ಜಾಧವ್ ಜಾಧವ್ ಅಂತಿರಾ, ಬಹುಶಃ ಕನಸಿನಲ್ಲೂ ನನ್ನನ್ನು ನೆನಪಿಸಿಕೊಳ್ಳುತ್ತಿರಿ ಅನ್ಸತ್ತೆ ಎಂದು ವ್ಯಂಗ್ಯವಾಡಿದ ಉಮೇಶ ಜಾಧವ್, ಪಶ್ಚಿಮ ಬಂಗಾಳ ಸಂಸ್ಕೃತಿ ಬಿಡಿ, ಅಭಿವೃದ್ಧಿ ಮಾಡಿ ಎಂದು ತಿಳಿಸಿದರು.
ಇದನ್ನೂಓದಿ:ಬಿಜೆಪಿ ಸರ್ಕಾರದಲ್ಲಿ ಕಲಬುರಗಿಗೆ ದನ ಕಾಯೋ ಮಂತ್ರಿನೇ ಫಿಕ್ಸ್: ಪ್ರಿಯಾಂಕ್ ಖರ್ಗೆ