ETV Bharat / state

ಮೂರು ಬಾರಿ ಸಿಎಂ ಪಟ್ಟ ಕೈ ತಪ್ಪಿದರೂ ಪಕ್ಷ ನಿಷ್ಠೆ ಬಿಡದ ಖರ್ಗೆ: ಸೋಲಿಲ್ಲದ ಸರದಾರ ನಡೆದು ಬಂದ ದಾರಿ ಹೀಗಿದೆ... - mallikarjun kharge could be congress president

ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ‌ ಖರ್ಗೆ ಅನಾವಶ್ಯಕವಾಗಿ ಮಾತನಾಡುವವರಲ್ಲ, ಹಿತ ಮಿತವಾಗಿ, ಅಳೆದು ತೂಗಿ ನಿರ್ದಿಷ್ಟತೆ ಕಾಪಾಡಿಕೊಂಡು ಮಾತನಾಡುವ ಚಾತುರತೆ ಹೊಂದಿದ್ದಾರೆ. ತಮ್ಮ ಮಾತಿನ ಶೈಲಿಯಿಂದಲೇ ಸಭ್ಯ ರಾಜಕಾರಣಿ ಎಂದು ಕರೆಸಿಕೊಂಡಿದ್ದಾರೆ.‌ ಇದೀಗ, ದೇಶದ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿದಿದ್ದು, ಎಐಸಿಸಿ ಸಾರಥಿ ಆಗೋದು ಬಹುತೇಕ ಪಕ್ಕಾ ಆದಂತಾಗಿದೆ.

ಮಲ್ಲಿಕಾರ್ಜುನ‌ ಖರ್ಗೆ
mallikarjun kharge
author img

By

Published : Oct 2, 2022, 10:51 AM IST

Updated : Oct 2, 2022, 10:57 AM IST

ಕಲಬುರಗಿ: ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದರು ಕೂಡ ಕೋಪ, ತಾಪ, ಪ್ರತಾಪ ತೋರಿಸದೇ ತಾಳ್ಮೆಯಿಂದ ಹೆಜ್ಜೆ ಇಟ್ಟಿದ್ದಕ್ಕೆ ಹಾಗೂ ನೆಹರೂ ಕುಟುಂಬ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹೊಂದಿದಕ್ಕೆ ಹಿರಿಯ ರಾಜಕೀಯ ಮುತ್ಸದಿ ಮಲ್ಲಿಕಾರ್ಜುನ‌ ಖರ್ಗೆಗೆ ಕಡೆಗೂ ಪ್ರತಿಫಲ ಸಿಕ್ಕಂತಾಗಿದೆ. ಇದೀಗ, ದೇಶದ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿದಿದ್ದು, ಎಐಸಿಸಿ ಸಾರಥಿ ಆಗೋದು ಬಹುತೇಕ ಪಕ್ಕಾ ಆದಂತಾಗಿದೆ.

ಶತಮಾನದಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ದೇಶದ ಬಹುತೇಕ ರಾಜ್ಯಗಳಲ್ಲಿ ಈಗ ಅಧಿಕಾರ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಪಕ್ಷ ಮೇಲೆತ್ತಲು ನಾಯಕರು ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿದ್ದು, ಖರ್ಗೆ ಮೂಲಕ ಬೂಸ್ಟರ್ ಡೋಸ್ ಕೊಡಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಗಾಂಧಿ‌ ಕುಟುಂಬ ಬೆನ್ನಿಗೆ ನಿಂತಿರುವುದರಿಂದ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ.

mallikarjun kharge
ಮಲ್ಲಿಕಾರ್ಜುನ‌ ಖರ್ಗೆ

ಇದನ್ನೂ ಓದಿ:ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಲೆಂದು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ

ಖರ್ಗೆ ಕಾಂಗ್ರೆಸ್ ಪಕ್ಷವಲ್ಲದೇ ಗಾಂಧಿ ಕುಟುಂಬಕ್ಕೆ ಅತಿ ನಿಷ್ಠಾವಂತ ವ್ಯಕ್ತಿ. ಎಲ್ಲದಕ್ಕಿಂತ ಮಿಗಿಲಾಗಿ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಹರಿಕಾರ. ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಕಾಂಗ್ರೆಸ್ ನಾಯಕ ಖರ್ಗೆ ಅನಾವಶ್ಯಕವಾಗಿ ಮಾತನಾಡುವವರಲ್ಲ, ಹಿತ ಮಿತವಾಗಿ, ಅಳೆದು ತೂಗಿ ನಿರ್ದಿಷ್ಟತೆ ಕಾಪಾಡಿಕೊಂಡು ಮಾತನಾಡುವ ಚತುರತೆ ಹೊಂದಿದ್ದಾರೆ. ತಮ್ಮ ಮಾತಿನ ಶೈಲಿಯಿಂದಲೇ ಸಭ್ಯ ರಾಜಕಾರಣಿ ಎಂದು ಕರೆಸಿಕೊಂಡಿದ್ದಾರೆ.‌ ಅಷ್ಟೇ ಅಲ್ಲದೇ, ಖರ್ಗೆ ಸಂಸದೀಯ ನಾಯಕರಿದ್ದಾಗ ಮಾತಿನಿಂದಲೇ ಪ್ರಧಾನಿ‌ ಮೋದಿಯವರಿಗೂ ಟಕ್ಕರ್ ನೀಡಿದ್ದರು.‌ ಖರ್ಗೆ ಅವರ ಮಾತಿನ ಶೈಲಿ, ಶಬ್ದ ಬಂಡಾರಕ್ಕೆ ಮೋದಿ ಅವರೇ ಪ್ರಶಂಸೆ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಾಜಕೀಯ ಏರಿಳಿತ - 12 ರಲ್ಲಿ 11 ಬಾರಿ ಗೆಲುವು (9 ಎಂಎಲ್​ಎ, 2 ಎಂಪಿ): ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ ಜುಲೈ 21, 1942 ರಲ್ಲಿ ಜನಿಸಿದ ಖರ್ಗೆ, ಕಲಬುರಗಿಯ ಎನ್‌‌ವಿ ಶಾಲೆ, ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಯು ಆರ್ಟ್, ಶೇಠ್ ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. 1969 ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಖರ್ಗೆ, ಮೊದಲಿಗೆ ಕಲಬುರಗಿ ಸಿಟಿ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷ ಸೇರುವ ಮುನ್ನ ವಿದ್ಯಾರ್ಥಿ ಮುಖಂಡರಾಗಿದ್ದರು. 1972 ರಲ್ಲಿ ಮೊದಲ ಬಾರಿಗೆ ಗುರುಮಠಕಲ್ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿ, ಸತತ ಎಂಟು ಬಾರಿ ಇದೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ದಾಖಲೆ ಬರೆದರು.

mallikarjun kharge
ಮಲ್ಲಿಕಾರ್ಜುನ‌ ಖರ್ಗೆ

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷಗಾದಿ ಅಲಂಕರಿಸುತ್ತಾರಾ ಎರಡನೇ ಕನ್ನಡಿಗ, ದಲಿತ ನಾಯಕ ಖರ್ಗೆ !

2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಚಿತ್ತಾಪೂರ ಮಿಸಲು ಕ್ಷೇತ್ರದಿಂದ ಸ್ಪರ್ಧಿಸಿ ಇಲ್ಲಿಯೂ ಗೆಲವು ಸಾಧಿಸುವ ಮೂಲಕ ಒಂಬತ್ತನೇ ಬಾರಿಗೆ ಶಾಸಕರಾಗಿ ಸೋಲಿಲ್ಲದ‌ ಸರದಾರ ಎಂದು ದಾಖಲೆ ಬರೆದರು. ನಂತರದಲ್ಲಿ 2009 ಹಾಗೂ 2014 ರಲ್ಲಿ ಎರಡು ಅವಧಿಗೆ ಕಲಬುರಗಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಖರ್ಗೆ, ಕಳೆದ ಬಾರಿ (2019) ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಖರ್ಗೆಯವರು ಸೋಲಿಲ್ಲದ ಸರದಾರನಂತೆ 12 ಚುನಾವಣೆ ಎದುರಿಸಿ ಕೇವಲ ಒಂದು ಬಾರಿ ಸೋಲನ್ನ ಅನುಭವಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತರೂ ಖರ್ಗೆಯವರ ಪಕ್ಷ ನಿಷ್ಠೆ ಕಂಡು ಹೈಕಮಾಂಡ್ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿ, ನಂತರ ರಾಜ್ಯಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿತ್ತು.

ಮಲ್ಲಿಕಾರ್ಜುನ‌ ಖರ್ಗೆ
ಮಲ್ಲಿಕಾರ್ಜುನ‌ ಖರ್ಗೆ

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ನಾಮಪತ್ರ ಸಲ್ಲಿಕೆ ಹೆಮ್ಮೆಯ ವಿಚಾರ: ಪುತ್ರ ಪ್ರಿಯಾಂಕ್

ಆಡಳಿತ ರಂಗದಲ್ಲಿ ನಡೆದು ಬಂದ ದಾರಿ:

  • 1972ರಲ್ಲಿ ಮೊದಲ ಬಾರಿಗೆ ಗುರುಮಠಕಲ್ ಮೀಸಲು ಮತಕ್ಷೇತ್ರದಿಂದ ಶಾಸಕರಾದ ಖರ್ಗೆ, ಸ್ಟೇಟ್ ಲೇದರ್ ಡೆವಲಪ್ಮೆಂಟ್ ಕಾರ್ಪೊರೇಷನ್ ಅಧ್ಯಕ್ಷರಾಗಿದ್ದರು.
  • 1976-1977: ದೇವರಾಜ ಅರಸು ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಖಾತೆ ಸಚಿವರಾದರು. ನಂತರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು.
  • 1978-1980: ದೇವರಾಜ‌ ಅರಸು ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.
  • 1980-1983: ಆರ್. ಗುಂಡುರಾವ್ ಸರ್ಕಾರದಲ್ಲಿ ಕಂದಾಯ ಇಲಾಖೆ ಸಚಿವರು.
  • 1985-1989: ರಾಜ್ಯ ವಿಧಾನಸಭೆ ಪ್ರತಿಪಕ್ಷದ ಉಪ ನಾಯಕರಾಗಿ ನೇಮಕ.
  • 1990-1992: ಎಸ್. ಬಂಗಾರಪ್ಪ ಕ್ಯಾಬಿನೆಟ್​ನಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ.
  • 1992-1994: ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಹಕಾರ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾಗಿದ್ದರು.
  • 1996-1999: ವಿಧಾನಸಭಾ ವಿರೋಧ ಪಕ್ಷದ ನಾಯಕರಾದರು.
  • 1999-2004: ಎಸ್‌ಎಂ ಕೃಷ್ಣ ಸಂಪುಟದಲ್ಲಿ ಗೃಹ ಹಾಗೂ ಸಣ್ಣ ನೀರಾವರಿ ಸಚಿವ.
  • 2004-2006: ಎನ್. ಧರ್ಮಸಿಂಗ್ ಸರ್ಕಾರದಲ್ಲಿ ಸಾರಿಗೆ, ಜಲಸಂಪನ್ಮೂಲ‌ ಸಚಿವರಾದರು.
  • 2005-2008: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ ನೇಮಕ.
  • ಜೂನ್ 2008 - ಮೇ 2009 ರಲ್ಲಿ ಎರಡನೇ ಬಾರಿ ಪ್ರತಿಪಕ್ಷ ನಾಯಕರಾಗಿ ನೇಮಕ.

ರಾಷ್ಟ್ರ ರಾಜಕಾರಣಕ್ಕೆ ಪಯಣ:

  • 2009-2013 ರಲ್ಲಿ ಮನಮೋಹನ ಸಿಂಗ್ ಸರ್ಕಾರದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾದರು.
  • ಜೂನ್ 2013 ರಿಂದ ಮೇ 2014 ರ ವೇಳೆಗೆ ಮನಮೋಹನ‌ ಸಿಂಗ್ ಸರ್ಕಾರದಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ.
  • 2014-2019 ರಲ್ಲಿ ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
  • ಫೆ.2020 ರಿಂದ ಅ.2022ರ ವರೆಗೆ ರಾಜ್ಯಸಭಾ ವಿಪಕ್ಷ ನಾಯರಾಗಿ ಸೇವೆ ಮಾಡಿದ್ದಾರೆ.

ಮೂರು ಬಾರಿ ತಪ್ಪಿದ ಸಿಎಂ ಹುದ್ದೆ: ಕಾಂಗ್ರೆಸ್ ಪಕ್ಷದೊಂದಿಗೆ ಸುದೀರ್ಘ 53 ವರ್ಷದ ತಮ್ಮ ಪಯಣದಲ್ಲಿ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಬಂದು ಕೊನೆ ಗಳಿಗೆಯಲ್ಲಿ ಕೈ ತಪ್ಪಿದೆ.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ನಾನು ಈಗಷ್ಟೇ ನಾಮಪತ್ರ ಸಲ್ಲಿಸಿದ್ದೇನೆ: ಶಶಿ ತರೂರು

1999 ರಲ್ಲಿ ಜನತಾ ದಳವನ್ನು ಸೋಲಿಸಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಆಗ ಖರ್ಗೆ ಅವರೇ ಸಿಎಂ ಎಂದು ಭಾವಿಸಲಾಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಆದಂತಹ ರಾಜಕೀಯ ಬದಲಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ ಎಸ್.ಎಂ.ಕೃಷ್ಣಾ ಅವರನ್ನ ಸಿಎಂ ಹುದ್ದೆಗೇರಿಸಿತ್ತು.

2004 ರಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ರಿಶ ಸರ್ಕಾರ ರಚಿಸುವಾಗ ಮತ್ತೆ ಖರ್ಗೆ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಬದಲಾಗಿ ಎನ್. ಧರ್ಮಸಿಂಗ್ ಅವರಿಗೆ ಸಿಎಂ ಪಟ್ಟ ಕಟ್ಟಿತ್ತು.

2013 ರಲ್ಲಿ ಬಿಜೆಪಿ, ಕೆಜೆಪಿ, ಜೆಡಿಎಸ್ ಪಕ್ಷವನ್ನು ಹಿಂದಕ್ಕೆ ತಳ್ಳಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತು. ಎರಡು ಬಾರಿ ವಂಚಿತರಾದ ಖರ್ಗೆ ಅವರನ್ನು ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಮಾಡಲಿದೆ ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು‌. ಆಗ್ರಹ‌ ಕೂಡ ಮಾಡಿದ್ದರು. ಆದರೆ ಹೈಕಮಾಂಡ್ ಖರ್ಗೆ ಬದಲಾಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಹುದ್ದೆ ಒಪ್ಪಿಸಿತು. ಖರ್ಗೆ ಅವರಿಗೆ ಕೇಂದ್ರದಲ್ಲಿ ರೈಲ್ವೆ ಖಾತೆ ನೀಡಲಾಯಿತು.

mallikarjun kharge
ಮಲ್ಲಿಕಾರ್ಜುನ‌ ಖರ್ಗೆ ಬಾಲ್ಯದ ಫೋಟೋ

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷ ಚುನಾವಣೆ: ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್​ ಖರ್ಗೆ

ಮೂರು ಬಾರಿ ಮುಖ್ಯಮಂತ್ರಿ ಗಾದಿಯ ಕನಸು ಚೂರಾದರೂ ಖರ್ಗೆ ಮಾತ್ರ ಎಲ್ಲಿಯೂ ಅಸಮಧಾನ ಅಥವಾ ಬೆಸರ ವ್ಯಕ್ತಪಡಿಸಲಿಲ್ಲ ಅನ್ನೋದು ಗಮನಾರ್ಹ ವಿಷಯ. ಸಮಯಕ್ಕೆ ಅನುಗುಣವಾಗಿ ಹೈಕಮಾಂಡ್​ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲಿದೆ ಎನ್ನುತ್ತಲೇ ಪಕ್ಷ ನೀಡಿದ ಜವಾಬ್ದಾರಿ ಹೊತ್ತು ಪಕ್ಷನಿಷ್ಠೆ ತೋರಿಸಿದ್ದರು. ಅವರ ತಾಳ್ಮೆ ನಿಷ್ಠೆಯೇ ಇಂದು ಜಗತ್ತಿನ ಅತಿ ದೊಡ್ಡ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಲು ಬೆಂಬಲ ಸಿಕ್ಕಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಒಟ್ಟಿನಲ್ಲಿ ಶತಮಾನಗಳಷ್ಟು ಇತಿಹಾಸ ಹೊಂದಿರೋ ಜಗತ್ತಿನ ಅತಿ ದೊಡ್ಡ ಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಹಿಂದುಳಿದ ಭಾಗದ ನಾಯಕನಿಗೆ ಒಲಿಯುವುದು ಬಹುತೇಕ ಖಚಿತವಾಗಿದ್ದು, ಕನ್ನಡಗಿರಲ್ಲಿ ಹೆಮ್ಮೆ ಮೂಡಿಸಿದೆ.

Last Updated : Oct 2, 2022, 10:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.