ETV Bharat / state

ಮಳಖೇಡ, ನೃಪತುಂಗನ ಕೋಟೆ ಐತಿಹಾಸಿಕ ಪ್ರವಾಸಿ ತಾಣವಾಗಲಿ: ಚಕ್ರವರ್ತಿ ಸೂಲಿಬೆಲೆ

ರಾಷ್ಟ್ರಕೂಟರ ಕೋಟೆಯನ್ನು ರಕ್ಷಿಸುವ, ಅಭಿವೃದ್ಧಿಪಡಿಸುವ ವಾರಸುದಾರಿಕೆ ಮಳಖೇಡ ಜನರಿಗೆ ಸಿಕ್ಕಿರುವುದೇ ದೊಡ್ಡ ಪುಣ್ಯ. ಅಂತಹ ಪುಣ್ಯ ಕಾರ್ಯಕ್ಕೆ ಸ್ಥಳೀಯರು ಮುಂದಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.

Chakravarthi  Sulibele
ಚಕ್ರವರ್ತಿ ಸೂಲಿಬೆಲೆ
author img

By

Published : Jan 11, 2021, 1:33 PM IST

ಸೇಡಂ: 11ನೇ ಶತಮಾನದಲ್ಲಿ ರಾಜಧಾನಿಯಾಗಿ ಮೆರೆದ ಮಳಖೇಡ ಮತ್ತು ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕೋಟೆ ಐತಿಹಾಸಿಕ ಪ್ರವಾಸಿ ತಾಣವಾಗಿಸಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ಬರಹಗಾರ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದ್ದಾರೆ.

ಯುವ ಬ್ರಿಗೇಡ್​ನ ರೆಲ್ಲೋ ಪ್ಲೇಕ್ ಉದ್ಘಾಟಿಸಿದ ಚಕ್ರವರ್ತಿ ಸೂಲಿಬೆಲೆ

ತಾಲೂಕಿನ ಮಳಖೇಡ ಗ್ರಾಮದ ರಾಷ್ಟ್ರಕೂಟರ ರಾಜಧಾನಿ ಮಳಖೇಡದ ಕೋಟೆಯಲ್ಲಿ ಯುವ ಬ್ರಿಗೇಡ್​ನ ರೆಲ್ಲೋ ಪ್ಲೇಕ್ ಉದ್ಘಾಟಿಸಿ ಅವರು ಮಾತನಾಡಿದರು. ಅಮೋಘವರ್ಷ ನೃಪತುಂಗ ಚಕ್ರವರ್ತಿಯ ಇತಿಹಾಸವನ್ನು ಅರಿತರೆ ಮೈ ರೋಮಾಂಚನವೆನಿಸುತ್ತದೆ. ರಾಜ್ಯದಲ್ಲಿ ಅಮೋಘವರ್ಷ ನೃಪತುಂಗ ರಾಜನಿಗೆ ಸಮಾನ ರಾಜ ಮತ್ತೊಬ್ಬರಿಲ್ಲ. ತನ್ನ ಮಗ ರಾಜ್ಯಕ್ಕೆ ವಿರುದ್ಧವಾಗಿ ನಿಂತುಕೊಂಡಾಗ ಮಗನನ್ನೇ ಮರಣದಂಡನೆಗೆ ಗುರಿಯಾಗಿಸಿದ್ದ. ಐತಿಹಾಸಿಕ ಹಿನ್ನೆಲೆಯುಳ್ಳ ಕೋಟೆ ಕೊತ್ತಲಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು. ಅವುಗಳು ನಾಶವಾದರೆ ಇಡೀ ಸಂಸ್ಕೃತಿ, ಪರಂಪರೆಯೇ ನಾಶವಾದಂತೆ ಎಂದರು.

ಕನ್ನಡದ ವೈಭವವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ದೃಷ್ಟಿಯಿಂದ ರೆಲ್ಲೋ ಪ್ಲೇಕ್ ವೆಬ್ ಕಾರ್ಯನಿರ್ವಹಿಸಲಿದೆ. ರಾಷ್ಟ್ರಕೂಟರ ಕೋಟೆಯನ್ನು ರಕ್ಷಿಸುವ, ಅಭಿವೃದ್ಧಿಪಡಿಸುವ ವಾರಸುದಾರಿಕೆ ಮಳಖೇಡ ಜನರಿಗೆ ಸಿಕ್ಕಿರುವುದೇ ದೊಡ್ಡ ಪುಣ್ಯ. ಅಂತಹ ಪುಣ್ಯ ಕಾರ್ಯಕ್ಕೆ ಸ್ಥಳೀಯರು ಮುಂದಾಗಬೇಕು. ರಾಷ್ಟ್ರಕೂಟರ ಕೋಟೆಗಳು ಮತ್ತು ಮಂದಿರಗಳ ಒತ್ತುವರಿಯನ್ನು ತಡೆದು ರಕ್ಷಿಸಿಕೊಳ್ಳಬೇಕು. ಕರ್ನಾಟಕದ ಗೌರವವನ್ನು ಹೆಚ್ಚಿಸಿದ ರಾಷ್ಟ್ರಕೂಟರು ಆಳಿದ ಮಳಖೇಡ ಕೋಟೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಮಳಖೇಡ ಕೋಟೆಯನ್ನು ಪ್ರವಾಸಿ ತಾಣವಾಗಿಸಬೇಕು ಎಂದು ಅವರು ಆಗ್ರಹಿಸಿದರು.

ಈ ವೇಳೆ ಯುವ ಬ್ರಿಗೇಡ್​​ನ ಶ್ರೀನಿವಾಸಮೂರ್ತಿ, ಶ್ರೀಕಾಂತ, ರಾಧಾಕೃಷ್ಣ, ಕಾಂಗ್ರೆಸ್ ಮುಖಂಡ ರುದ್ರು ಪಿಲ್ಲಿ, ಜಗು ಚಂದಾಪೂರ, ಬಸವರಾಜ ಇನ್ನಿತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.