ಸೇಡಂ: ಕಾಗಿಣಾ ನದಿ ಪ್ರವಾಹದ ರಭಸಕ್ಕೆ ತಾಲೂಕಿನ ಕುಕ್ಕುಂದಾ ಗ್ರಾಮದ ಬ್ರಿಡ್ಜ್ ಕೊಚ್ಚಿಹೋಗಿದ್ದು, ಪರಿಣಾಮ ಸೇಡಂ- ಕುಕ್ಕುಂದಾ ನಡುವೆ ಸಂಪರ್ಕ ಕಡಿತಗೊಂಡಿದೆ.
ನದಿ ಪ್ರವಾಹದಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಜೊತೆಗೆ ರಸ್ತೆಯೂ ಸಹ ಹಳ್ಳ ಹಿಡಿದಿದೆ. ಕಾರ್ಯ ನಿಮಿತ್ತ ಪಟ್ಟಣಕ್ಕೆ ಬರುವ ಜನ ಸಂಕಷ್ಟ ಎದುರಿಸುತ್ತಿದ್ದು, ಹರಸಾಹಸ ಪಡುವಂತಾಗಿದೆ.
ಕೂಡಲೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಟ್ಟು, ರಸ್ತೆ ನಿರ್ಮಿಸಿಕೊಡಲು ಗ್ರಾಮಸ್ಥರಾದ ಜಗದೀಶ ಹೆಡ್ಡಳ್ಳಿ, ಯಲ್ಲಪ್ಪ ಪೂಜಾರಿ, ಪಾಂಡು ದುಗ್ಗುನ್, ದೊಡ್ಡಯ್ಯ ಗುತ್ತೇದಾರ, ರಾಜು ಕೋರಿದ್ದಾರೆ.