ETV Bharat / state

ಶ್ರೀಕ್ಷೇತ್ರ ಜಿಡಗಾದಲ್ಲಿ ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ.. ಸಾಕ್ಷಿಯಾದ ಲಕ್ಷಾಂತರ ಅಭಿಮಾನಿಗಳು

author img

By

Published : Dec 3, 2022, 1:34 PM IST

ಕಾಂತಾರ ಸಿನಿಮಾಕ್ಕೆ ಶ್ರೀಕ್ಷೇತ್ರ ಜಿಡಗಾ ಮಠ ನೀಡುವ ಸಿದ್ಧಶ್ರೀ ಪ್ರಶಸ್ತಿ ಲಭಿಸಿದೆ. ಕಾಂತಾರಕ್ಕೆ ಸಿಕ್ಕ ಮೊದಲ ಪ್ರಶಸ್ತಿ ಇದಾಗಿದೆ.

kantara-film-got-siddashri-award-in-kalaburagi
ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ

ಕಲಬುರಗಿ: ಖ್ಯಾತ ಗಾಯಕ ವಿಜಯ ಪ್ರಕಾಶ್ ಕಂಠಸಿರಿ, ನಟ ರಿಷಬ್‌ ಶೆಟ್ಟಿಯ ಪಂಚಿಂಗ್​ ಡೈಲಾಗ್​, ಗೊಂಬೆ ಹೇಳುತೈತೆ, ಸಿಂಗಾರ ಸಿರಿಯೇ ಹಾಡಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು ಇಂತಹ ಅನೇಕ ಸುಮಧುರ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕಲಬುರಗಿ ಜಿಲ್ಲೆ ಜಿಡಗಾ ಮಠದ ಪ್ರಾಂಗಣ.

ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಧಾರ್ಮಿಕ ‌ಸ್ಥಳಗಳಲ್ಲಿ ಒಂದಾಗಿರುವ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಭೂಮಿ ನೆಲದಲ್ಲಿ 38ನೇ ಗುರುವಂದನೆ ಸಮಾರಂಭ ಅದ್ಧೂರಿಯಾಗಿ ಜರುಗಿತು. ಇದಕ್ಕಾಗಿ ಜಿಡಗಾ ಮಠದ ಅಂಗಳದಲ್ಲಿ ಅರಮನೆ ಮಾದರಿಯಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿತ್ತು. ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಗುರುವಂದನೆ ಕಾರ್ಯಕ್ರಮವು ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು.

ರಿಷಬ್ ಶೆಟ್ಟಿಗೆ ಪ್ರಶಸ್ತಿ ಪ್ರದಾನ: ಕಾಂತಾರ ಸಿನಿಮಾದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯೂ 1ಲಕ್ಷ ನಗದು ಹಣ, ಎರಡು ತೊಲ ಚಿನ್ನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ

ಇದಕ್ಕೂ ಮುನ್ನ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸಮ್ಮುಖದಲ್ಲಿ ಬೆಳಗ್ಗೆ ಲಿಂಗೈಕ್ಯ ಷಡಕ್ಷರಿ ಸಿದ್ಧರಾಮ ಶಿವಯೋಗಿಳ ಕರ್ತೃ ಗದ್ದುಗೆ ಕಾಶಿಯ 9 ಜನ ಅರ್ಚಕರಿಂದ ಮಹಾ ಅಭಿಷೇಕ ಮತ್ತು 38 ಗೋವುಗಳಿಗೆ ಮಹಾ ಪೂಜೆ ಸಲ್ಲಿಸಿದರು. ಜೊತೆಗೆ 5 ಸಾವಿರ ಸಸಿಗಳನ್ನು ನೆಡುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.

ಸಂಗೀತ ರಸದೌತಣ: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಹಾಗೂ ಗಾಯಕ ವಿಜಯ ಪ್ರಕಾಶ್ ತಂಡದಿಂದ ಸ್ವರ ಸಂಗೀತ ಕಾಯ೯ಕ್ರಮ ಜರುಗಿತು. ಗಾಯಕ ವಿಜಯ ಪ್ರಕಾಶ ಕಂಠದಲ್ಲಿ ಮೂಡಿಬಂದ ಗೊಂಬೆ ಹೇಳುತೈತೆ, ಸಿಂಗಾರ ಸಿರಿಯೇ ಹಾಡಿಗೆ ಅಭಿಮಾನಿಗಳನ್ನು ಹುಚ್ಚೆದು ಕುಣಿದರು. ರಿಷಬ್ ಶೆಟ್ಟಿ ಅವರು ಕಾಂತಾರ‌ ಸಿನಿಮಾದ ಡೈಲಾಗ್ ಹೇಳಿ ಅಭಿಮಾನಿಗಳ ಮನಸ್ಸು ಗೆದ್ದರು.

ಹೊರ ರಾಜ್ಯದಿಂದಲೂ ಭಕ್ತರ ಆಗಮನ: ಗುರುವಂದನೆ ಸಮಾರಂಭಕ್ಕೆ ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತಾದಿಗಳಿಗಾಗಿ ವಸತಿ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಐತಿಹಾಸಿಕ ಕಾಯ೯ಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಅಧಿಕ ಜನಸಮೂಹವೇ ಸಾಕ್ಷಿಯಾಯಿತು.

ಇದನ್ನೂ ಓದಿ: ಮಕ್ಕಳಲ್ಲಿಯೂ ಕಾಂತಾರ ಕ್ರೇಜ್​​: ಪಂಜುರ್ಲಿ ವೇಷದಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.