ETV Bharat / state

ಕಲಬುರಗಿಯ ಇಬ್ಬರು ಯುವತಿಯರು ಪಿಎಸ್​​ಐ ಆಗಿ ಆಯ್ಕೆ - Kalburgi two girls selected for PIS

ಇತ್ತೀಚೆಗೆ ಪ್ರಕಟಗೊಂಡ ಪೊಲೀಸ್​​​ ಸಬ್ ಇನ್ಸ್​​ಪೆಕ್ಟರ್​​​​​ (ಪಿಎಸ್‍ಐ) ಹುದ್ದೆಗಳಿಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಇಬ್ಬರು ಯುವತಿಯರು ಆಯ್ಕೆಯಾಗಿದ್ದಾರೆ..

Kalburgi  two young girls selected for PIS
ಕಲಬುರಗಿಯ ಇಬ್ಬರು ಯುವತಿಯರು ಪಿಎಸ್​​ಐಗೆ ಆಯ್ಕೆ
author img

By

Published : Jan 22, 2022, 4:40 PM IST

Updated : Jan 23, 2022, 7:13 AM IST

ಕಲಬುರಗಿ: ಸಾಧಿಸುವ ಛಲ ಹೊಂದಿದ್ದರೆ ಯಾರು ಬೇಕಾದ್ರು ಸಾಧನೆ ಮಾಡಬಹುದು ಎಂಬುವುದಕ್ಕೆ ಜಿಲ್ಲೆಯ ಇಬ್ಬರು ಯುವತಿಯರು ಸಾಕ್ಷಿಯಾಗಿದ್ದಾರೆ.

ಇತ್ತೀಚೆಗೆ ಪ್ರಕಟಗೊಂಡ ಪೊಲೀಸ್​​​ ಸಬ್ ಇನ್ಸ್​​ಪೆಕ್ಟರ್​​​​​ (ಪಿಎಸ್‍ಐ) ಹುದ್ದೆಗಳ ನೇಮಕಾತಿಯಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ರೇವತಿ ಎಸ್. ಪಾಟೀಲ್ ಹಾಗೂ ಸಂಧ್ಯಾರಾಣಿ ಎಚ್. ಕುರನಳ್ಳಿ ಆಯ್ಕೆಯಾಗಿದ್ದಾರೆ.

ಕಲ್ಯಾಣ ಕರ್ನಾಟಕ ವೃಂದದ 25 ಹುದ್ದೆಗಳ ನೇಮಕಾತಿಯಲ್ಲಿ ರೇವತಿ 14ನೇ ರ‍್ಯಾಂಕ್ ಹಾಗೂ ಸಂಧ್ಯಾರಾಣಿ 25ನೇ ರ‍್ಯಾಂಕ್ ಪಡೆದಿದ್ದಾರೆ. ರೇವತಿ ಸದ್ಯ ಸಿಂದಗಿ ತಾಲೂಕಿನ ಕಲಕೇರಿ ಪೊಲೀಸ್​​​ ಠಾಣೆಯಲ್ಲಿ ಕಳೆದ ವರ್ಷದಿಂದ ಕಾನ್ಸ್​​​​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಪಾಸ್ ಆದ ಗ್ರಾಮೀಣ ಕೃಷಿಕನ ಮಗಳು!

ಇನ್ನು ಸಂಧ್ಯಾರಾಣಿ ಹುಸೇನಪ್ಪ ಕುರನಳ್ಳಿ ಅವರ ನೀರಾವರಿ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದರು‌. ಕೆಲಸದ ಒತ್ತಡದ ನಡುವೆಯೂ ಈ ಇಬ್ಬರು ಯುವತಿಯರು ಗುರಿ ಮುಟ್ಟುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 23, 2022, 7:13 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.