ಕಲಬುರಗಿ: ಮಹಾನಗರ ಪಾಲಿಕೆಯ ಕಾಂಗ್ರೆಸ್ ಭದ್ರಕೊಟೆ ಒಡೆದು ಬಿರುಸಿನ ಪೈಪೋಟಿ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
55 ವಾರ್ಡ್ ಹೊಂದಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 27 ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ರೆ, ಬಿಜೆಪಿ 23 ಸ್ಥಾನಗಳಲ್ಲಿ ಮತ್ತು ಜೆಡಿಎಸ್ 4 ವಾರ್ಡ್ಗಳಲ್ಲಿ ವಿಜಯದ ಪತಾಕೆ ಹಾರಿಸಿದೆ. ಆದ್ರೆ ಮ್ಯಾಜಿಕ್ ಸಂಖ್ಯೆ 28 ಇದ್ದು, ಯಾವುದೇ ಪಕ್ಷ ಈ ಸಂಖ್ಯೆ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಕಾರಣ 4 ಸ್ಥಾನ ಪಡೆದಿರುವ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ.
ಈ ಬಾರಿ ಪಾಲಿಕೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬಿಸಿಬಿ ನಿಗದಿಯಾಗಿದೆ. ಎರಡು ಪಕ್ಷದಲ್ಲಿ ಅಭ್ಯರ್ಥಿಗಳು ಇರುವುದರಿಂದ ಅಧಿಕಾರ ಗದ್ದುಗೆ ಹಿಡಿಯಲು ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜಂಗಿಕುಸ್ತಿ ನಡೆಯುವುದು ಬಹುತೇಖ ಖಚಿತವಾಗಿದೆ. ಜೆಡಿಎಸ್ 4, ಒಂದು ಎಂಪಿ, ಮೂವರು ಎಂಎಲ್ಎ ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರ ಬೆಂಬಲ ಪಡೆದು ಬಿಜೆಪಿ ಅಧಿಕಾರ ರಚನೆಗೆ ಕಸರತ್ತು ಮಾಡಬಹುದು.
- " class="align-text-top noRightClick twitterSection" data="">
ಜೆಡಿಎಸ್ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ರೆ 31 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರ ರಚನೆ ಮಾಡಲಿದೆ. ಆದ್ರೆ ಜೆಡಿಎಸ್ ಬೆಂಬಲ ಯಾರಿಗೆ ಸಿಗಲಿದೆ ನೋಡಬೇಕಿದೆ. ಸದ್ಯಕ್ಕೆ ಯಾವುದೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಜೆಡಿಎಸ್ ನಡೆ ಬಹು ಪ್ರಮುಖ್ಯತೆ ಪಡೆಯಲಿದೆ.
ಇನ್ನು ಕಳೆದ 40 ವರ್ಷಗಳಿಂದ ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆ ಅಲಂಕರಿಸಿದ ಕಾಂಗ್ರೆಸ್, ಕಳೆದ ಬಾರಿ ಕಾಂಗ್ರೆಸ್ ಆಂತರಿಕ ಕಲಹದ ಲಾಭ ಪಡೆದು ಬಿಜೆಪಿ ಪಕ್ಷ ಮೇಯರ್ ಗದ್ದುಗೆ ಹಿಡಿದಿತ್ತು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ದಿವಂಗತ ಖಮರುಲ್ ಇಸ್ಲಾಂ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಮಹತ್ವದ ಪಾತ್ರ ವಹಿಸುತ್ತಿದ್ದರು. ಈ ಇಬ್ಬರು ನಾಯಕರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಪಾಲಿಕೆ ಚುನಾವಣೆ ಎದುರಿಸಿದ್ದು, ಕೈಗೆ ಹಿನ್ನೆಡೆಯಾಗಿದ್ದು ಸ್ಪಷ್ಟವಾಗಿದೆ. ಈ ಬಾರಿ ಬಿಜೆಪಿ ನಾಯಕ ರವಿಕುಮಾರ ರಾಜಕೀಯ ರಣತಂತ್ರ ಮತ್ತೆ ವರ್ಕೌಟ್ ಆಗಿದೆ.
ಸದ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಯಾವ ಪಕ್ಷದ ಗಾಳ ಹೇಗಿರುತ್ತೆ? ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಕಾಯ್ದು ನೋಡಬೇಕಿದೆ.
ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ವಾರ್ಡ್ 1 - ಪುತಳಿ ಬೇಗಂ
ವಾರ್ಡ್ 3 - ಮಹಮದ್ ಅಬ್ದುಲ್ ಅಹಿಮ್
ವಾರ್ಡ್ 4 - ರಿಯಾಜ್ ಅಹ್ಮದ್
ವಾರ್ಡ್ 10- ಹೀನಾ ಬೇಗಂ
ವಾರ್ಡ್ 12 - ಪ್ರಕಾಶ ಕಪನೂರ
ವಾರ್ಡ್ 13 - ತಹಶೀನಾ ಬೇಗಂ
ವಾರ್ಡ್ 14 - ಅಲಿಖಾನ್ ಮಹ್ಮದಖಾನ್
ವಾರ್ಡ್ 15 - ನಜ್ಮಾ ಬೇಗಂ
ವಾರ್ಡ್ 17 - ಅಯಾಸ್ ಖಾನ್
ವಾರ್ಡ್ 18- ಸೈಯದ್ ಅಹ್ಮದ್
ವಾರ್ಡ್ 19- ಪ್ರವೀಣಾ ಸುಲ್ತಾನ
ವಾರ್ಡ್ 21- ಸೈಯದ್ ಅಸ್ಮಕ್
ವಾರ್ಡ್ 22- ಸೈಯದ್ ನಜ್ಮೋದೀನ್
ವಾರ್ಡ್ 26- ಅನುಪಮಾ ರಮೇಶ ಕಮಕನೂರ
ವಾರ್ಡ್ 28- ಸೈಯಿದಾ ನಶ್ರಿಂ
ವಾರ್ಡ್ 29- ಮಹ್ಮದ ಇಮ್ರಾನ್
ವಾರ್ಡ್ 33- ರಾಗಮ್ಮ
ವಾರ್ಡ್ 39- ರೇಣುಕಾ ಪರುಶರಾಮ
ವಾರ್ಡ್ 40- ಶೇಖ ಹುಸೇಸ್ ಅಬ್ದುಲ್ ಕರಿಂ
ವಾರ್ಡ್ 44- ಸಚಿನ ಶಿರವಾಳ
ವಾರ್ಡ್ 45 - ತೃಪ್ತಿ ಲಾಕೆ
ವಾರ್ಡ್ 49- ಲತಾ ರಾಠೋಡ್
ವಾರ್ಡ್ 53- ಯಲ್ಲಪ್ಪ ನಾಯಕೋಡಿ
ವಾರ್ಡ್ 54- ನಿಂಗಮ್ಮ ಚಂದಪ್ಪ ಕಟ್ಟಿಮನಿ
ಬಿಜೆಪಿ ಅಭ್ಯರ್ಥಿಗಳು
ವಾರ್ಡ್ 2- ಸುನೀಲ್ ಮಚ್ಚಟ್ಟಿ
ವಾರ್ಡ್ 5- ಬಸವರಾಜ ಮುನ್ನಳ್ಳಿ
ವಾರ್ಡ್ 6- ಅರುಣಾದೇವಿ
ವಾರ್ಡ್ 7- ಕೃಷ್ಣಾ ನಾಯಕ
ವಾರ್ಡ್ 8- ಸಚಿನ ಹೊನ್ನಾ
ವಾರ್ಡ್ 9- ಸುನೀಲ್ ಧನಶೇಟ್ಟಿ.
ವಾರ್ಡ್ 11- ಪ್ರಭು ಹಾದಿಮನಿ
ವಾರ್ಡ್ 23- ದಿಗಂಬರ್ ಮಾಗನಗೇರಿ
ವಾರ್ಡ್ 24- ಪ್ರಿಯಾಂಕಾ ಭೂವಿ
ವಾರ್ಡ್ 25- ಶಿವಾನಂದ ಪಿಸ್ತಿ
ವಾರ್ಡ್ 30- ಮೇಘನಾ ಕಳಸ್ಕರ್
ವಾರ್ಡ್ 31- ಶಾಂತಾಬಾಯಿ ಹಲ್ಲಮಠ
ವಾರ್ಡ್ 32- ಯಂಕಮ್ಮ
ವಾರ್ಡ್ 35- ವಿಜಯಕುಮಾರ ಸೇವಲಾನಿ
ವಾರ್ಡ್ 37- ರೇಣುಕಾ ರಾಮು ಗುಮ್ಮಟ
ವಾರ್ಡ್ 38- ಗುರುರಾಜ ಪಟ್ಟಣ
ವಾರ್ಡ್ 47 - ಹೊನ್ನಮ್ಮ
ವಾರ್ಡ್ 46 - ವಿಶಾಲ ಧರ್ಗಿ
ವಾರ್ಡ್ 48- ವೀರಣ್ಣ
ವಾರ್ಡ್ 50 - ಮಲ್ಲಿಕಾರ್ಜುನ ಉದನೂರ
ವಾರ್ಡ್ 51 - ಪಾರ್ವತಿ ರಾಜೀವ ದೇವದುರ್ಗ
ವಾರ್ಡ್ 52 - ಶೋಭಾ ದೇಸಾಯಿ
ವಾರ್ಡ್ 55 - ಅರ್ಚನಾ ಬಸವರಾಜ
ಜೆಡಿಎಸ್ ಅಭ್ಯರ್ಥಿಗಳು:
ವಾರ್ಡ್ 16 - ವಿಜಯಲಕ್ಷ್ಮಿ ರೆಡ್ಡಿ
ವಾರ್ಡ್ 27 - ಸಾಜೀದ್ ಕಲ್ಯಾಣಿ
ವಾರ್ಡ್ 34 - ವಿಶಾಲ ನವರಂಗ
ವಾರ್ಡ್ 42 - ಅಲಿಮುದ್ದಿನ್
ಪಕ್ಷೇತರ ಅಭ್ಯರ್ಥಿ
ವಾರ್ಡ್ ನಂಬರ್ 36 ರಲ್ಲಿ ಪಕ್ಷೇತರ ಅಭ್ಯರ್ಥಿ ಶಂಬುಲಿಂಗ ಬಳಬಟ್ಟಿ ಗೆದ್ದಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಪೊಲೀಸರೊಂದಿಗೆ ಏಜೆಂಟ್ ಕಿರಿಕ್.. ಬೆಳಗಾವಿಯಲ್ಲಿ ನಿಯಮ ಉಲ್ಲಂಘಿಸಿ ವಿಜಯೋತ್ಸವ