ETV Bharat / state

ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ: ಎಪಿಎಂಸಿ ಮೊರೆ ಹೋದ ಕಲಬುರಗಿ ರೈತರು

author img

By

Published : Feb 4, 2021, 7:43 PM IST

ಸರ್ಕಾರ ನಫೆಡ್ ಮೂಲಕ 6000 ರೂ. ಎಂಎಸ್​​ಪಿ ದರದಲ್ಲಿ ತೊಗರಿ ಖರೀದಿಸಲು ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಈ ಬಾರಿ ಪ್ರೋತ್ಸಾಹಧನ ಕೂಡ ಕೊಡುತ್ತಿಲ್ಲ. ಖರೀದಿ ಕೇಂದ್ರ ಕೂಡ ತೆರೆಯುತ್ತಿಲ್ಲ. ಅಲ್ಲದೆ ಕೇಂದ್ರ ನಿಗದಿಪಡಿಸಿದ ದರಕ್ಕಿಂತ ಇ-ಟೆಂಡರ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಬೆಲೆ ಬರುತ್ತಿರುವುದರಿಂದ ರೈತರು ಎಪಿಎಂಸಿಯಲ್ಲಿ ತೊಗರಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ‌.

kalburagi farmers  went to the APMC market news
ಎಪಿಎಂಸಿ ಮೊರೆ ಹೋದ ಕಲಬುರಗಿ ರೈತರು

ಕಲಬುರಗಿ: ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಸಿಗುತ್ತಿರುವ ಹಿನ್ನೆಲೆ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇ ಟೆಂಡರ್ ಹರಾಜು ಪ್ರಕ್ರಿಯೆ ಮೂಲಕ ತೊಗರಿ ಮಾರಾಟ ಮಾಡುತ್ತಿದ್ದಾರೆ.

ಎಪಿಎಂಸಿ ಮೊರೆ ಹೋದ ಕಲಬುರಗಿ ರೈತರು

ಓದಿ: 2023ರ ಅಂತ್ಯಕ್ಕೆ ಎತ್ತಿನ ಹೊಳೆ ಯೋಜನೆ ಪೂರ್ಣ: ಸರ್ಕಾರದ ಭರವಸೆ

ಸರ್ಕಾರ ನಫೆಡ್ ಮೂಲಕ 6000 ರೂ. ಎಂಎಸ್​​ಪಿ ದರದಲ್ಲಿ ತೊಗರಿ ಖರೀದಿಸಲು ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಈ ಬಾರಿ ಪ್ರೋತ್ಸಾಹಧನ ಕೂಡ ಕೊಡುತ್ತಿಲ್ಲ. ಖರೀದಿ ಕೇಂದ್ರ ಕೂಡ ತೆರೆಯುತ್ತಿಲ್ಲ. ಅಲ್ಲದೆ ಕೇಂದ್ರ ನಿಗದಿಪಡಿಸಿದ ದರಕ್ಕಿಂತ ಇ-ಟೆಂಡರ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಬೆಲೆ ಬರುತ್ತಿರುವುದರಿಂದ ರೈತರು ಎಪಿಎಂಸಿಯಲ್ಲಿ ತೊಗರಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ‌.

ಇ-ಟೆಂಡರ್ ಹರಾಜಿನಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 6200ರಿಂದ 6300 ರೂ.ವರೆಗೆ ದರ ಬರುತ್ತಿದೆ. ನಿನ್ನೆ 6200 ರೂ. ಬೆಲೆ ಇದ್ದ ಕಾರಣ ಒಂದೇ ದಿನದಲ್ಲಿ ಸುಮಾರು 9 ಸಾವಿರ ಕ್ವಿಂಟಾಲ್ ತೊಗರಿ ಮಾರಾಟವಾಗಿದೆ.

ಸರ್ಕಾರದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದರೆ ಹಣ ಬರಲು 15 ದಿನವಾದರೂ ಬೇಕು. ಇ-ಟೆಂಡರ್ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿದರೆ ಅಂದೇ ಕೈಗೆ ಹಣ ಸಿಗುತ್ತದೆ. ಹೀಗಾಗಿ ಎಪಿಎಂ‌ಸಿಯಲ್ಲಿ ತೊಗರಿ ಮಾರಾಟಕ್ಕೆ ರೈತರು ಮುಗಿಬೀಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.