ETV Bharat / state

ಕಲಬುರಗಿ ಗುತ್ತಿಗೆದಾರನ ಕೊಲೆ ಪ್ರಕರಣ: ಜಿಪಂ ಸದಸ್ಯ ಸೇರಿ 9 ಮಂದಿ ವಿರುದ್ಧ ಕೇಸ್​ ದಾಖಲು - ಕಲಬುರಗಿ ಶರಣಸಿರಸಗಿ ಕೊಲೆ ಸುದ್ದಿ

ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನ್ನು ಬರ್ಬರವಾಗಿ ಕೊಲೆಗೈದ ಘಟನೆ ತಾಲೂಕಿನ ಶರಣಸಿರಸಗಿ ಬಳಿ ನಡೆದಿದೆ. ಸ್ವಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯ ಕಾರಿಗೆ ಕಾರಿನಿಂದ ಡಿಕ್ಕಿ ಹೊಡೆದು ಮಾರಕಾಸ್ತ್ರದಿಂದ ಕೊಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ.

ಕಲಬುರಗಿ ಶರಣಸಿರಸಗಿ ಶಿವಲಿಂಗ ಹತ್ಯೆ
author img

By

Published : Nov 6, 2019, 3:42 AM IST

Updated : Nov 6, 2019, 7:11 AM IST

ಕಲಬುರಗಿ : ಕಾರಿಗೆ ಕಾರಿನಿಂದ ಡಿಕ್ಕಿ ಹೊಡೆಸಿ, ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ತಾಲೂಕಿನ ಶರಣಸಿರಸಗಿ ಬಳಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಜೇವರ್ಗಿ ತಾಲೂಕಿನ ಮಯೂರ ಗ್ರಾಮದ ಶಿವಲಿಂಗ ಬಾವಿಕಟ್ಟಿ(46) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ದೇಹದ ಮೇಲೆ ಮನಬಂದಂತೆ ಕೊಚ್ಚಿ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಗಾಣಗಾಪುರದಿಂದ ಕಲಬುರಗಿ ಮೂಲಕ ಸ್ವಗ್ರಾಮ ಮಯೂರಕ್ಕೆ ತೆರಳುತ್ತಿದ್ದ ವೇಳೆ ಹತ್ಯೆ ಮಾಡಲಾಗಿದೆ. ಮುಖಾಮುಖಿ ಡಿಕ್ಕಿಯಾದ ಕಾರು, ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಹೋಗಿದೆ. ನಂತರ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು, ಕಾರಿನೊಳಗಿದ್ದ ಶಿವಲಿಂಗನನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದ್ದಾರೆ. ಈ ವೇಳೆ ಮುಂಗೈ ಕತ್ತರಿಸಿ ಹೋಗಿದ್ದು, ತೀವ್ರ ರಕ್ತಸ್ರಾವದಿಂದ ಶಿವಲಿಂಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಕಲಬುರಗಿ ಜಿಲ್ಲೆ ಶರಣಸಿರಸಗಿ ಶಿವಲಿಂಗಪ್ಪ ಹತ್ಯೆ

ಜಾಮೀನು ಪಡೆದು ಹೊರ ಬಂದ ಒಂದೇ ದಿನಕ್ಕೆ ಕೊಲೆ

ಕ್ಲಾಸ್-1 ಗುತ್ತಿಗೆದಾರನಾಗಿದ್ದ ಶಿವಲಿಂಗನ ಜೊತೆ ಗುತ್ತಿಗೆ ಕೆಲಸ ಪಡೆಯೋ ವಿಷಯದಲ್ಲಿ ಆಗಾಗ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಸಂಘರ್ಷಕ್ಕಿಳಿಯುತ್ತಿದ್ದ ಎನ್ನಲಾಗಿದೆ. ಅಲ್ಲದೆ ಶಾಂತಪ್ಪ ಕೋಡ್ಲಿ ಮತ್ತು ಶಿವಲಿಂಗನ ಗುಂಪುಗಳ ತಲಾ 22 ಜನರ ವಿರುದ್ಧ ಪರಸ್ಪರ ದೂರು ದಾಖಲಾಗಿತ್ತು. ಸೋಮವಾರವಷ್ಟೆ ಶಿವಲಿಂಗ ಜಾಮೀನು ಪಡೆದು ಹೊರಬಂದಿದ್ದು, ಒಂದು ದಿನ ಕಳೆಯುವುದರೊಳಗಾಗಿ ಕೊಲೆಯಾಗಿ ಹೋಗಿದ್ದಾನೆ.

ಕೊಲೆಗೆ ಕಾರಣವಾಯ್ತಾ ಚುನಾವಣೆ ಸ್ಪರ್ಧೆ!

ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ತಮ್ಮ ವಾಹನವನ್ನೂ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕಾರು ಶಾಂತಪ್ಪ ಕೋಡ್ಲಿಗೆ ಸೇರಿದ್ದೆನ್ನಲಾಗಿದೆ. ಮೊದಲು ಸ್ನೇಹಿತರಾಗಿಯೇ ಇದ್ದ ಶಾಂತಪ್ಪ ಮತ್ತು ಶಿವಲಿಂಗಪ್ಪ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶತ್ರುಗಳಾಗಿ ಮಾರ್ಪಟ್ಟಿದ್ದರು. ಗುತ್ತಿಗೆ ಕೆಲಸ ಹಾಗೂ ಮರಳು ಸಾಗಾಟ ವಿಷಯದಲ್ಲಿಯೂ ತಿಕ್ಕಾಟ ನಡೆದಿತ್ತು ಎನ್ನಲಾಗಿದೆ. ಜೊತೆಗೆ ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಶಾಂತಪ್ಪ ಕೋಡ್ಲಿ ವಿರುದ್ಧ ಶಿವಲಿಂಗ ಸ್ಪರ್ಧೆಗಿಳಿಯಲು ತಯಾರಿ ನಡೆಸಿದ್ದ ಎನ್ನಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಂತಪ್ಪ ಕೋಡ್ಲಿ ಸೇರಿದಂತೆ ಒಟ್ಟು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾಗಿ ನಾಗರಾಜ್ ಮಾಹಿತಿ ನೀಡಿದ್ದಾರೆ.

Intro:ಕಾರಿಗಿ ಕಾರಿನಿಂದ ಢಿಕ್ಕಿ ಹೊಡೆಯಿಸಿ, ಸಿನೀಮಿಯಾ ರೀತಿಯಲ್ಲಿ ದಾಳಿ ಮಾಡಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ತಾಲೂಕಿನ ಶರಣಸಿರಸಗಿ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜೇವರ್ಗಿ ತಾಲೂಕಿನ ಮಯೂರ ಗ್ರಾಮದ ಶಿವಲಿಂಗ ಬಾವಿಕಟ್ಟಿ(46) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ದೇಹದ ಮೇಲೆ ಮನಬಂದಂತೆ ಕೊಚ್ಚಿ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಕಾರಿಗೆ ಎದುರಿನಿಂದ ಢಿಕ್ಕಿ ಹೊಡೆದು, ಅದರೊಳಗಿದ್ದ ವ್ಯಕ್ತಿಯನ್ನು ಹೊರಗೆಳೆದು ಸಿನೀಮಿಯಾ ರೀತಿಯಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ತಾಲೂಕಿನ ಶರಣಸಿರಸಗಿ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಲಿಂಗ ಬಾವಿಕಟ್ಟಿ(46) ಎಂದು ಗುರುತಿಸಲಾಗಿದೆ. ಗಾಣಗಾಪುರದಿಂದ ಕಲಬುರ್ಗಿ ಮೂಲಕ ಸ್ವಗ್ರಾಮ ಮಯೂರಕ್ಕೆ ತೆರಳುತ್ತಿದ್ದ ವೇಳೆ ಹತ್ಯೆ ಮಾಡಲಾಗಿದೆ. ಮುಖಾಮುಖಿ ಢಿಕ್ಕಿಯಾದಾಗ, ಕಾರು ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಹೋಗಿದೆ. ಈ ವೇಳೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು, ಕಾರಿನೊಳಗಿದ್ದ ಶಿವಲಿಂಗನನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದ್ದಾರೆ. ಈ ವೇಳೆ ಮುಂಗೈ ಸಹ ಕತ್ತರಿಸಿ ಹೋಗಿದೆ. ತೀವ್ರ ರಕ್ತಸ್ರಾವದಿಂದ ಶಿವಲಿಂಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೈಟ್-1: ಸೋಮಲಿಂಗ ಬಾವಿಕಟ್ಟಿ, ಶಿವಲಿಂಗನ ಸಹೋದರ

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಕೊಲೆಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಕೋಡ್ಲಿ ಹೆಸರು ತಳಕು ಹಾಕಿಕೊಂಡಿದೆ. ಶಾಂತಪ್ಪ ಕೋಡ್ಲಿ ಮತ್ತು ಅತನ ಸಂಬಂಧಿಕರು ಸೇರಿ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಲಾಸ್-1 ಗುತ್ತಿಗೆದಾರನಾಗಿದ್ದ ಶಿವಲಿಂಗನ ಜೊತೆ ಗುತ್ತಿಗೆ ಕೆಲಸ ಪಡೆಯೋ ವಿಷಯದಲ್ಲಿ ಆಗಾಗ ಶಾಂತಪ್ಪ ಸಂಘರ್ಷಕ್ಕಿಳಿಯುತ್ತಿದ್ದ ಎನ್ನಲಾಗಿದೆ. ಶಾಂತಪ್ಪ ಕೋಡ್ಲಿ ಮತ್ತು ಶಿವಲಿಂಗನ ಗುಂಪುಗಳ ತಲಾ 22 ಜನರ ವಿರುದ್ಧ ಪರಸ್ಪರ ದೂರು ದೂಖಲಿಸಿದ್ದರು. ನಿನ್ಮೆಯಷ್ಟೆ ಕೊಲೆಯಾದ ಶಿವಲಿಂಗ ಜಾಮೀನು ಪಡೆದು ಹೊರಬಂದಿದ್ದ, ಜಾಮೀಣುಬಪಡೆದು ಒಂದು ದಿನ ಕಳೆಯುವುದರೊಳಗಾಗಿ ಶಿವಲಿಂಗನ ಬರ್ಬರ ಹತ್ಯೆಯಾಗಿ ಹೋಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಕೋಡ್ಲಿ ಮೊದಲನೇ ಆರೋಪಿಯಾಗಿದ್ದಾನೆ. ಆತ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾಗಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಬೈಟ್-2. ಎಂ.ಎನ್.ನಾಗರಾಜ್, ಪೊಲೀಸ್ ಕಮೀಷನರ್, ಕಲಬುರ್ಗಿ.

ಬರ್ಬರವಾಗಿ ಹತ್ಯೆಗೈದ ನಂತರ ದುಷ್ಕರ್ಮಿಗಳು ತಮ್ಮ ವಾಹನವನ್ನೂ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಿಟ್ಟು ಹೋದ ಸ್ಕಾರ್ಪಿಯೋ ಶಾಂತಪ್ಪ ಕೋಡ್ಲಿಗೆ ಸೇರಿದ್ದೆನ್ನಲಾಗಿದೆ. ಮೊದಲು ಸ್ನೇಹಿತರಾಗಿಯೇ ಇದ್ದ ಶಾಂತಪ್ಪ ಮತ್ತು ಶಿವಲಿಂಗಪ್ಪ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶತೃಗಳಾಗಿ ಮಾರ್ಪಟ್ಟಿದ್ದರು. ಗುತ್ತಿಗೆ ಕೆಲಸ ಹಾಗೂ ಮರಳು ಸಾಗಾಟ ವಿಷಯದಲ್ಲಿಯೂ ತಿಕ್ಕಾಟ ನಡೆದಿತ್ತು ಎನ್ನಲಾಗಿದೆ. ಜೊತೆಗೆ ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಶಾಂತಪ್ಪ ಕೋಡ್ಲಿ ವಿರುದ್ಧವೇ ಶಿವಲಿಂಗ ಸ್ಪರ್ಧೆಗಲಿಯಲು ತಯಾರಿ ನಡೆಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕೊಲೆ ನಡೆದಿದ್ದು, ತನಿಖೆ ನಂತರ ಸ್ಪಷ್ಟ ಚಿತ್ರಣ ಹೊರಬರಬೇಕಿದೆ.Body:ಕಾರಿಗಿ ಕಾರಿನಿಂದ ಢಿಕ್ಕಿ ಹೊಡೆಯಿಸಿ, ಸಿನೀಮಿಯಾ ರೀತಿಯಲ್ಲಿ ದಾಳಿ ಮಾಡಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ತಾಲೂಕಿನ ಶರಣಸಿರಸಗಿ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜೇವರ್ಗಿ ತಾಲೂಕಿನ ಮಯೂರ ಗ್ರಾಮದ ಶಿವಲಿಂಗ ಬಾವಿಕಟ್ಟಿ(46) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ದೇಹದ ಮೇಲೆ ಮನಬಂದಂತೆ ಕೊಚ್ಚಿ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಕಾರಿಗೆ ಎದುರಿನಿಂದ ಢಿಕ್ಕಿ ಹೊಡೆದು, ಅದರೊಳಗಿದ್ದ ವ್ಯಕ್ತಿಯನ್ನು ಹೊರಗೆಳೆದು ಸಿನೀಮಿಯಾ ರೀತಿಯಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ತಾಲೂಕಿನ ಶರಣಸಿರಸಗಿ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಲಿಂಗ ಬಾವಿಕಟ್ಟಿ(46) ಎಂದು ಗುರುತಿಸಲಾಗಿದೆ. ಗಾಣಗಾಪುರದಿಂದ ಕಲಬುರ್ಗಿ ಮೂಲಕ ಸ್ವಗ್ರಾಮ ಮಯೂರಕ್ಕೆ ತೆರಳುತ್ತಿದ್ದ ವೇಳೆ ಹತ್ಯೆ ಮಾಡಲಾಗಿದೆ. ಮುಖಾಮುಖಿ ಢಿಕ್ಕಿಯಾದಾಗ, ಕಾರು ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಹೋಗಿದೆ. ಈ ವೇಳೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು, ಕಾರಿನೊಳಗಿದ್ದ ಶಿವಲಿಂಗನನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದ್ದಾರೆ. ಈ ವೇಳೆ ಮುಂಗೈ ಸಹ ಕತ್ತರಿಸಿ ಹೋಗಿದೆ. ತೀವ್ರ ರಕ್ತಸ್ರಾವದಿಂದ ಶಿವಲಿಂಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೈಟ್-1: ಸೋಮಲಿಂಗ ಬಾವಿಕಟ್ಟಿ, ಶಿವಲಿಂಗನ ಸಹೋದರ

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಕೊಲೆಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಕೋಡ್ಲಿ ಹೆಸರು ತಳಕು ಹಾಕಿಕೊಂಡಿದೆ. ಶಾಂತಪ್ಪ ಕೋಡ್ಲಿ ಮತ್ತು ಅತನ ಸಂಬಂಧಿಕರು ಸೇರಿ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಲಾಸ್-1 ಗುತ್ತಿಗೆದಾರನಾಗಿದ್ದ ಶಿವಲಿಂಗನ ಜೊತೆ ಗುತ್ತಿಗೆ ಕೆಲಸ ಪಡೆಯೋ ವಿಷಯದಲ್ಲಿ ಆಗಾಗ ಶಾಂತಪ್ಪ ಸಂಘರ್ಷಕ್ಕಿಳಿಯುತ್ತಿದ್ದ ಎನ್ನಲಾಗಿದೆ. ಶಾಂತಪ್ಪ ಕೋಡ್ಲಿ ಮತ್ತು ಶಿವಲಿಂಗನ ಗುಂಪುಗಳ ತಲಾ 22 ಜನರ ವಿರುದ್ಧ ಪರಸ್ಪರ ದೂರು ದೂಖಲಿಸಿದ್ದರು. ನಿನ್ಮೆಯಷ್ಟೆ ಕೊಲೆಯಾದ ಶಿವಲಿಂಗ ಜಾಮೀನು ಪಡೆದು ಹೊರಬಂದಿದ್ದ, ಜಾಮೀಣುಬಪಡೆದು ಒಂದು ದಿನ ಕಳೆಯುವುದರೊಳಗಾಗಿ ಶಿವಲಿಂಗನ ಬರ್ಬರ ಹತ್ಯೆಯಾಗಿ ಹೋಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಕೋಡ್ಲಿ ಮೊದಲನೇ ಆರೋಪಿಯಾಗಿದ್ದಾನೆ. ಆತ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾಗಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಬೈಟ್-2. ಎಂ.ಎನ್.ನಾಗರಾಜ್, ಪೊಲೀಸ್ ಕಮೀಷನರ್, ಕಲಬುರ್ಗಿ.

ಬರ್ಬರವಾಗಿ ಹತ್ಯೆಗೈದ ನಂತರ ದುಷ್ಕರ್ಮಿಗಳು ತಮ್ಮ ವಾಹನವನ್ನೂ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಿಟ್ಟು ಹೋದ ಸ್ಕಾರ್ಪಿಯೋ ಶಾಂತಪ್ಪ ಕೋಡ್ಲಿಗೆ ಸೇರಿದ್ದೆನ್ನಲಾಗಿದೆ. ಮೊದಲು ಸ್ನೇಹಿತರಾಗಿಯೇ ಇದ್ದ ಶಾಂತಪ್ಪ ಮತ್ತು ಶಿವಲಿಂಗಪ್ಪ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶತೃಗಳಾಗಿ ಮಾರ್ಪಟ್ಟಿದ್ದರು. ಗುತ್ತಿಗೆ ಕೆಲಸ ಹಾಗೂ ಮರಳು ಸಾಗಾಟ ವಿಷಯದಲ್ಲಿಯೂ ತಿಕ್ಕಾಟ ನಡೆದಿತ್ತು ಎನ್ನಲಾಗಿದೆ. ಜೊತೆಗೆ ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಶಾಂತಪ್ಪ ಕೋಡ್ಲಿ ವಿರುದ್ಧವೇ ಶಿವಲಿಂಗ ಸ್ಪರ್ಧೆಗಲಿಯಲು ತಯಾರಿ ನಡೆಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕೊಲೆ ನಡೆದಿದ್ದು, ತನಿಖೆ ನಂತರ ಸ್ಪಷ್ಟ ಚಿತ್ರಣ ಹೊರಬರಬೇಕಿದೆ.Conclusion:
Last Updated : Nov 6, 2019, 7:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.