ಕಲಬುರಗಿ: 'ಕೈ ಮುಗಿತಿನ್ರೀ ಯಪ್ಪಾ ಹೊರಗ ಬರಬ್ಯಾಡ್ರಿ' ಎಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಸವಾರನಿಗೆ ಕೈಜೋಡಿಸಿ ಮನವಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಮಾಹಾಮಾರಿ ಕೊರೊನಾ ಜನರ ಪ್ರಾಣ ತಿನ್ನುತ್ತಿದೆ. ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಟ್ರಾಫಿಕ್ ಪಿಎಸ್ ಐ ಭಾರತಿಬಾಯಿ ದನ್ನಿ ಅವರು, ಬೈಕ್ ಸವಾರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಸಾವು-ನೋವುಗಳು ಸಹ ಹೆಚ್ಚು ಸಂಭವಿಸುತ್ತಿವೆ. ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ, ಆಕ್ಸಿಜನ್ ಸಮಸ್ಯೆ ಕಾಡುತ್ತಿದೆ. ದಯವಿಟ್ಟು ಹೊರಗಡೆ ಬರದಿರಿ. ಮನೆಯಲ್ಲೇ ನೀವು ಸುರಕ್ಷಿತವಾಗಿರಿ. ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಿ ಎಂದು ಭಾರತಿಬಾಯಿ ಅವರು ಬೈಕ್ ಸವಾರಲ್ಲಿ ಬೇಡಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸಿದರು ಸಹ ಜನ ಕೇಳುತ್ತಿಲ್ಲ. ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದು ಸುತ್ತಾಡುತ್ತಿದ್ದಾರೆ. ಪೊಲೀಸರು ಬೈಕ್ ಸಿಜ್ ಮಾಡಿದ್ರೂ ಸಹ ಜನ ಹೆದರುತ್ತಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಓದಿ: ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ