ಕಲಬುರಗಿ: ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರು ಕಲಬುರಗಿಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಜೊತೆ ನಂಟು ಇಟ್ಟುಕೊಂಡಿದ್ದಾರಾ? ಎಂಬ ಶಂಕೆ ಕಾಡಲಾರಂಭಿಸಿದೆ. ಯಾಕಂದ್ರೆ ಕಳೆದ ರಾತ್ರಿ ಕಲಬುರಗಿಗೆ ಆಗಮಿಸಿದ್ದ ಎನ್‌ಐಎ ಅಧಿಕಾರಿಗಳ ತಂಡ ಇಬ್ಬರು PFI ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದಿದೆ ಎಂದು ತಿಳಿದುಬಂದಿದೆ.
ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬೆಳಗ್ಗೆ ಪಿಎಫ್‌ಐ ಜಿಲ್ಲಾಧ್ಯಕ್ಷ ಎಜಾಜ್ ಅಲಿಯನ್ನು ವಶಕ್ಕೆ ಪಡೆದರು. ರಾತ್ರಿ ಇವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಕೆಲ ಮಹತ್ವದ ದಾಖಲಾತಿಗಳು ದೊರೆತಿವೆ ಎನ್ನಲಾಗುತ್ತಿದೆ. ಎನ್ಐಎ ಅಧಿಕಾರಿಗಳ ಕಾರ್ಯಾಚರಣೆಗೆ ಪಿಎಫ್ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಟಿಪ್ಪು ಸುಲ್ತಾನ್ ಚೌಕ್ ಬಳಿ ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರು, 'ಗೋ ಬ್ಯಾಕ್.. ಗೋ ಬ್ಯಾಕ್..' ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ: ದೇಶಾದ್ಯಂತ ಎನ್‌ಐಎ ದಾಳಿ: 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ಬಂಧನ