ETV Bharat / state

ಕಲಬುರಗಿ: ಕಾಗಿಣಾ ನದಿಗೆ ಈಜಲು ಹೋಗಿದ್ದ ಯುವಕ ನೀರುಪಾಲು

ತನ್ನ ಗೆಳೆಯರೊಂದಿಗೆ ಈಜಲು ಕಾಗಿಣಾ ನದಿಗೆ ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ಬ್ರಿಡ್ಜ್ ಕಂ ಬ್ಯಾರೇಜ್ ಬಳಿಯ ನೀರಿಗೆ ಧುಮುಕಿದಾಗ ಈ ಘಟನೆ ನಡೆದಿದೆ.

Kalaburagi: A youth who went to swim drown in Kagina river
ಕಲಬುರಗಿ: ಕಾಗಿಣಾ ನದಿಗೆ ಈಜಲು ಹೋಗಿದ್ದ ಯುವಕ ನೀರುಪಾಲು
author img

By

Published : Aug 6, 2020, 12:39 PM IST

ಕಲಬುರಗಿ: ಈಜಲು ಹೋಗಿದ್ದ ಯುವಕ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಬಳಿ ನಡೆದಿದೆ.

ಕಲಬುರಗಿ: ಕಾಗಿಣಾ ನದಿಗೆ ಈಜಲು ಹೋಗಿದ್ದ ಯುವಕ ನೀರುಪಾಲು

ಮೃತ ದುರ್ದೈವಿಯನ್ನು ಇಂಗಳಗಿ ಗ್ರಾಮದ ಸಂಪತ್ ಸಂಕ(18) ಎಂದು ಗುರುತಿಸಲಾಗಿದೆ. ತನ್ನ ಗೆಳೆಯರೊಂದಿಗೆ ಈಜಲು ಕಾಗಿಣಾ ನದಿಗೆ ಹೋಗಿದ್ದ ಈತ ಬ್ರಿಡ್ಜ್ ಕಂ ಬ್ಯಾರೇಜ್ ಬಳಿಯ ನೀರಿಗೆ ಧುಮುಕ್ಕಿದ್ದಾನೆ. ದುರದೃಷ್ಟವಶಾತ್ ಸುಳಿಗೆ ಸಿಲುಕಿ ಹೊರಬರಲಾಗದೇ ಸಾವನ್ನಪ್ಪಿದ್ದಾನೆ.

ಇನ್ನೂ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ವಾಡಿ ಪೊಲೀಸರು ಮೀನುಗಾರರ ಸಹಾಯದಿಂದ ಯುವಕನ ಶವ ಹೊರ ತೆಗೆದಿದ್ದಾರೆ. ಯುವಕನ ಸಾವಿನ ಸುದ್ದಿ ಕೇಳಿ ಮೃತನ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.