ಕಲಬುರಗಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಭಾರತ ತಂಡದ ಪ್ರತಿನಿಧಿಯಾಗಿ ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಯ ಅಂತಾರಾಷ್ಟ್ರೀಯ ಕರಾಟೆಪಟು ಮನೋಹರ ಕುಮಾರ ಬೀರನೂರ ಆಯ್ಕೆಯಾಗಿದ್ದಾರೆ. ಇದೇ ಸೆಪ್ಟೆಂಬರ್ 19 ರಿಂದ 21 ರವರೆಗೆ ನಡೆಯುವ 10ನೇ ಶೀಟೋರಿಯೋ ಕರಾಟೆ ಡೂ ಚಾಂಪಿಯನ್‍ಶಿಪ್‌ನಲ್ಲಿ ಮನೋಹರ ನಾಲ್ಕನೇ ಬಾರಿ ಆಯ್ಕೆ ಆಗಿದ್ದಾರೆ ಎಂದು ಸಂಸ್ಥೆಯ ಮಹಿಳಾ ಕಾರ್ಯದರ್ಶಿ ಸುನಿತಾ ದೊಡ್ಡಮನಿ ತಿಳಿಸಿದರು.
ಜಕಾರ್ತದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ಮೆನ್ +84 ಕೆ.ಜಿ ಕುಮಿತ (ಪೈಟ್) ವಿಭಾಗದಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಬೀರನೂರ ಭಾಗವಹಿಸುತ್ತಿದ್ದಾರೆ. ಈ ಮುಂಚೆ ಮನೋಹರ ಕುಮಾರ ಬೀರನೂರ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದು ಸಾಧನೆ ಮಾಡಿದ್ದರು. 2018ರ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿ, ಕಂಚಿನ ಪದಕ ಗೆದ್ದಿದ್ದರು.
ಇದನ್ನೂ ಓದಿ: ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಒಲಿಂಪಿಕ್ ಕಂಚು ವಿಜೇತೆ ಲವ್ಲೀನಾ
ಪ್ರಸಕ್ತ ಸಾಲಿನ ಕರಾಟೆ ಪಂದ್ಯಾವಳಿಯಲ್ಲಿಯೂ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲೆಂದು ಆಲ್ ಇಂಡಿಯಾ ಶೀಟೊ-ರಿಯೋ ಕರಾಟೆ ಡೂ ಯೂನಿಯನ್ ಮತ್ತು ಅಖಿಲ ಕರ್ನಾಟಕ ಸ್ಪೋಟ್ಸ್ ಕರಾಟೆ ಆಸೋಸಿಯೇಶನ್ ಅಧ್ಯಕ್ಷರು ಹಾಗೂ ಮಾಜಿ ಎಂಎಲ್‍ಸಿ ಶಿಹಾನ್ ಸಿ.ಎಸ್.ಅರುಣ್ ಮಾಚಯ್ಯಾ, ಕಲ್ಯಾಣ ಕರ್ನಾಟಕ ಅಧ್ಯಕ್ಷ ದಶರಥ ದುಮ್ಮನ್ಸೂರ್, ಕ್ರೀಡಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಪಿಡಿಎ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಬಹುಮಾನ: ಕಲಬುರಗಿಯ ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ದೊಡ್ಡಪ್ಪ ಅಪ್ಪಾ ಇಂಜಿನಿಯರಿಂಗ್ ಕಾಲೇಜ್‍ನ ಪ್ರತಿಭಾವಂತ ವಿದ್ಯಾರ್ಥಿಗಳ ತಂಡ 12ನೇ 'ಸಿಎಸ್‍ಐ ಇನ್ ಆಫ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ ಪ್ರಾಜೆಕ್ಟ್'ನಲ್ಲಿ 25000 ರೂ. ನಗದು ಹಣದೊಂದಿಗೆ ಎರಡನೇ ಬಹುಮಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರಕಟ ; ನೀರಜ್ ಚೋಪ್ರಾ ಸೇರಿ 11 ಕ್ರೀಡಾಪಟುಗಳ ಹೆಸರು ಘೋಷಣೆ
ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಮತ್ತು ಇನ್ ಆ್ಯಪ್ ಮಾಹಿತಿ ತಂತ್ರಜ್ಞಾನಗಳ ಸಹಯೋಗದೊಂದಿಗೆ ನಡೆದ ಮಹತ್ವದ ಸ್ಪರ್ಧೆಯು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಗಮನಾರ್ಹ ಜಾಣ್ಮೆ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಎಚ್‍ಕೆಇ ಸೊಸೈಟಿಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಕೌನ್ಸಿಲ್ ಸದಸ್ಯರು, ಪ್ರಾಚಾರ್ಯರು, ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
ಆಟಗಾರ್ತಿಗೆ ಬೇಕಿದೆ ಸಹಾಯಹಸ್ತ: ಇನ್ನೊಂದೆಡೆ, ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಪಲ್ಲವಿ ಎರಡು ಚಿನ್ನದ ಪದಕ ಜಯಿಸಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಹದಾಸೆ ಇದೆ. ಆದ್ರೆ ತೀವ್ರ ಆರ್ಥಿಕ ಸಂಕಷ್ಟ ಇವರನ್ನು ಕಾಡುತ್ತಿದೆ. ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ದಾನಿಗಳು ನೆರವು ನೀಡಬೇಕೆಂದು ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು (ಆಗಸ್ಟ್ 3-2023) ಮನವಿ ಮಾಡಿದ್ದರು.
ಇದನ್ನೂ ಓದಿ: ಅಂಗವೈಕಲ್ಯತೆ ಮೀರಿ ಟೆನ್ಪಿನ್ ಬೌಲಿಂಗ್ನಲ್ಲಿ ರಾಷ್ಟ್ರಮಟ್ಟದ ಸಾಧನೆ!; ಸಾಧಕನಿಗೆ ಬೇಕಿದೆ ಸಹೃದಯರ ನೆರವು