ಕಲಬುರಗಿ : ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರವಾಗಿ ಅಫಜಲಪುರ ಪಟ್ಟಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. ನನಗೂ ಅದರ ಬಗ್ಗೆ ಯಾರೋ ಹೇಳಿದರು. ನಾಳೆ ಸಾವರ್ಕರ್ ಭಾವಚಿತ್ರ ಅನಾವರಣ ನೋಡಿ ಮಾತನಾಡುವುದಾಗಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮಗನಿಗೆ ಸಿದ್ದರಾಮಯ್ಯ ಅಂತ ಅಪ್ಪಟ ಹಿಂದೂ ಹೆಸರು ಇಟ್ಟಿರುವ ಅವರ ತಂದೆಯ ಆತ್ಮ ವಿಲವಿಲ ಅಂತಿದೆ' ಅನ್ನೋ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಹಿಂದು ಧರ್ಮದಲ್ಲಿ ಹುಟ್ಚಿದ್ದೇನೆ. ಹಿಂದು ಪರವಾಗಿಯೂ ಮಾತನಾಡುತ್ತೇನೆ. ಬೇರೆ ಧರ್ಮಗಳ ಪರವಾಗಿಯೂ ಮಾತನಾಡುತ್ತೇನೆ. ನಾನು ಸಂವಿಧಾನದ ಪ್ರಕಾರ ಮಾತನಾಡಬೇಕಾ? ಇಲ್ಲವೇ ಇವರು ಹೇಳಿದಂಗೆ ಮಾತನಾಡಬೇಕಾ? ಎಂದು ಪ್ರಶ್ನಿಸಿದರು.
ನಾನು ಮುಸ್ಲಿಂ ಪರವಾಗಿ ಮಾತನಾಡಿದರೆ ಸಿದ್ದರಾಮುಲ್ಲಾ ಖಾನ್ ಅಂತಾ ಕರಿತಾರೆ. ಜಾತಿ ವಿಷಬೀಜ ಬಿತ್ತುತ್ತಿರುವುದು ಬಿಜೆಪಿ ಹೊರತಾಗಿ ಕಾಂಗ್ರೆಸ್ ಅಲ್ಲ, ಜಾತಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತ ಇರೋದು ಬಿಜೆಪಿ. ಎಲ್ಲರೂ ಮನುಷ್ಯರು ಅಂತ ನಂಬಿದವರು ನಾವು, ಇವರಿಗೆ ಆರ್.ಎಸ್.ಎಸ್ ನವರು ಮಾತ್ರ ಮನುಷ್ಯರಾಗಿ ಕಾಣುತ್ತಿದ್ದಾರೆ ಇತರರು ಅಲ್ಲವೆಂದು ಸಿ ಟಿ ರವಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ :ಬಿಜೆಪಿ ನಿರ್ಲಕ್ಷದಿಂದ ಓಬಿಸಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ: ಸಿದ್ದರಾಮಯ್ಯ