ETV Bharat / state

ಕಲಬುರಗಿಯಲ್ಲಿ ಕಾಮದಹನ: ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದ ಯುವ ಜನತೆ - ದುಲಂಡಿ

ದೇಶಾದ್ಯಂತ ಬಣ್ಣದೋಕೂಳಿಗೆ ಚಾಲನೆ ಸಿಕ್ಕಿದ್ದು ಯುವಕರು, ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ಬಗೆ ಬಗೆಯ ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ.

ಕಲಬುರಗಿಯಲ್ಲಿ ಕಾಮದಹನ ಮಾಡುತ್ತಿರುವ ಯುವ ಜನತೆ
author img

By

Published : Mar 21, 2019, 10:47 PM IST

ಕಲಬುರಗಿ: ಜಿಲ್ಲೆಯಲ್ಲಿ ಕಾಮದಹನ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಹಬ್ಬಕ್ಕೆ ಚಾಲನೆ ಸಿಗುತ್ತಿದ್ದಂತೆ ಯುವ ಜನತೆ ಬಗೆ ಬಗೆಯಬಣ್ಣದಲ್ಲಿ ಮಿಂದೆದ್ದರು.

ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿಯಿಂದಲೇ ಕಾಮ ದಹನ ಕಾರ್ಯಕ್ರಮ ನಡೆಸಿದರು. ಯುವಕರು ಬೊಬ್ಬೆ ಹೊಡೆದು ಸಂಭ್ರಮಿಸಿದರೆ ಮಹಿಳೆಯರು, ಹಿರಿಯರು ಮಕ್ಕಳು ಸಂಭ್ರಮ ನೋಡಿ ಖುಷಿಪಟ್ಟರು‌. ಕಾಮದಹನಕ್ಕೂ ಮುನ್ನ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ಇನ್ನುಇಡೀ ರಾತ್ರಿ ಧಗಿಸಿದ ನಂತರ ಬೆಳಗ್ಗೆ ಬೆಂಕಿ ಕೆಂಡವನ್ನು ಮನೆಗೆ ತೆಗೆದುಕೊಂಡು ಹೋಗಿ ಕಡಲೆ, ಕೊಬ್ಬರಿ ಸುಟ್ಟು ಮನೆ ಮಂದಿಗೆ ಹಂಚಿದರು.

ಕಲಬುರಗಿಯಲ್ಲಿ ಕಾಮದಹನ ಮಾಡುತ್ತಿರುವ ಯುವ ಜನತೆ

ಇನ್ನು ಪ್ರತಿವರ್ಷದಂತೆ ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲೆಯ ಕೆಲವಡೆ ಗಂಡು ಹೆಣ್ಣು ಅನ್ನದೆ ವಯಸ್ಸಿನ ಅಂತರವಿಲ್ಲದೆ, ಬಣ್ಣದೋಕೂಳಿ ಆಡಿದರು. ಒಟ್ಟಿನಲ್ಲಿಎರಡು ದಿನಗಳ ಕಾಲ ನಡೆಯುವ ಹೋಳಿ ಸಂಭ್ರಮಕ್ಕೆ ಚಾಲನೆ ಸಿಕ್ಕಿದ್ದು, ಎಲ್ಲೆಡೆ ಖುಷಿಯಿಂದ ಆಚರಣೆ ಮಾಡಲಾಗುತ್ತಿದೆ.

Intro:Body:

1 kn_klb_200319_kaam_dahana_veeresh2.mp4  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.