ಸೇಡಂ(ಕಲಬುರಗಿ): ತಾಲೂಕಿನ ಸಂಗಾವಿ ಗ್ರಾಮದ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುತ್ತಲೂ ಕಾಗಿಣಾ ನದಿ ನೀರು ಸುತ್ತುವರೆದಿದ್ದು, ಶಾಲೆಯಲ್ಲಿ ಸಿಲುಕಿರುವ ಸಿಬ್ಬಂದಿ ಕಂಗಾಲಾಗಿದ್ದಾರೆ.
ವಸತಿ ಶಾಲೆ ಸುತ್ತಲೂ ಹತ್ತಾರು ಅಡಿ ನೀರು ಜಮಾವಣೆಯಾಗಿದೆ. ಪಕ್ಕದಲ್ಲೇ ಕಾಗಿಣಾ ನದಿ ಹರಿಯುತ್ತಿರುವ ಪರಿಣಾಮ ಶಾಲೆ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ದಾರಿ ಕಾಣದೇ ತಬ್ಬಿಬ್ಬಾಗಿರುವ ಸಿಬ್ಬಂದಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.