ಕಲಬುರಗಿ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಲವೆಡೆ ಅವಾಂತರ ಸಂಭವಿಸಿದೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿಯೇ ಗ್ರಾಮಸ್ಥರು ದಾಟುವ ಅನಿವಾರ್ಯತೆ ಎದುರಾಗಿದೆ.
ನಿನ್ನೆಯಿಂದ ಮತ್ತೆ ಮಳೆ ಅಬ್ಬರಿಸುತ್ತಿದ್ದು, ಹೊನ್ನಕಿರಣಗಿ ಜನರ ಪರದಾಟ ಮುಂದುವರೆದಿದೆ. ಊರಿನಿಂದ ಜನತಾ ಕಾಲೋನಿಗೆ ಹೋಗುವ ರಸ್ತೆ ಮಧ್ಯೆ ಹಳ್ಳ ತುಂಬಿ ಹರಿಯುತ್ತಿದೆ. ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಗ್ರಾಮದಲ್ಲಿ ಓಡಾಡುವುದು ಕೂಡ ದುಸ್ತರವಾಗಿದೆ.
ಗ್ರಾಮ ದೇವತೆ ಮರಗಮ್ಮನ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪರ್ಕ ಇಲ್ಲದೆ ಭಕ್ತರು ಸಹ ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಸುರಿದಾಗ ಹಳ್ಳ ತುಂಬಿಕೊಂಡು ಜನರು ಪರಿಪಾಟಲು ಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಹಲವು ಈ ಹಿಂದಿನಿಂದಲೂ ಹೇಳಿದರೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಮಳೆಗೆ ಕೋಡಿಬಿದ್ದ ಕೆರೆಗಳು.. ಜಲ ದಿಗ್ಬಂಧನ, ಸಿಡಿಲು ಬಡಿದು ಮಹಿಳೆ ಕೈ ಕಾಲಿಗಿಲ್ಲ ಸ್ವಾಧೀನ