ETV Bharat / state

ಕಲಬುರಗಿಯ ವಾಡಿ‌ ಪಟ್ಟಣದ 4 ಏರಿಯಾಗಳು ಸೀಲ್​​ಡೌನ್: ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ - ವಾಡಿ‌ ಪಟ್ಟಣದ 4 ಏರಿಯಾಗಳಿಗೆ ಸಿಲ್ ಡೌನ್: ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ

2 ವರ್ಷದ ಬಾಲಕನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ವಾಡಿ‌ ಪಟ್ಟಣದ ಪಿಲಕಮ್, ಕಲಕಂ‌ ಏರಿಯಾ, ಮಲ್ಲಿಕಾರ್ಜುನ ಗುಡಿ ಹಾಗೂ ಇರಾನಿ ಬಿಲ್ಡಿಂಗ್ ಪ್ರದೇಶದ ನಿವಾಸಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

Health  Department  Intensive monitoring in Wadi Town
ವಾಡಿ‌ ಪಟ್ಟಣದಲ್ಲಿ ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ
author img

By

Published : Apr 14, 2020, 6:29 PM IST

ಕಲಬುರಗಿ: 2 ವರ್ಷದ ಬಾಲಕನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ವಾಡಿ‌ ಪಟ್ಟಣದ ಒಟ್ಟು 4 ಏರಿಯಾಗಳನ್ನು ಸೀಲ್​ಡೌನ್ ಮಾಡಲಾಗಿದೆ. ಅಲ್ಲದೇ ಆರೋಗ್ಯ ಇಲಾಖೆ ಈ 4 ಬಡಾವಣೆ ನಿವಾಸಿಗಳ‌ ಮೇಲೆ ನಿಗಾ ವಹಿಸಿದೆ.

ವಾಡಿ‌ ಪಟ್ಟಣದ 4 ಏರಿಯಾಗಳು ಸೀಲ್ ಡೌನ್: ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ

2 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಇಡೀ ಪಟ್ಟಣವೇ ತಲ್ಲಣಗೊಳ್ಳುವಂತೆ ಮಾಡಿದೆ. ಬಾಲಕನಿಗೆ ಸೋಂಕು ಅಂಟಲು ಕಾರಣ ಏನಿರಬಹುದು ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. 2 ವರ್ಷದ ಬಾಲಕನ ಕುಟುಂಬ ವಾಸವಾಗಿದ್ದ ಪಿಲಕಮ್ ಏರಿಯಾ, ಕಲಕಂ‌ ಏರಿಯಾ, ಮಲ್ಲಿಕಾರ್ಜುನ ಗುಡಿ ಹಾಗೂ ಇರಾನಿ ಬಿಲ್ಡಿಂಗ್ ಪ್ರದೇಶದ ನಿವಾಸಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

22 ಜನ ಆರೋಗ್ಯ ಸಿಬ್ಬಂದಿ‌ ಹಾಗೂ 55 ಜನ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ನಿನ್ನೆಯಿಂದ ಪ್ರತಿ ಮನೆಯ ಸದಸ್ಯರಿಗೂ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಒಟ್ಟು 14 ದಿನಗಳವರೆಗೆ ತಪಾಸಣೆ ಸಮೀಕ್ಷೆ ನಡೆಯಲಿದ್ದು, ಆಶಾ ಕಾರ್ಯಕರ್ತೆಯರು ಬಡಾವಣೆಯ ಪ್ರತಿ ಮನೆಗೆ ತೆರಳಿ ನೆಗಡಿ, ಕೆಮ್ಮು, ಜ್ವರವಿದ್ದವರ ಮಾಹಿತಿ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.