ಕಲಬುರಗಿ : ನಗರದಲ್ಲಿ ಹನುಮ ಜಯಂತಿ ಅಂಗವಾಗಿ ಶನಿವಾರ 14 ಅಡಿ ಎತ್ತರದ ಹನುಮಾನ ಮೂರ್ತಿಯ ಭವ್ಯ ಮೆರೆವಣಿಗೆ ನಡೆಯಿತು. ಇಲ್ಲಿನ ರಾಮತೀರ್ಥ ಮಂದಿರದಿಂದ ವಿಶೇಷ ಪೂಜೆ, ಪವನಾಮ ಹೋಮ, ಹವನದೊಂದಿಗೆ ಶೋಭಯಾತ್ರೆ ಪ್ರಾರಂಭಿಸಲಾಯಿತು. ಶ್ರೀಕೇಸರಿ ನಂದನ ಯುವ ಬ್ರಿಗೇಡ್ ನೇತೃತ್ವದಲ್ಲಿಈ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಹಿಂದೂ ಪರಿಷತ್ ರಾಜ್ಯ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪಾ, ಶ್ರೀರಾಮಸೇನೆಯ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರ ಹಾಗೂ ಹಿಂದೂ ಮುಖಂಡರ ಸಮ್ಮುಖದಲ್ಲಿ ಶೋಭಾಯಾತ್ರೆ ನಡೆಯಿತು.
ರಾಮತೀರ್ಥ ಮಂದಿರದಿಂದ ಪ್ರಾರಂಭವಾದ ಶೋಭಾ ಯಾತ್ರೆಯು ಆಳಂದ ಕಾಲೋನಿ, ಖಾದರಿ ಚೌಕ್, ಶೆಟ್ಟಿ ಕಾಂಪ್ಲೆಕ್ಸ್, ಶಹಾಬಜಾರ ನಾಕಾ, ಪ್ರಕಾಶ್ ಮಾಲ್, ಹಳೆ ಚೌಕ್ ಪೊಲೀಸ್ ಠಾಣೆ, ಸೂಪರ್ ಮಾರ್ಕೆಟ್ ಮಾಗ೯ವಾಗಿ ಜಗತ್ ವೃತ್ತದವರೆಗೆ ಸಾಗಿ ಸಂಪನ್ನಗೊಂಡಿತು.
ಇದಕ್ಕೂ ಮುನ್ನ ಬೆಳಗ್ಗೆ ಲೋಕ ಕಲ್ಯಾಣಾರ್ಥಕ್ಕಾಗಿ ಹಾಗೂ ಹಿಂದೂ ರಾಷ್ಟ್ರದ ನಿರ್ಮಾಣದ ಸಂಕಲ್ಪ ಹೊತ್ತು ರಾಷ್ಟ್ರೀಯ ಭಜರಂಗದಳ ವತಿಯಿಂದ ಪವನಾಮ ಹೋಮ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: 108 ಅಡಿಯ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ