ETV Bharat / state

ಭೀಮಾ ನದಿಯಲ್ಲಿ ತಗ್ಗಿದ ನೀರು.. ಗಾಣಗಾಪುರ‌ ಸೇತುವೆ ಮೇಲೆ ವಾಹನ ಸಂಚಾರ ಆರಂಭ - ಈಟಿವಿ ಭಾರತ ಕನ್ನಡ

ಕಳೆದೆರಡು ದಿನಗಳಿಂದ ಮೈದುಂಬಿ ಹರಿಯುತ್ತಿದ್ದ ಭೀಮಾನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ಇಲ್ಲಿನ ಗಾಣಗಾಪುರ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ganagapur-bridge-opened-for-vehicle
ಭೀಮಾ ನದಿಯಲ್ಲಿ ತಗ್ಗಿದ ನೀರು.. ಗಾಣಗಾಪುರ‌ ಸೇತುವೆ ಮೇಲೆ ವಾಹನ ಸಂಚಾರ ಆರಂಭ
author img

By

Published : Sep 12, 2022, 8:18 PM IST

ಕಲಬುರಗಿ: ಕಳೆದೆರಡು ದಿನಗಳಿಂದ ಮೈದುಂಬಿ ಹರಿಯುತ್ತಿದ್ದ ಭೀಮಾ ನದಿ ಕೊಂಚ ಶಾಂತವಾಗಿದೆ. ನೀರಿನ ಮಟ್ಟ ತಗ್ಗಿದ ಪರಿಣಾಮ‌ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರ ಸೇತುವೆ‌ ಮೇಲೆ‌ ವಾಹನಗಳ ಸಂಚಾರ ಮತ್ತೆ ಆರಂಭವಾಗಿದೆ.

ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆ, ಭೀಮಾ ನದಿಗೆ 60 ಸಾವಿರ ಕ್ಯೂಸೆಕ್​​​ಗೂ ಅಧಿಕ‌ ನೀರು ಬಿಡಲಾಗಿತ್ತು. ಪರಿಣಾಮ ಅಫಜಲಪುರ ತಾಲೂಕಿನ ಸೊನ್ನ‌ ಬ್ಯಾರೇಜ್‌ನಲ್ಲಿ ನೀರಿನ‌ಮಟ್ಟ ಹೆಚ್ಚಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರೇಜ್ ದಿಂದ 1.20 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗಿತ್ತು. ಇದು ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿಯನ್ನು ಸೃಷ್ಟಿಸಿತ್ತು.

ಭೀಮಾ ನದಿಯಲ್ಲಿ ತಗ್ಗಿದ ನೀರು.. ಗಾಣಗಾಪುರ‌ ಸೇತುವೆ ಮೇಲೆ ವಾಹನ ಸಂಚಾರ ಆರಂಭ

ಜೊತೆಗೆ ಗಾಣಗಾಪುರ, ಘತ್ತರಗಿ ಸೇರಿ ಹಲವು ಸೇತುವೆಗಳು ಜಲಾವೃತವಾಗಿ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ್ದರು. ಇದೀಗ ಮಹಾರಾಷ್ಟ್ರದ ಡ್ಯಾಮ್‌ಗಳಿಂದ ಬರುತ್ತಿದ್ದ ನೀರಿನ ಮಟ್ಟ ತಗ್ಗಿದ್ದು, ಇಲ್ಲಿನ ಸೊನ್ನ ಬ್ಯಾರೇಜ್ ದಿಂದಲೂ ನೀರಿನ‌ ಹೊರ ಹರಿವು ಕಡಿಮೆಯಾಗಿದೆ. ಇದರಿಂದ ನದಿಯಲ್ಲಿನ ನೀರಿನ‌ ಮಟ್ಟ ತಗ್ಗಿದ್ದು, ಸೇತುವೆಗಳು ಮತ್ತೆ ಸಂಚಾರಕ್ಕೆ ಮುಕ್ತವಾಗಿವೆ.

ಇದನ್ನೂ ಓದಿ : ವಿಜಯಪುರದಲ್ಲಿ ಧಾರಾಕಾರ ಮಳೆ.. ಭೀಮಾ, ಕೃಷ್ಣಾ ನದಿ ಪಾತ್ರದ ಜನರಿಗೆ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.