ETV Bharat / state

ಕ್ಷೇತ್ರದಲ್ಲಿ ಹಣ ಹಂಚಿಕೆ ಪ್ರಕರಣ: ಬಿಜೆಪಿ-ಕಾಂಗ್ರೆಸ್​​ ಅಭ್ಯರ್ಥಿಗಳಿಂದ ಆರೋಪ ಪ್ರತ್ಯಾರೋಪ - kalburagi news

ಹಣ ಹಂಚಿಕೆ ಪ್ರಕರಣ ಸಂಬಂಧ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಆರೋಪ ಪ್ರತ್ಯಾರೋಪ ಮಾಡಿದ್ದಾರೆ.

fund-sharing-case-in-constituency-bjp-congress-candidates-counter-accused
ಕ್ಷೇತ್ರದಲ್ಲಿ ಹಣ ಹಂಚಿಕೆ ಪ್ರಕರಣ: ಬಿಜೆಪಿ-ಕಾಂಗ್ರೆಸ್​​ ಅಭ್ಯರ್ಥಿಗಳಿಂದ ಅರೋಪ ಪ್ರತ್ಯಾರೋಪ
author img

By

Published : May 9, 2023, 9:28 PM IST

Updated : May 9, 2023, 10:04 PM IST

ಕಲಬುರಗಿ: ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಹಣ ಹಂಚಿಕೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.‌ ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಹತಾಶೆಗೊಂಡು ಸುಳ್ಳು ಆರೋಪ ಮಾಡುತ್ತಿದೆ ಎಂದು‌ ಹೇಳಿದ್ದಾರೆ.

ನಿನ್ನೆ (ಸೋಮವಾರ) ರಾತ್ರಿ ಖುದ್ದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಣ ಹಂಚಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಆರೋಪ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಶಾಂತಿ ಹಾಳು ಮಾಡೋದು, ಬೆದರಿಕೆ ಹಾಕೋದನ್ನು ಕಾಂಗ್ರೆಸ್​​ನವರು ಮಾಡುತ್ತಿದ್ದಾರೆ. ಜನತೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದನ್ನು ಸಹಿಸಲಾಗದೆ ಕಾಂಗ್ರೆಸ್​​ನವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ನಮ್ಮ ಕಾರ್ಯಕರ್ತ ಶಿವಾನಂದ ಹುಲಿ ಮೇಲೆ ಹಲ್ಲೆ ಮಾಡಿದ್ದಾರೆ. ಚುನಾವಣೆ ಗೆಲ್ಲುವ ಮುಂಚೆಯೇ ಕಾಂಗ್ರೆಸ್ ಪಕ್ಷ ಗೂಂಡಾ ಪ್ರವೃತ್ತಿ ಮಾಡುತ್ತಿದೆ. ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್​​ನವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಕಾರ್ಯಕರ್ತರಿಗೆ ಪೋನ್ ಮೂಲಕ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಯಕರ್ತರ ಮಧ್ಯೆ ನಡೆದ ಸಂಭಾಷಣೆ ಅಡಿಯೋ ಬಾಂಬ್ ಸಿಡಿಸಿದ ದತ್ತಾತ್ರೇಯ ಪಾಟೀಲ್ ಈ ಆಡಿಯೋ ತನಿಖೆ ನಡೆಸಲು ಪೊಲೀಸರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಗೂಂಡಾಗಿರಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಯಶವಂತ ಗುರುಕರ್ ಪೊಲೀಸ್ ಅಧಿಕಾರಿಗಳಿಗೆ ಪತ್ರ
ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಪತ್ರ

ಇನ್ನೊಂದೆಡೆ ಕಲಬುರಗಿ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಘಟನೆ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಶಾಸಕ‌ ರೇವೂರ್​​​​ ಅವರು ಸೋಲಿನ ಭೀತಿಯಿಂದ ಸೋಮವಾರ ರಾತ್ರಿ ಮನೆ ಮನೆಗೆ ಹಣ ಹಂಚುತ್ತಿದ್ದರು. ಈ‌ ಬಗ್ಗೆ ಡಿಸಿ ಯಶವಂತ ಗುರುಕರ್ ಅವರಿಗೆ ಕರೆ‌ ಮಾಡಿ ತಿಳಿಸಿದಾಗ ಖುದ್ದು ಡಿಸಿ ಸ್ಥಳಕ್ಕೆ ದೌಡಾಯಿಸಿದ್ದರು. ಆಗ ಬಿಜೆಪಿ ಕಾರ್ಯಕರ್ತರು ಹಣದ ಸಮೇತ ಅತಿ ವೇಗವಾಗಿ ಕಾರ್​​ನಲ್ಲಿ ಪರಾರಿಯಾಗಿದ್ದಾರೆ. ಡಿಸಿ ಗುರುಕರ್ ಬೆನ್ನುಬಿಡದೆ ಕಾರ್​ನಲ್ಲಿ ಬೆನ್ನಟ್ಟಿ ವಿದ್ಯಾನಗರ ಹನುಮಾನ್​ ದೇವಸ್ಥಾನ ಬಳಿ ಕಾರ್ ತಡೆದು ಪರಿಶೀಲನೆ ಮಾಡಿದ್ದಾರೆ ಎಂದಿದ್ದರು.

ಡಿಸಿ ಕಾರು ನಿಲ್ಲಿಸುವುದರೊಳಗೆ ಓರ್ವ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ. ಅದು ಬೇರ್ಯಾರು ಅಲ್ಲ ಶಾಸಕ ರೇವೂರ ಅವರೇ ಓಡಿ‌ ಹೋಗಿದ್ದಾರೆ. ಈ ಬಗ್ಗೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯದ ಮೂಲಕ ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್​​ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್​​ ಆಗ್ರಹಿಸಿದ್ದರು.

ಈ‌ ನಡುವೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ರಾತ್ರಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಸ್ಥಳಕ್ಕೆ ಹೋಗಿದ್ದು, ಬಿಜೆಪಿ ಕಾರ್ಯಕರ್ತರ ಕಾರ್ ಚೇಜ್ ಮಾಡಿದ್ದು ಎಲ್ಲವನ್ನು ವಿವರಿಸಿ ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ.

ಇದನ್ನೂ ಓದಿ: ಅಭ್ಯರ್ಥಿ ಪರ ಹಣ ಹಂಚಿಕೆ ಆರೋಪ: ಕಲಬುರಗಿಯಲ್ಲಿ ಕಾರ್ ಬೆನ್ನಟ್ಟಿ‌ ಹಿಡಿದ ಡಿಸಿ!

Last Updated : May 9, 2023, 10:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.