ಕಲಬುರಗಿ: ಅಕ್ಟೋಬರ್ 24ರಂದು ಅಫಜಲಪುರದ ಕೋಲಿ ಸಮಾಜದ ಮುಖಂಡ ದುಂಡಪ್ಪ ಜಮಾದರ್ ಮೇಲೆ ನಗರದ ಚೌಕ್ ಠಾಣೆ ಸಿಪಿಐ ಎಸ್.ಆರ್.ನಾಯಕ್ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
'ಹಲ್ಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾನ್ಸ್ಸ್ಟೇಬಲ್ಗಳಾದ ರಾಜಕುಮಾರ, ಉಮೇಶ್, ಕೇಶವರಾವ್, ಅಶೋಕ್ ಅವರನ್ನು ಅಮಾನತು ಮಾಡಲಾಗಿದ್ದು, ಚೌಕ್ ಠಾಣೆ ಸಿಪಿಐ ಎಸ್.ಆರ್.ನಾಯಕ್ ಅವರ ವಿರುದ್ಧ ನಿಯಮ 7ರ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ' ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: 20 ಕೇಸ್ಗಳಲ್ಲಿ ಬೇಕಾಗಿದ್ದ ಆರೋಪಿ ಬಜ್ಪೆ ಪೊಲೀಸರ ಬಲೆಗೆ