ETV Bharat / state

ಕೊರೊನಾದಿಂದ ಯಮಲೋಕಕ್ಕೆ ಹೋಗಿ ಮರಳಿ ಬಂದಿದ್ದೇನೆ.. ಮಾಲೀಕಯ್ಯ ಗುತ್ತೇದಾರ್​​ - Maalikayya Gattedar admits Hospital

ಕೊರೊನಾ ಸೋಂಕಿನಿಂದ ನರಳಾಡಿ ಬಹಳಷ್ಟು ಸಂಕಷ್ಟ ಅನುಭವಿಸಿದ್ದೇನೆ. ಯಮಲೋಕಕ್ಕೆ ಹೋಗಿ ಮರಳಿದ್ದೇನೆ. ಅಭಿಮಾನಿ ದೇವರುಗಳ ಪ್ರೀತಿ, ವಿಶ್ವಾಸ ಆಶೀರ್ವಾದದಿಂದ ನಾನು ಯಮಲೋಕದಿಂದ ಮರಳಿ ಬಂದಿದ್ದೇನೆ. ಸದ್ಯ ಸಂಪೂರ್ಣ ಗುಣಮುಖನಾಗಿದ್ದು, ನಾಲ್ಕೈದು ದಿನಗಳಲ್ಲಿ ಮನೆಗೆ ಬರಲಿದ್ದೇನೆ..

malikayya-guttedar-talks-about-corona-from-hospital
ಮಾಲೀಕಯ್ಯ ಗುತ್ತೇದಾರ್​​
author img

By

Published : Oct 2, 2020, 5:42 PM IST

ಕಲಬುರಗಿ: ಕೊರೊನಾ ಸೋಂಕನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬೇಡಿ. ನಾನು ಬಹಳಷ್ಟು ಸಂಕಷ್ಟ ಅನುಭವಿಸಿದ್ದೇನೆ. ಯಮಲೋಕಕ್ಕೆ ಹೋಗಿ ಮರಳಿ ಬಂದಿದ್ದೇನೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ತಿಳಿಸಿದ್ದಾರೆ.

ಕೊರೊನಾ ಸೋಂಕು ತಗುಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದಲೇ ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮ ಗಾಂಧಿ ಜಯಂತಿಗೆ ಶುಭಕೋರಿದ್ದಾರೆ.

ಆಸ್ಪತ್ರೆಯಿಂದ ಅನುಭವ ಹಂಚಿಕೊಂಡ ಮಾಲೀಕಯ್ಯ ಗುತ್ತೇದಾರ್​​

ಕೊರೊನಾ ಸೋಂಕಿನಿಂದ ನರಳಾಡಿ ಅನುಭವಿಸಿದ ಅನುಭವದ ಮೇಲೆ ಹೇಳುತ್ತಿದ್ದೇನೆ. ಯಾರೂ ಕೊರೊನಾ ರೋಗವನ್ನು ಹಗುರವಾಗಿ ಪರಿಗಣಿಸಬೇಡಿ. ಬಹಳಷ್ಟು ಸಂಕಷ್ಟ ಅನುಭವಿಸಿದ್ದೇನೆ. ಯಮಲೋಕಕ್ಕೆ ಹೋಗಿ ಮರಳಿದ್ದೇನೆ. ಅಭಿಮಾನಿ ದೇವರುಗಳ ಪ್ರೀತಿ, ವಿಶ್ವಾಸ ಆಶೀರ್ವಾದದಿಂದ ನಾನು ಯಮಲೋಕದಿಂದ ಮರಳಿ ಬಂದಿದ್ದೇನೆ. ಸದ್ಯ ಸಂಪೂರ್ಣ ಗುಣಮುಖನಾಗಿದ್ದು, ನಾಲ್ಕೈದು ದಿನಗಳಲ್ಲಿ ಮನೆಗೆ ಬರಲಿದ್ದೇನೆ ಎಂದಿದ್ದಾರೆ.

ಅಲ್ಲದೆ ಸೋಂಕು ನಿಯಂತ್ರಣಕ್ಕಾಗಿ ಉಭಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಆದರೆ, ಸಾರ್ವಜನಿಕರ ಸಹಕಾರ ಸಿಗದೇ ಕೊರೊನಾ ಸಂಪೂರ್ಣ ಮುಕ್ತ ಮಾಡುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯ ಮನೆಯಿಂದ ಹೊರಗೆ ಬರುವುದು ನಿಲ್ಲಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರು ಸರ್ಕಾರದ ನಿರ್ದೇಶನದಂತೆ ನಡೆದುಕೊಂಡು ಕೊರೊನಾ ಸೋಂಕಿನಿಂದ ದೇಶವನ್ನು ಮುಕ್ತರಾಗಿಸೋಣ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.