ETV Bharat / state

ಕಲಬುರಗಿ ಪ್ರವಾಹ: ಬಳ್ಳಾರಿ ಗೃಹರಕ್ಷಕದಳ ತಂಡ ನಿಯೋಜನೆ

ಕಲಬುರಗಿ ಜಿಲ್ಲೆಯ ಭೀಮಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅಲ್ಲಿನ ಜನರನ್ನು ಹಾಗೂ ಜಾನುವಾರಗಳ ರಕ್ಷಣೆ ಸಲುವಾಗಿ ಬಳ್ಳಾರಿ ಜಿಲ್ಲೆಯ ಗೃಹರಕ್ಷಕದಳದ ನುರಿತ ಈಜುಗಾರರ ರಕ್ಷಣಾ ತಂಡವನ್ನು ನಿಯೋಜಿಸಿ ಕಳುಹಿಸಿಕೊಡಲಾಗಿದೆ.

author img

By

Published : Oct 19, 2020, 8:48 PM IST

Bellary Home Guard Team working in Kalaburagi
ಕಲಬುರಗಿ ಪ್ರವಾಹ: ಬಳ್ಳಾರಿ ಗೃಹರಕ್ಷಕದಳ ತಂಡ ನಿಯೋಜನೆ

ಬಳ್ಳಾರಿ: ಕಲಬುರಗಿ ಜಿಲ್ಲೆಯಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಭೀಮಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿಯ ದಂಡೆಯ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿರುವ ಕಾರಣ ಅಲ್ಲಿನ ಜನರನ್ನು ಹಾಗೂ ಜಾನುವಾರಗಳ ರಕ್ಷಣೆ ಸಲುವಾಗಿ ಬಳ್ಳಾರಿ ಜಿಲ್ಲೆಯ ಗೃಹರಕ್ಷಕದಳದ ನುರಿತ ಈಜುಗಾರರ ರಕ್ಷಣಾ ತಂಡವನ್ನು ನಿಯೋಜಿಸಿ ಕಳುಹಿಸಿಕೊಡಲಾಗಿದೆ ಎಂದು ಗೃಹರಕ್ಷಕದಳ ಘಟಕದ ಘಟಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ಗೃಹರಕ್ಷಕ ರಕ್ಷಣಾ ತಂಡದ ಡಿ. ಉಮೇಶ್ ಮೆಟಲ್ ಸಂಖ್ಯೆ 57, ಬಸವರಾಜ ಮೆಟಲ್ ಸಂಖ್ಯೆ 94, ಕೆ.ಎನ್.ಮಹಾಂತೇಶ ಮೆಟಲ್ ಸಂಖ್ಯೆ 322, ಕೆ. ಆನಂದ್ ಮೆಟಲ್ ಸಂಖ್ಯೆ 318 ಮತ್ತು ಕುಡುತಿನಿ ಗೃಹರಕ್ಷಕದಳ ಘಟಕದ ಕೆ.ಸುರೇಶ್ ಮೆಟಲ್ ಸಂಖ್ಯೆ 2002 ಸದಸ್ಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಸಾರ್ವಜನಿಕರನ್ನ ರಕ್ಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.