ಕಲಬುರಗಿ: ಆಜಾನ್ ವಿರುದ್ಧ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಬಿ.ಕೆ ಹರಿಪ್ರಸಾದ್ ಈ ದೇಶದ ಆಂತರಿಕ ಭಯೋತ್ಪಾದಕ ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಗುಡುಗಿದ್ದಾರೆ.
ಅವನೊಬ್ಬ ಗೂಂಡಾ.. ಒಂದು ಕಾಲದಲ್ಲಿ ಬೆಂಗಳೂರಿನ ಗೂಂಡಾ ಆಗಿದ್ದ ಎಂದು ಬಿ ಕೆ ಹರಿಪ್ರಸಾದ್ ವಿರುದ್ಧ ಬಿಜೆಪಿ ಫೈರ್‌ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಯತ್ನಾಳ್, ಗೂಂಡಾಗಳ ಕೈಯಲ್ಲಿ ಕಾಂಗ್ರೆಸ್ ಕೊಟ್ಟು ಸೋನಿಯಾಗಾಂಧಿ ನಿದ್ರೆಗೆ ಜಾರಿದ್ದಾರೆ. ಸಿದ್ದರಾಮಯ್ಯ ಬಿಟ್ಟರೆ ಆ ಪಕ್ಷದಲ್ಲಿ ಎಲ್ಲರೂ ಗುಂಡಾಗಳೇ ಇದ್ದಾರೆ ಎಂದು ಅವರು ಗುಡುಗಿದ್ದಾರೆ.
ಆರಗ ಜ್ಞಾನೇಂದ್ರ ವಿರುದ್ಧ ಯತ್ನಾಳ್ ಕಿಡಿ: ಇನ್ನು ಗೃಹ ಮಂತ್ರಿ ವಿರುದ್ದ ಮತ್ತೊಮ್ಮೆ ಗುಡುಗಿದ ಯತ್ನಾಳ್, ಈ ಮೊದಲೂ ನಾನು ಹೇಳಿದ್ದೆ, ಆರಗ ಜ್ಞಾನೇಂದ್ರ ಅವರೇ ನಿಮಗಿದು ನೀಗೋದಿಲ್ಲ ಎಂದು. ಸಿಎಂ ಅವರೇ, ಆರಗ ಅವರಿಗೆ ಕಂದಾಯ ಇಲ್ಲವೇ ಫಾರೆಸ್ಟ್ ಇಲಾಖೆ ಇಲ್ಲವೇ ಬೇರೇ ಯಾವುದಾದ್ರೂ ಕೊಡ್ರಿ, ಗೃಹ ಮಂತ್ರಿ ಸ್ಥಾನ ಯಾರಾದ್ರೂ ಗಟ್ಟಿ ಇದ್ದವರಿಗೆ ಕೊಡಿ ಎಂದು ಸಲಹೆ ಕೊಟ್ಟಿದ್ದೆ ಎಂದ್ದಿದ್ದಾರೆ.
ಕೆಜಿ ಹಳ್ಳಿಯಿಂದಲೇ ಇದು ಶುರುವಾಗಿದೆ. ಅಲ್ಲಿ ಕಠಿಣ ಕ್ರಮ ಆಗಲಿಲ್ಲ, ಈಗ ನ್ಯಾಯಕ್ಕಾಗಿ ಹೋರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಶ್ರೀರಾಮಸೇನೆ ಕಾರ್ಯಕರ್ತರ ಬಂಧನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ನಾಳೆ ದೆಹಲಿಗೆ ಹೋಗುತ್ತಿದ್ದಾರೆ. ಹೈಕಮಾಂಡ್ ಅವರಿಗೆ ಬುದ್ದಿವಾದ ಹೇಳಿ ಕಳಿಸಬೇಕು ಎಂದು ಇದೇ ವೇಳೆ ವಿಜಯಪುರ ಶಾಸಕರು ಹೈಕಮಾಂಡ್ಗೆ ಸಲಹೆ ನೀಡಿದ್ದಾರೆ.
ಇದನ್ನು ಓದಿ:ಆಜಾನ್ - ಭಜನೆ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಶೀಘ್ರದಲ್ಲೇ ಮಾರ್ಗಸೂಚಿ