ETV Bharat / state

ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕ ಸಾವು?: ಆರೋಗ್ಯ ಕೇಂದ್ರಕ್ಕೆ ಮುಳ್ಳು ಹಚ್ಚಿ, ಆ್ಯಂಬುಲೆನ್ಸ್​ಗೆ ಕಲ್ಲು ಹೊಡೆದು ಆಕ್ರೋಶ

ಟ್ರ್ಯಾಕ್ಟರ್ ಮೇಲಿಂದ ಬಿದ್ದ ಬಾಲಕನಿಗೆ ಸಕಾಲಕ್ಕೆ ವೈದ್ಯ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ತಾಲೂಕು ಆರೋಗ್ಯ ಕೇಂದ್ರದ ಎದುರು ಚಕ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

Death of a boy without timely treatment
ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕ ಸಾವು
author img

By

Published : Apr 30, 2022, 9:25 PM IST

ಕಲಬುರಗಿ: ಟ್ರ್ಯಾಕ್ಟರ್ ಮೇಲಿಂದ ಬಿದ್ದ ಬಾಲಕನಿಗೆ ಸಕಾಲಕ್ಕೆ ವೈದ್ಯ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಜನರು ಪ್ರತಿಭಟನೆ ನಡೆಸಿದರು. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಲಕ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಜೇವರ್ಗಿ ತಾಲೂಕಿನ ನೆಲೋಗಿ ಆರೋಗ್ಯ ಕೇಂದ್ರದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಘಟನೆ ಶನಿವಾರ ನಡೆಯಿತು.

ಮಧ್ಯಾಹ್ನ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಬಾಲಕ ಗಾಯಗೊಂಡಿದ್ದ, ಬಾಲಕನನ್ನು ನೆಲೋಗಿಯಲ್ಲಿರೋ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ‌ವೈದ್ಯರು ಇರದೇ ಇದ್ದುದರಿಂದ ಜೇವರ್ಗಿಗೆ ಕಳುಹಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಬಾಲಕ ಸಾವನ್ನಪ್ಪಿದ್ದಾನೆ.

ಆರೋಗ್ಯ ಕೇಂದ್ರಕ್ಕೆ ಮುಳ್ಳು ಹಚ್ಚಿ, ಆ್ಯಂಬುಲೆನ್ಸ್​ಗೆ ಕಲ್ಲು ಹೊಡೆದು ಆಕ್ರೋಶ

ನೆಲೋಗಿ ನಿವಾಸಿ ಗುರು ಮಂಗಾ (10) ಮೃತ ಬಾಲಕ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿರುವುದೇ ಬಾಲಕನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಮುಳ್ಳು ಎಸೆದು, ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಆರೋಗ್ಯ ಕೇಂದ್ರದ ಮುಂದಿದ್ದ ಆ್ಯಂಬುಲೆನ್ಸ್​ಗೆ ಕಲ್ಲೆಸೆದು ಜಖಂಗೊಳಿಸಿದ್ದಾರೆ‌.‌

ಇದನ್ನೂ ಓದಿ: ರಂಜಾನ್ ಹಬ್ಬಕ್ಕೆ ಮೇ 3ರ ಬದಲು ಮೇ 2ರಂದು ಸಾರ್ವತ್ರಿಕ ರಜೆ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.