ETV Bharat / state

ಕಲಬುರಗಿ: ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ; ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು - kalburagi

ತಿಪ್ಪೆಗುಂಡಿಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಶಿಶುವನ್ನು ರಕ್ಷಿಸಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

crime-new-born-girl-baby-found-in-cesspit-at-kalburagi
ಕಲಬುರಗಿ: ತಿಪ್ಪೆಗುಂಡಿಯಲ್ಲಿ ನವಜಾತ ಶಿಶು ಪತ್ತೆ
author img

By

Published : Aug 4, 2023, 6:25 PM IST

ಕಲಬುರಗಿ: ರಸ್ತೆ ಬದಿಯ ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ. ಶಿಶುವನ್ನು ಗೋಣಿ ಚೀಲದ ಮೇಲೆ ಮಲಗಿಸಿ ತಿಪ್ಪೆಗುಂಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಅಳುವಿನ ಶಬ್ದ ಕೇಳಿದ ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ‌ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶಿಶುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

ಐಷಾರಾಮಿ ಜೀವನಕ್ಕಾಗಿ ಸುಲಿಗೆ- ಮೂವರು ದರೋಡೆಕೋರರ ಬಂಧನ: ಕಲಬುರಗಿ ಹೊರವಲಯದಲ್ಲಿ ಸಾರ್ವಜನಿಕರಿಂದ ಹಣ, ಮೊಬೈಲ್, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು‌ ಪೊಲೀಸರು ಬಂಧಿಸಿದ್ದಾರೆ. ಮಜ್ಮದ್​ ಸಾಜೀದ್ ಟಾಂಗೆವಾಲಾ (20), ಮಹ್ಮದ್​ ರಿಯಾಜ್ (22) ಹಾಗೂ ಸೈಯದ್ ಗುಲಾಮಗೌಸ್ (20) ಬಂಧಿತರು. ಇದಲ್ಲದೆ ಇವರು ಕದ್ದ ಮಾಲು ಖರೀದಿಸುತ್ತಿಸುತ್ತಿದ್ದ ಮಹ್ಮದ್​ ನುಮಾನ್ (22) ಎಂಬಾತನನ್ನು ಬಂಧಿಸಲಾಗಿದೆ.

ಬಂಧಿತರಿಂದ 1.40 ಲಕ್ಷ ಮೌಲ್ಯದ 14 ಮೊಬೈಲ್‌ಗಳು, ಒಂದು ಪಲ್ಸರ್ ಬೈಕ್​ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವರು ಕಳೆದ ಕೆಲವು ದಿನಗಳಿಂದ ನಗರದ ಹೊರವಲಯದಲ್ಲಿ ಮೊಬೈಲ್​ ಸುಲಿಗೆ ಮಾಡುತ್ತಿದ್ದರು. ಇತ್ತೀಚಿಗೆ ಬೇಲೂರು ಕ್ರಾಸ್ ಬಳಿಯ ಶೆಡ್​ ಒಳಗೆ‌ ಮಲಗಿದ್ದ ಇಬ್ಬರನ್ನು ಹೊರಗೆ ಕರೆದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು‌‌ ಪ್ರಕರಣ ದಾಖಲಿಸಿಕೊಂಡಿದ್ದ ಸಬ್ ಅರ್ಬನ್ ಠಾಣೆ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ‌ ನಕಲಿ‌ ಚಿನ್ನ ಅಡವಿಟ್ಟು ₹4.30 ಲಕ್ಷ ವಂಚನೆ: ನಕಲಿ ಚಿನ್ನಾಭರಣ ಅಡವಿಟ್ಟು ಹೆಚ್‌ಡಿಎಫ್‌ಸಿ ಬ್ಯಾಂಕಿಗೆ ವಂಚಿಸಿರುವ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಕಲಬುರಗಿಯ ವಿದ್ಯಾನಗರ ನಿವಾಸಿ ಬದಿಗೆಪ್ಪ ಎಂಬುವರು ಕಳೆದ ಏಪ್ರಿಲ್​ ತಿಂಗಳಿನಲ್ಲಿ ಬಡೆಪೂರ ಹೆಚ್‌ಡಿಎಫ್‌ಸಿ ಬ್ಯಾಂಕ್​ ಬ್ರ್ಯಾಂಚ್​ನಲ್ಲಿ 50 ಗ್ರಾಂ ನಕಲಿ ಚಿನ್ನಾಭರಣ ಅಡವಿಟ್ಟು 1 ಲಕ್ಷ 75 ಸಾವಿರ ಸಾಲ ಪಡೆದಿದ್ದರು. ನಂತರ ಮೇ 29 ರಂದು ಮತ್ತೆ ಬಂದು 65 ಗ್ರಾಂ ನಕಲಿ ಚಿನ್ನಾಭರಣ ಅಡವಿಟ್ಟು 2 ಲಕ್ಷ 55 ಸಾವಿರ ಹಣ ಪಡೆದಿದ್ದಾರೆ. ಹೀಗೆ ಒಟ್ಟು 4.30 ಲಕ್ಷ ಸಾಲ‌ ಪಡೆದಿದ್ದಾರೆ.

ಚಿನ್ನಾಭರಣ ಅಡವಿಟ್ಟುಕೊಳ್ಳುವಾಗ ಪರಿಶೀಲನೆ ಮಾಡಿ ಅಡವಿಟ್ಟುಕೊಂಡ ಕೆಲ ದಿನಗಳ ನಂತರ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ಚಿನ್ನವನ್ನು‌‌ ಮರು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಪೋಸ್ಟ್ ಮೂಲಕ‌ ನೋಟಿಸ್ ಕೊಟ್ಟರೂ ಬದಿಗೆಪ್ಪ ಹಾಜರಾಗದ ಕಾರಣ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಅಧಿಕಾರಿಗಳು 420 ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿ: ಬಾಲಕಿಯರಿಗೆ ವಿಷಪ್ರಾಶನ ಪ್ರಕರಣ: ಮಕ್ಕಳ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.