ಕಲಬುರಗಿ: ವರದಿ ಮಾಡುವ ಜಿಲ್ಲಾ ಪತ್ರಕರ್ತರಿಗೆ ನಗರದ ಡಿಹೆಚ್ಒ ಕಚೇರಿ ಹಿಂಭಾಗವಿರುವ ಹೆಚ್ಐಟಿ ಹಾಲ್ನಲ್ಲಿ ಕೋವಿಡ್-19 ತಪಾಸಣೆ ನಡೆಸಲಾಯಿತು.
ಆರೋಗ್ಯ ಇಲಾಖೆಯ ವಿಭಾಗೀಯ ಉಪ ನಿರ್ದೇಶಕ ಹಬೀಬ್ ಉಸ್ಮಾನ್ ಅವರ ಉಸ್ತುವಾರಿಯಲ್ಲಿ ಜಿಮ್ಸ್ ಪ್ರಯೋಗಾಲಯದ ತಂತ್ರಜ್ಞರು ಗಂಟಲು ದ್ರವದ ಮಾದರಿ ಸಂಗ್ರಹಿಸಿದರು. ಇಂದು 114 ಮಾಧ್ಯಮ ಪ್ರತಿನಿಧಿಗಳು/ಪತ್ರಕರ್ತರ ತಪಾಸಣೆ ನಡೆದಿದ್ದು, ಉಳಿದ ಎಲ್ಲಾ ಪತ್ರಕರ್ತರು ನಾಳೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವರದಿಗಾರರು ಹಾಗೂ ಕ್ಯಾಮರಾಮನ್ಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.