ಕಲಬುರಗಿ: ಕೊರೊನಾ ವೈರಸ್ ಹರಡದಿರಲಿ ಎಂದು ಆಳಂದ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಹೋಮ-ಹವನ ನಡೆಸಲಾಯಿತು.
ಆಳಂದ ಪಟ್ಟಣದ ಮಾರುಕಟ್ಟೆಯಲ್ಲಿ ಆರ್ಯ ಸಮಾಜದಿಂದ ಹೋಮ-ಹವನ ನಡೆಸಲಾಯಿತು. ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾದ್ಯಂತ ವಾರದ ಸಂತೆ ಹಾಗೂ ಮಾರುಕಟ್ಟೆಯನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲಾಡಳಿತದ ಆದೇಶದ ಮೇರೆಗೆ ಆಳಂದ ಪಟ್ಟಣದಲ್ಲಿ ಸಂತೆ, ಹಾಗೂ ಮಾರುಕಟ್ಟೆ ಬಂದ್ ಮಾಡಿದ್ದಾರೆ. ಮಾರುಕಟ್ಟೆ ಖಾಲಿ ಜಾಗದಲ್ಲೇ ಕೊರೊನಾ ನಿಯಂತ್ರಣಕ್ಕೆ ಬರಲಿ ಎಂದು ಹೋಮ-ಹವನ ಮಾಡಲಾಗಿದೆ.