ETV Bharat / state

ಪ್ಯಾಕೇಜ್ ಘೋಷಿಸಿ ಲಾಕ್‌ಡೌನ್ ಆದ್ರೂ ಮಾಡಿ ಏನಾದ್ರೂ ಮಾಡಿ: ವಿಪಕ್ಷ ನಾಯಕ ಖರ್ಗೆ ಕಿಡಿ - ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ವಾಸ

ಪ್ಯಾಕೇಜ್ ಘೋಷಿಸಿ ಲಾಕ್‌ಡೌನ್ ಆದ್ರೂ ಮಾಡಿ ಅಥವಾ ಏನಾದ್ರೂ ಮಾಡಿ ಎಂದು ವಿಪಕ್ಷ ನಾಯಕ ಖರ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ ಕಾರಿದರು.

Congress leader Mallikarjun opposed to Semi lockdown  Congress leader Mallikarjun opposed to weekend curfew  Congress leader Mallikarjun Kharge stay in Kalaburagi  Congress leader Mallikarjun Kharge news,  ಸೆಮಿಲಾಕ್‌ಡೌನ್​ಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ವಿರೋಧ  ವಿಕೆಂಡ್ ಕರ್ಫ್ಯೂಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ  ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ವಾಸ  ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿ,
ವಿಪಕ್ಷ ನಾಯಕ ಖರ್ಗೆ ಕಿಡಿ
author img

By

Published : Jan 5, 2022, 1:11 PM IST

ಕಲಬುರಗಿ: ಸೆಮಿ ಲಾಕ್‌ಡೌನ್ ಮತ್ತು ವೀಕೆಂಡ್ ಕರ್ಫ್ಯೂಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಸರ್ಕಾರಗಳ ಎಡಬಿಡಂಗಿ ನಿರ್ಧಾರಗಳಿಂದ‌ ಬಡ ಮಧ್ಯಮ ವರ್ಗದ ಜನ ಎಲ್ಲವನ್ನ ಕಳೆದುಕೊಂಡು ಬೀದಿಗೆ ಬೀದಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನಂತರ ಲಾಕ್‌ಡೌನ್ ಆದ್ರೂ ಮಾಡಿ ಏನಾದರೂ ಮಾಡಿ ಅಂತ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಖರ್ಗೆ ಕಿಡಿ

ಕಲಬುರಗಿಯಲ್ಲಿ ಮಾತನಾಡಿದ ಖರ್ಗೆ, ಕೋವಿಡ್ ಇದೀಗ ಕಾಂಟ್ರೋವರ್ಸಿ ವಿಚಾರವಾಗಿದೆ. ಏನಾದರೂ ಮಾತನಾಡಿದರೆ ತಪ್ಪಾಗುತ್ತದೆ. ಲಾಸ್ಟ್ ಟೈಮ್ ಸಡನ್ ಆಗಿ ಲಾಕ್‌ಡೌನ್ ಮಾಡಿದಾಗ ಸಾಕಷ್ಟು ತೊಂದರೆಯಾಗಿತ್ತು. ಲಾಕ್‌ಡೌನ್‌ನಿಂದ ಬೀದಿಗೆ ಬಿದ್ದಿದ್ದ ಜನರಿಗೆ ಕೇಂದ್ರ ಸರ್ಕಾರ ನೆರವು ನೀಡಿಲ್ಲ. ಕಾರ್ಮಿಕರ ನಿಧಿ ಹಣ ಕಾರ್ಮಿಕರಿಗೂ ಸಹ ನೀಡದೇ ಇರೋದು ದುರಂತ ಎಂದು ಹೇಳಿದರು.

ಓದಿ: Bulli Bai App Case : ಮತ್ತೊಬ್ಬ ಆರೋಪಿ ಬಂಧನ, ಮಾಸ್ಟರ್​ಮೈಂಡ್​​ ಶ್ವೇತಾ ಸಿಂಗ್ ಇಂದು ಕೋರ್ಟ್​​ಗೆ ಹಾಜರು

ಈಗಲೂ ಕೂಡ ಸಡನ್ ಆಗಿ ಲಾಕ್‌ಡೌನ್ ಮಾಡಿದರೆ ದೇಶದ ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಈ ಹಿಂದೆ ಕೇಂದ್ರದ ಎಡಬಿಡಂಗಿ ನಿರ್ಧಾರಗಳಿಂದ ವಿಶ್ವದಲ್ಲಿ ದೇಶದ ಆರ್ಥಿಕ ಗುಣಮಟ್ಟ ಪಾತಾಳಕ್ಕೆ ಕುಸಿದಿತ್ತು. ಬಡ, ಮಧ್ಯ‌ಮ ವರ್ಗದ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ.

ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಲಾಕ್‌ಡೌನ್ ಮಾಡೋದು ಸರಿಯಲ್ಲ. ಎಲ್ಲದರ ಬಗ್ಗೆ ಚಿಂತನ - ಮಂಥನ ಮಾಡಿ ಲಾಕ್‌ಡೌನ್ ಜಾರಿ ಮಾಡಬೇಕು. ಯಾವ ಯಾವ ವಲಯಗಳಿಗೆ ರಿಯಾಯಿತಿ ಕೊಡಬೇಕು ಅನ್ನೋದು ನಿರ್ಧರಿಸಬೇಕು ಎಂದರು.

ಕೋವಿಡ್‌ನಿಂದ ಮೃತಪಟ್ಟವರ ಕುರಿತು ಕೇಂದ್ರ ಸರ್ಕಾರ ಬೋಗಸ್ ರಿಪೋಟ್೯ ನೀಡಿದೆ. ಕೋವಿಡ್ ವಿಚಾರವಾಗಿ ಕೇಂದ್ರ ಸರ್ಕಾರ ಸಿಂಪತಿ ಕ್ರಿಯೆಟ್ ಮಾಡಿ ಭರ್ಜರಿ ಪ್ರಚಾರ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ ಖರ್ಗೆ, ಉತ್ತರ ಪ್ರದೇಶದಲ್ಲಿ ಸತ್ರೆ ಹೆಣ ಸುಡೋಕೆ ಕಟ್ಟಿಗೆ ಸಿಕ್ಕಿಲ್ಲ. ಹುಳೋಕೆ ಜಮೀನು ಸಿಕ್ಕಿಲ್ಲ.

ರಾಶಿ ರಾಶಿ ಹೆಣಗಳನ್ನ ಗಂಗಾ ನದಿಯಲ್ಲಿ ಬಿಸಾಕಿದ್ದು ಇದಕ್ಕೆ ಸಾಕ್ಷಿ. ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‌ಡೌನ್ ಆದರೂ ಮಾಡಿ ಏನಾದರು ಮಾಡಿ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.