ಸೇಡಂ: ಕೊರೊನಾ ಮಹಾಮಾರಿ ಹೆಚ್ಚು ಹಬ್ಬುತ್ತಿರುವ ಹಿನ್ನೆಲೆ ತಾಲೂಕಿನ ಹಂದರಕಿ ಗ್ರಾಮದ ಇತಿಹಾಸ ಪ್ರಸಿದ್ಧ ಭೀಮಣ್ಣ ತಾತನ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಶ್ರೀಮಠದ ಆನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 9ರಂದು ನಡೆಯಬೇಕಿದ್ದ ಜಾತ್ರಾ ಮಹೋತ್ಸವವನ್ನು ಕೊರೊನಾ ಹಾವಳಿಯಿಂದ ರದ್ದುಗೊಳಿಸಲಾಗಿದ್ದು, ಭಕ್ತರು ಮನೆಗಳಲ್ಲೇ ಇದ್ದು ತಾತನವರ ಆರಾಧನೆ ಮಾಡಬೇಕು ಎಂದು ಶ್ರೀ ಜಗಲಿಂಗೇಶ್ವರ ಆಶ್ರಮದ ಪೀಠಾಧಿಪತಿ ಲಿಂಗಪ್ಪ ತಾತ ಭಕ್ತರಲ್ಲಿ ಕೋರಿದ್ದಾರೆ.