ETV Bharat / state

ಬೇರೆಯವರ ಸೈಕಲ್​ ತರಬೇಡ ಎಂದಿದ್ದೇ ತಪ್ಪಾಯ್ತು... ಮನೆಬಿಟ್ಟು ಹೋದ ಬಾಲಕ! - ಬಾಲಕ ಮನೆಯಿಂದ ಪರಾರಿ

ಬೇರೆಯವರ ಸೈಕಲ್​ ತೆಗೆದುಕೊಂಡು ಬರಬೇಡ ಎಂದು ಬೈದಿದ್ದಕ್ಕೆ ಬಾಲಕ ಮನನೊಂದು ಮನೆಬಿಟ್ಟು ಹೋಗಿರುವ ಘಟನೆ ನಡೆದಿದೆ.

kalaburgi
kalaburgi
author img

By

Published : Jul 8, 2020, 2:26 AM IST

ಕಲಬುರಗಿ: ಬೇರೆಯವರ ಸೈಕಲ್ ತೆಗೆದುಕೊಂಡು ಬಂದು ಓಡಿಸಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ಬಾಲಕನೋರ್ವ ಮನೆಬಿಟ್ಟು ಹೋಗಿದ್ದು, ವಾರ ಕಳೆದ್ರೂ ಮರಳಿ ಬಾರದಿರುವ ಘಟನೆ ವಿಶ್ವ ವಿದ್ಯಾಲಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಲಸ್ಕರ್ (15) ಕಾಣೆಯಾದ ಬಾಲಕ. ಕೊಟನೂರ (ಡಿ) ಬಡಾವಣೆಯ ನಗರಿ ಅಪಾರ್ಟಮೆಂಟ್​ನಲ್ಲಿ ಪೊಷಕರೊಂದಿಗೆ ವಾಸವಿದ್ದ ಮಲ್ಲಿಕಾರ್ಜುನ, 8 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಕಳೆದ ತಿಂಗಳು ಜೂನ್ 30 ರಂದು ಸ್ನೇಹಿತನ ಸೈಕಲ್ ತಂದು ಓಡಿಸುವಾಗ ಬೇರೆಯವರ ಸೈಕಲ್ ತರಬೇಡ ಎಂದು ಪೊಷಕರು ಬೈದು ಬುದ್ಧಿವಾದ ಹೇಳಿದ್ದಾರೆ.ಇಷ್ಟಕ್ಕೆ ನೊಂದ ಬಾಲಕ ಸೈಕಲ್ ಕೊಟ್ಟು ಬರುವುದಾಗಿ ಹೇಳಿ ಅದೆ ಸೈಕಲ್ ಮೇಲೆ ಮನೆಯಿಂದ ಹೊರಟು ಹೋಗಿದ್ದಾನೆ. ಒಂದು ವಾರ ಕಳೆದರೂ ಇನ್ನೂವರೆಗೆ ಮನೆಗೆ ಬಂದಿಲ್ಲ. ಗಾಬರಿಯಾದ ಪೊಷಕರು ಸ್ನೇಹಿತರು, ಸಂಬಂಧಿಗಳ ಮನೆ ಸೇರಿ ಎಲ್ಲಡೆ ಹುಡುಕಾಡಿದ್ದು ಇಲ್ಲಿಯವರೆಗೆ ಪತ್ತೆಯಾಗಿಲ್ಲ.

ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣಿರಲ್ಲಿ ಮುಳುಗಿದೆ. ಇದೇ ವೇಳೆ ಬೈದಿದ್ದಕ್ಕೆ ತಪ್ಪು ತಿಳಿದುಕೊಳ್ಳಬೇಡ, ಎಲ್ಲಿದ್ದರೂ ಬೇಗ ಬಾ ಎಂದು ಮನವಿ ಮಾಡಿದ್ದಾರೆ.ಬಾಲಕ ನಾಪತ್ತೆಯಾಗಿರುವ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಾಲಕ ಕಂಡು ಬಂದರೆ ವಿವಿ ಠಾಣೆಗೆ ಅಥವಾ ಬಾಲಕನ ಸಂಬಂಧಿಯ ಮೊಬೈಲ್ ಸಂಖ್ಯೆ 8970698915 ಸಂಪರ್ಕಿಸಲು ಪೊಷಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.