ಕಲಬುರಗಿ: ಅನಾರೋಗ್ಯದ ಕಾರಣದಿಂದ ನಾನು ಪ್ರಚಾರಕ್ಕೆ ಬಂದಿಲ್ಲ. ನಾಳೆ ಇಂದ ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿದೆ. ನಾನು ವಿಚಾರಿಸಿದ್ದೇನೆ ಅನಾರೋಗ್ಯ ಹಿನ್ನೆಲೆ ನಾನು ಉಪಚುನಾವಣೆ ಭಾಗವಹಿಸಲು ಆಗಿರಲಿಲ್ಲ ನಾಳೆಯಿಂದ ಚಿಂಚೋಳಿ ತೆರಳಿ ಅವಿನಾಶ್ ಜಾಧವ್ ಪರ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದೆ ಈ ಸಂಧರ್ಭದಲ್ಲಿ ಮುಖ್ಯಮಂತ್ರಿ ರೆಸಾರ್ಟ್ ಸೇರಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಬಹುತೇಕ ಖಚಿತವಾಗಿದೆ. 23 ನಂತರ ಜಿಲ್ಲೆ ಸೇರಿದಂತೆ ರಾಜ್ಯದ ಭೂಕಂಪ ಆಗಲಿದೆ. ಫಲಿತಾಂಶದ ನಂತರ ರಾಜ್ಯದಲ್ಲಿ ಸರ್ಕಾರ ಬದಲಾಗೋದು ನಿಶ್ಚಿತ ಎಂದರು.
ಸೋತ ಪೈಲ್ವಾನರು ತೊಡೆತಟ್ಟುತ್ತಿದ್ದಾರೆ ಎಂಬ ಖರ್ಗೆ ಟೀಕೆಗೆ ಪ್ರತಿಕ್ರಿಯೆ ನೀಡದ ಮಾಲಿಕಯ್ಯಾ ?ಸೋತ ನಾಯಕರು ಸೋಲಿಸಲು ಹೊರಟಿದ್ದಾರೆ ಎಂಬುದಕ್ಕೆ ಮೇ23 ಕ್ಕೆ ಉತ್ತರ ಸಿಗಲಿದೆ. ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಆರೋಪಗಳಿಗೆ ಲೋಕಸಭಾ ಫಲಿತಾಂಶ ಉತ್ತರಕೊಡಲಿದೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿಯಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋ ಮಾನದಂಡ ಇಟ್ಟುಕೊಂಡು ಟಿಕೆಟ್ ನೀಡಿದ್ದಾರೆ. ಹಿಂದುಳಿದ ವರ್ಗದವರು ಯಾರೂ ಟಿಕೆಟ್ ಕೇಳಿರಲಿಲ್ಲ ಹೀಗಾಗಿ ಬಿಜೆಪಿ ನಾಯಕರು ಟಿಕೆಟ್ ಕೊಟ್ಟಿರಲಿಕ್ಕಿಲ್ಲ ಹಾಗೆಂದು ಹಿಂದುಳಿದ ವರ್ಗದವರು ಬಿಜೆಪಿಯಿಂದ ದೂರ ಸರಿದಿದ್ದಾರೆ ಎಂದರ್ಥವಲ್ಲ ಎಂದರು.