ETV Bharat / state

ಮಾಜಿ ಶಾಸಕ‌ ವಾಲ್ಮೀಕ ನಾಯಕ ಅಕಾಲಿಕ ನಿಧನ: ಒಡೆಯನಿಲ್ಲದ ಮನೆಯಂತಾದ ಚಿತ್ತಾಪುರ ಬಿಜೆಪಿ - ಕಾಂಗ್ರೆಸ್‍ನ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ

ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದಲ್ಲಿ ಏಕೈಕ ಕಮಲ ನಾಯಕರಾಗಿ ಗುರುತಿಸಿಕೊಂಡಿದ್ದ ದಿ.ವಾಲ್ಮೀಕ ನಾಯಕ, ಕಾಂಗ್ರೆಸ್‍ನ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳಿಂದ ಪರಭಾವಗೊಂಡಿದ್ದರು.

bjp-former-mla-valmika-nayaka
ಒಡೆಯನಿಲ್ಲದ ಮನೆಯಂತಾದ ಚಿತ್ತಾಪುರ ಬಿಜೆಪಿ
author img

By

Published : Mar 28, 2021, 11:01 PM IST

ಕಲಬುರಗಿ: ಬಿಜೆಪಿ ಪಕ್ಷವನ್ನು ಚಿತ್ತಾಪುರ ಕ್ಷೇತ್ರದಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದಂತಹ ಬಿಜೆಪಿಯ ಕಟ್ಟಾಳು, ಮಾಜಿ ಶಾಸಕ‌ ದಿ.ವಾಲ್ಮೀಕ ನಾಯಕ ಅವರ ಅಕಾಲಿಕ ನಿಧನದ ನಂತರ ಚಿತ್ತಾಪುರ ಬಿಜೆಪಿಗೆ ಯಾರು‌ ದಿಕ್ಕು ಎಂಬಂತಾಗಿದೆ.

ಒಡೆಯನಿಲ್ಲದ ಮನೆಯಂತಾದ ಚಿತ್ತಾಪುರ ಬಿಜೆಪಿ

ಬಿಜೆಪಿ ಹೈಕಮಾಂಡ್ ಸೇರಿದಂತೆ ರಾಜ್ಯ ನಾಯಕರಲ್ಲಿ ಚಿತ್ತಾಪುರ ಎಂದ ತಕ್ಷಣ ನೆನಪಾಗುತ್ತಿದ್ದದು ದಿವಂಗತ ಮಾಜಿ ಶಾಸಕ ವಾಲ್ಮೀಕ ನಾಯಕ. ಅವರ ಅಗಲಿಕೆಯ ನಂತರ ಕೇವಲ ಚಿತ್ತಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರವಲ್ಲ ರಾಜ್ಯ ಬಿಜೆಪಿ ನಾಯಕರಲ್ಲು ಸಹ ಚಿತ್ತಾಪುರಕ್ಕೆ ಮುಂದಿನ ನಾಯಕರು ಯಾರು..? ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ. ಚಿತ್ತಾಪುರದಲ್ಲಿ ಕಮಲ ಅರಳಿಸಲು ಕಾರಣೀಭೂತರಾದ ವಾಲ್ಮೀಕ ಅವರು ಇಲ್ಲ ಎಂಬುದು ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.

ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದಲ್ಲಿ ಏಕೈಕ ಕಮಲ ನಾಯಕರಾಗಿ ಗುರುತಿಸಿಕೊಂಡಿದ್ದ ದಿ.ವಾಲ್ಮೀಕ ನಾಯಕ, ಕಾಂಗ್ರೆಸ್‍ನ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳಿಂದ ಪರಭಾವಗೊಂಡಿದ್ದರು.

ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ನಡೆದ ಉಪಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತಮಗೆ ಸಿಕ್ಕ ಅಲ್ಪ ಅವಧಿಯಲ್ಲಿ ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿದ ವಾಲ್ಮೀಕ ನಾಯಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅದೇ ಪ್ರಿಯಾಂಕ ಖರ್ಗೆ ವಿರುದ್ದ ಸ್ಪರ್ಧಿಸಿ ಸೋಲುಂಡಿದ್ದರು.

ಸೋತ ನಂತರ ಎದೆಗುಂದದೆ ಕ್ಷೇತ್ರದ ಪ್ರತಿಧ್ವನಿಯಾಗಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದ ನಾಯಕ ಅವರು ಮತ್ತೊಮ್ಮೆ ಶಾಸಕರಾಗುವ ಕನಸ್ಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಎದೆಯಲ್ಲಿ ನಾಲ್ಕು ಸ್ಟಂಟ್ ಮತ್ತು ಎರಡೂ ಮೊಣಕಾಲುಗಳ ಶಸ್ತ್ರ ಚಿಕಿತ್ಸೆಯ ನಂತರವೂ ಅದೇ ಹುಮ್ಮಸ್ಸಿನಿಂದ ಕ್ಷೇತ್ರದ ಸುತ್ತಾಟದಲ್ಲಿರುವಾಗಲೇ ವಾಲ್ಮೀಕ ನಾಯಕ ಅವರು ವಿಧಿಯಾಟಕ್ಕೆ ಬಲಿಯಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ.

ಎಂತಹ ಕಷ್ಟ ಬಂದರು ಪಕ್ಷ ತೊರೆಯದ ನಿಷ್ಟಾವಂತ ನಾಯಕ:

ಬಿಜೆಪಿ ಎಂದರೆ ವಾಲ್ಮೀಕಿ ನಾಯಕ, ವಾಲ್ಮೀಕ ನಾಯಕ ಎಂದರೆ ಬಿಜೆಪಿ ಎನ್ನುವಷ್ಟರ ಮಟ್ಟಿಗೆ ಗುರುತಿಸಿಕೊಂಡಿದ್ದ ಅವರು ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಸ್ವತಃ ಯಡಿಯೂರಪ್ಪನವರೇ ಕೆಜೆಪಿಗೆ ಬನ್ನಿ ಎಂದು ಕರೆದಾಗಲು ನಾನು ಬಿಜೆಪಿ ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದರು.

ಒಟ್ಟಿನಲ್ಲಿ ಚಿತ್ತಾಪುರ ಬಿಜೆಪಿ ಪಾಳಯ ಒಡೆಯನಿಲ್ಲದ ಮನೆಯಂತಾಗಿರುವ ಚಿತ್ತಾಪುರ ಮೀಸಲು ಮತಕ್ಷೇತ್ರದ ಭಾಜಪದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.

ಪಕ್ಷ ಪುನಃ ಚೇತರಿಕೆ ಕಾಣಲು ಮತ್ತು ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬಲ್ಲ ಸಮರ್ಥ ನಾಯಕ ಯಾರು.‌? ಎಂಬುದು ಬಿಜೆಪಿ ಮಾತ್ರವಲ್ಲ ಚಿತ್ತಾಪುರ ಕ್ಷೇತ್ರದ ಜನರಿಗೂ ಉತ್ತರ ಸಿಗದ ಪ್ರಶ್ನೆಯಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.